ಮಡಿಕೇರಿ: ಕೊಡಗು ಜಿಲ್ಲೆ (Kodagu News) ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಚೆಟ್ಟಳ್ಳಿ ರಸ್ತೆಯಲ್ಲಿರುವ ಯಂಕನ ದೇವರಾಜು ಎಂಬುವವರ ಗದ್ದೆಯಲ್ಲಿ ನವಜಾತ ಶಿಶುವಿನ (Newly born Child) ಮೃತದೇಹ ಮಣ್ಣಿನೊಳಗೆ ಪತ್ತೆಯಾಗಿದೆ (Child Burried). ಈ ಶವವನ್ನು ಮಣ್ಣಿನಲ್ಲಿ ಹೂತು ಹಾಕಿದ್ದು ಯಾರು? ಯಾಕಾಗಿ ಹೂತು ಹಾಕಿದರು ಎಂಬ ಪ್ರಶ್ನೆಗಳು ಎದ್ದಿವೆ.
ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಗದ್ದೆಯಲ್ಲಿ ಯಾರೋ ಗುಂಡಿ ಅಗೆದು ಹಾಕುತ್ತಿರುವುದನ್ನು ಸ್ಥಳೀಯರು ನೋಡಿಧ್ದರೂ ಸತ್ತ ಪ್ರಾಣಿಗಳ ಮೃತದೇಹವನ್ನು ಹೂಳಿರಬಹುದು ಎಂದು ಭಾವಿಸಿದ್ದರು.
ಆದರೂ ಸಂಜೆ ವೇಳೆಗೆ ಸ್ಥಳೀಯರಲ್ಲಿ ಸಂಶಯ ಮೂಡಿ ಆ ಸ್ಥಳದ ಮಣ್ಣನ್ನು ತೆಗೆದು ನೋಡಿದಾಗ ಇಂದೇ ಜನಿಸಿದ ಮಗುವಿನ ಮೃತದೇಹ ಕಂಡುಬಂದಿದೆ.
ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಮಗುವಿನ ಸಾವಿನ ಬಗ್ಗೆ ನಿಖರವಾದ ಮಾಹಿತಿ ಸಿಕ್ಕದ ಹಿನ್ನಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರದ ಬಳಿಕ ಮಗಳ ಕೊಲೆ; ಈಗ ಆಕೆಯ ತಂದೆಯೂ ನೇಣಿಗೆ ಶರಣು
ಕುಶಾಲನಗರದಲ್ಲಿ ಕಾವೇರಿ ನದಿಯಲ್ಲಿ ಮುಳುಗಿ ಮೂವರು ಯುವಕರ ದುರ್ಮರಣ
ಮಡಿಕೇರಿ: ಕೊಡಗಿನಲ್ಲಿ ಭೀಕರ ಜಲ ದುರಂತವೊಂದು (Water Tragedy) ಸಂಭವಿಸಿದೆ. ಕಾವೇರಿ ನದಿಯಲ್ಲಿ (Drowned in River Cauvery) ಮುಳುಗಿ ಮೂವರು ಯುವಕರು ಮೃತಪಟ್ಟಿದ್ದಾರೆ (Three youngsters dead). ಕೊಡಗು ಜಿಲ್ಲೆ (Kodagu News) ಕುಶಾಲ ನಗರ ಸಮೀಪದ ಕೂಡಿಗೆಯಲ್ಲಿ ಈ ದುರಂತ ಸಂಭವಿಸಿದೆ.
ಕುಶಾಲ ನಗರದ ಕೂಡಿಗೆಯಲ್ಲಿ ಕಾವೇರಿ ನದಿಗೆ ಈಜಲು ತೆರಳಿದ್ದ ಮೂವರು ಯುವಕರಾದ ವಿನೋದ್, ಸಚಿನ್, ಶ್ರೀನಿವಾಸ್ ಎಂಬ ಯುವಕರು ಮೃತಪಟ್ಟಿದ್ದಾರೆ.
ಈ ಮೂವರು ಯುವಕರು ಮುಳ್ಳುಸೋಗೆ, ಚಿಕ್ಕತ್ತೂರು, ಹೆಬ್ಬಾಲೆ ಮೂಲದದವರು ಎಂದು ತಿಳಿದುಬಂದಿದೆ. ಜತೆಯಾಗಿ ಈಜಲು ತೆರಳಿದ್ದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ಇದೆ.
ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಬಾರೆಯ ರ‍್ಯಾಫ್ಟಿಂಗ್ ಸಿಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ನಾಪತ್ತೆಯಾದವರ ಹುಡುಕಾಟ ನಡೆಸುತ್ತಿದ್ದಾರೆ. ಯುವಕರು ಒಂದೇ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಕಾರು ನದಿಯ ಬದಿಯಲ್ಲಿ ನಿಂತಿದೆ.