ಬೆಂಗಳೂರು: ಸಿಎಂ ನೇತೃತ್ವದಲ್ಲಿ ಹಾಲು ಮಹಾಮಂಡಳದ ಸಭೆ ಇಂದು ಸಂಜೆ ನಡೆಯಲಿದ್ದು, ಹಾಲಿನ ದರ ಏರಿಕೆ (Milk Price Hike) ಕುರಿತು ಇಂದು ನಿರ್ಧಾರವಾಗಲಿದೆ. ಕೆಎಂಎಫ್ ಪ್ರಸ್ತಾವನೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಗ್ರೀನ್ ಸಿಗ್ನಲ್ ನೀಡ್ತಾರಾ ಎಂಬ ಕುತೂಹಲ ಮೂಡಿದೆ.
ಹಾಲಿನ ದರ ಏರಿಕೆ ಬಗ್ಗೆ ಇಂದು ಸಿಎಂ ಅವರನ್ನು ಹಾಲು ಮಹಾಮಂಡಳಿ ಮುಖ್ಯಸ್ಥರು ಭೇಟಿಯಾಗಲಿದ್ದಾರೆ. ಜುಲೈ 5ರಂದು ಕೆಎಂಎಫ್ ಬೋರ್ಡ್ ಮೀಟಿಂಗಿನಲ್ಲಿ ಹಾಲಿನ ದರ ಏರಿಕೆಗೆ ಒಮ್ಮತದ ಒಪ್ಪಿಗೆ ದೊರೆತಿತ್ತು. ಪ್ರತಿ ಲೀಟರ್‌ಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ಒಕ್ಕೂಟಗಳಿಂದ ಕೆಎಂಎಫ್‌ಗೆ ಮನವಿ ಮಾಡಲಾಗಿತ್ತು. ಹೀಗಾಗಿ ಉತ್ಪಾದಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದರ ಏರಿಕೆಗೆ ಕೆಎಂಎಫ್ ಬೋರ್ಡ್ ಸಮ್ಮತಿ ನೀಡಿತ್ತು.
ಈ ಬಗ್ಗೆ ಸಿಎಂ ಜೊತೆ ಸಭೆ ನಡೆಸಲು ಕೆಎಂಎಫ್ ಸಮಯ ಕೇಳಿಕೊಂಡಿತ್ತು. ಹೀಗಾಗಿ ಹಾಲಿನ ದರ ಏರಿಕೆ ಸಂಬಂಧ ಇಂದು ಕೆಎಂಎಫ್ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಇಂದು ಸಂಜೆ 6ಕ್ಕೆ ಸಿಎಂ ಸಭೆ ಕರೆದಿದ್ದಾರೆ. ಸಭೆಯಲ್ಲಿ ಹಾಲಿನ ದರ ಏರಿಕೆ ಪ್ರಸ್ತಾವನೆ ಬಗ್ಗೆ ಸಿಎಂ ಜತೆ ಚರ್ಚೆ ನಡೆಯಲಿದ್ದು, ಸಭೆಯಲ್ಲಿ ಸಾಧಕಬಾಧಕಗಳನ್ನು ಚರ್ಚೆ ಮಾಡಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. 2ರಿಂದ 3 ರೂಪಾಯಿಗಳಷ್ಟು ದರ ಏರಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.
ಉತ್ಪಾದಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಪರಿಷ್ಕರಣೆ ಮಾಡಬೇಕಿದೆ. ರೈತರಿಗೂ ಪ್ರೋತ್ಸಾಹ ಧನ ಹೆಚ್ಚಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ, ಜತೆಗೆ ಗ್ರಾಹಕರಿಗೂ ಹೊರೆಯಾಗದಂತೆ ಹಾಲಿನ ದರ ಏರಿಕೆ ಸಾಧ್ಯತೆ ಇದೆ.
ಇದನ್ನೂ ಓದಿ: Nandini Milk: ನಂದಿನಿ ಹಾಲಿನ ದರ ಹೆಚ್ಚಳ ಅನಿವಾರ್ಯ: ಸಚಿವ ಕೆ. ವೆಂಕಟೇಶ್ ಉತ್ತರ