Site icon Vistara News

ಲಂಚ-ಮಂಚದ ಖರ್ಗೆ ಹೇಳಿಕೆ ವಿಚಾರ: ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಿ ಎಂದ ಕೆ.ಜಿ ಬೋಪಯ್ಯ

ಖರ್ಗೆ ಹೇಳಿಕೆ ವಿಚಾರ

ಕೊಡಗು: ರಾಜ್ಯ, ಕೇಂದ್ರ ಬಿಜೆಪಿ ಸರ್ಕಾರ ಲಂಚ-ಮಂಚದ ಸರ್ಕಾರ ವಿಚಾರ ಎಂಬ ಕಾಂಗ್ರೆಸ್‌ ಶಾಸಕ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೊಪಯ್ಯ ʻʻಒಂದು ಸರ್ಕಾರದ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕುʼʼ ಎಂದು ತಿರುಗೇಟು ನೀಡಿದ್ದಾರೆ.

ಯಾವುದೇ ವಿಚಾರದ ಬಗ್ಗೆ ಟೀಕೆ ಮಾಡಿದರೆ ಅದು ಗುಣಾತ್ಮಕವಾಗಿರಬೇಕು. ಈ ರೀತಿ ಕೀಳು ಶಬ್ಧಗಳನ್ನು ಪ್ರಯೋಗ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಯುವಕರಿದ್ದಾರೆಂದು ಏನು ಬೇಕಾದರೂ ಹೇಳಿಕೆ ನೀಡುವುದು ಸರಿಯಲ್ಲ. ನಿಮ್ಮ ಕಟುಂಬದ ಘನತೆಗೆ ತಕ್ಕಂತ ಹೇಳಿಕೆ ಇದಲ್ಲ‌. ಯುವತಿಯರ ಬಗ್ಗೆ ಹೇಳಿರುವುದು ಹೆಣ್ಣು ಕುಲದ ಬಗ್ಗೆ ಅವಮಾನದ ಮಾಡಿದ ರೀತಿಯಾಗಿದೆ‌. ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಬಹಳ ಗೌರವ ಕೊಡುವ ಸಂಸ್ಕೃತಿ ಇದೆ. ಇದು ಮಹಿಳೆಯರಿಗೆ ಮಾಡಿದ ದೊಡ್ಡ ಅಪಮಾನ. ಆದ್ದರಿಂದ ಪ್ರಿಯಾಂಕ ಖರ್ಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕುʼ ಎಂದು ಮಡಿಕೇರಿಯಲ್ಲಿ ಕೆ.ಜಿ ಬೋಪಯ್ಯ ಒತ್ತಾಯಿಸಿದ್ದಾರೆ.

ಇದನ್ನೂ ಓದಿ | ಇದು ಲಂಚ, ಮಂಚದ ಸರಕಾರ ಎಂದ ಪ್ರಿಯಾಂಕ ಖರ್ಗೆ, ಏನಿದು ಗಂಭೀರ ಆರೋಪ

ಪ್ರಿಯಾಂಕ್‌ ಖರ್ಗೆ ಬಿಜೆಪಿ ಸರ್ಕಾರ ರಾಷ್ಟ್ರ ಧ್ವಜ ಮತ್ತು ದೇಶ ಭಕ್ತಿಯನ್ನೂ ಮಾರಾಟಕ್ಕಿಟ್ಟಿದೆ. ಲಂಚ-ಮಂಚದ ಸರ್ಕಾರ‌ ಇದಾಗಿದೆ. ಯುವಕರಿಗೆ ನೌಕರಿ ಬೇಕಂದರೆ ಲಂಚ ಕೊಡಬೇಕು. ಯುವತಿಯರಿಗೆ ನೌಕರಿ ಬೇಕಂದರೆ ಮಂಚ ಹತ್ತಬೇಕುʼʼ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ | ಗೃಹ ಸಚಿವರ ನಿವಾಸಕ್ಕೇ ರಕ್ಷಣೆಯಿಲ್ಲ ಎಂದಾದರೆ ಸಾಮಾನ್ಯ ಜನರ ಸ್ಥಿತಿ ಹೇಗೆ?: ಶಾಸಕ ಪ್ರಿಯಾಂಕ್ ಖರ್ಗೆ

Exit mobile version