ಕೊಡಗು : ವಿರಾಜಪೇಟೆ ಹೊರವಲಯದ ಕುಟ್ಟಂದಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ (Electric Shock) ಲೈನ್ ಮ್ಯಾನ್ (Line Man) ಮೃತಪಟ್ಟಿದ್ದಾರೆ. ವಿರಾಜಪೇಟೆ ಚೆಸ್ಕಾಂ ಸಿಬ್ಬಂದಿ ಬಸವರಾಜ್ ತೆಗ್ಗಿ (26) ಮೃತ ದುರ್ದೈವಿ.
ಮೂಲತಃ ಬಾಗಲಕೋಟೆ ಜಿಲ್ಲೆಯ ಮಾರ್ನಾಲು ನಿವಾಸಿ ಬಸವರಾಜ್ ಕಳೆದ 5 ವರ್ಷಗಳಿಂದ ವಿರಾಜಪೇಟೆ ಚೆಸ್ಕಾಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಭಾನುವಾರ ಬೆಳಗ್ಗೆ ಕುಟ್ಟಂದಿ ಗ್ರಾಮದಲ್ಲಿ ಮನೆಯೊಂದರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಈ ದುರ್ಘಟನೆ ನಡೆದಿದೆ.
ಕರೆಂಟ್ ಶಾಕ್‌ನಿಂದಾಗಿ ಬಸವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಇಬ್ಬರ ಜೀವ ತೆಗೆದ ನಾಯಿ! ಕಾರು ಪಲ್ಟಿಯಾಗಿ ಶಿಕ್ಷಕ ಸಾವು, ಲಾರಿ ಹರಿದು ಮಹಿಳೆ ಮೃತ್ಯು
ವಿಜಯನಗರ/ದೊಡ್ಡಬಳ್ಳಾಪುರ: ರಾಜ್ಯದ ಎರಡು ಕಡೆ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ಇಬ್ಬರು ಮೃತಪಟ್ಟಿದ್ದಾರೆ. ಈ ಎರಡೂ ಅಪಘಾತಕ್ಕೆ “ನಾಯಿ” ಕಾರಣವಾಗಿದೆ. ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದ ಪರಿಣಾಮವೇ ಈ ಅವಘಡಗಳು ಸಂಭವಿಸಿದ್ದು, ಇಬ್ಬರ ಜೀವವನ್ನು (Two persons Killed) ತೆಗೆದಿದೆ!
ವಿಜಯನಗರ ಜಿಲ್ಲೆಯ ಉಜ್ಜಯಿನಿಯ ಪ್ರಾಥಮಿಕ ಆರೋಗ್ಯ ಕೇಂದ್ರದ (Ujjain Primary Health Centre) ಮುಂಭಾಗ ಕಾರು ಪಲ್ಟಿಯಾಗಿ (Car Accident) ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಭಾನುವಾರ (ಸೆಪ್ಟೆಂಬರ್ 10) ನಡೆದಿದೆ. ಕಾರಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಗುಂಡಿಗೆ ಕಾರು ಉರುಳಿದೆ ಎಂದು ಹೇಳಲಾಗಿದೆ. ಕಾರಿನಲ್ಲಿದ್ದ ಉಳಿದಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಕಾಶ್ ಎಂಬ ಶಿಕ್ಷಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೊಟ್ಟೂರಿನ ಕೊಟ್ಟೂರೇಶ್ವರ ಶಾಲೆಯಲ್ಲಿ (Kottureshwara School) ಪ್ರಕಾಶ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಿಂದ ಕೊಟ್ಟೂರು ತಾಲೂಕಿಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: Basavaraja Bommai : ನೋ ವೇ, ಚಾನ್ಸೇ ಇಲ್ಲ; ಲೋಕಸಭೆಗೆ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದ ಬಸವರಾಜ ಬೊಮ್ಮಾಯಿ
ಇವರು ತಮ್ಮ ತಂದೆ ತಾಯಿಯನ್ನು ಕರೆದುಕೊಂಡು ಬರುವಾಗ ಅಪಘಾತವಾಗಿದೆ. ಶಿಕ್ಷಕರಿಗೆ ಸಂಬಂಧಪಟ್ಟಂತೆ ಸೋಮವಾರ ಕೊಟ್ಟೂರಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ನೆನಪಿನ ಕಾಣಿಕೆಯನ್ನು ಈ ವೇಳೆ ಪ್ರಕಾಶ್ ತರುತ್ತಿದ್ದರು. ಅಲ್ಲದೆ, ಈ ಕಾರ್ಯಕ್ರಮಕ್ಕಾಗಿ ಪೋಷಕರನ್ನು ಕರೆತರಲು ಹೋಗಿದ್ದರು ಎನ್ನಲಾಗಿದೆ.
ಪ್ರಕಾಶ್ ಅವರೇ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಕಾರು ವೇಗವಾಗಿತ್ತು ಎನ್ನಲಾಗಿದೆ. ಅಲ್ಲದೆ, ಕಾರಿಗೆ ನಾಯಿಯೊಂದು ಅಡ್ಡಲಾಗಿ ಬಂದಿದೆ. ಅದನ್ನು ತಪ್ಪಿಸಲು ಹೋದಾಗ ಪಕ್ಕದಲ್ಲಿದ್ದ ಗುಂಡಿಗೆ ಕಾರು ಉರುಳಿದೆ. ಕಾರಿನಲ್ಲಿದ್ದ ಪ್ರಕಾಶ್ ತಂದೆ – ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಪಲ್ಟಿ ಆಗಿದ್ದರಿಂದ ಕಾರ್ಯಕ್ರಮಕ್ಕೆಂದು ತಂದಿದ್ದ ನೆನಪಿನ ಕಾಣಿಕೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಕೊಟ್ಟೂರಿನ ಶಿಕ್ಷಕರ ಸಂಘದಲ್ಲಿ ನೀರವ ಮೌನ ಆವರಿಸಿದೆ. ಉಜ್ಜಯಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಯಿ ತಪ್ಪಿಸಲು ಹೋಗಿ ಬಲಿಯಾದ ಮಹಿಳೆ
ದೊಡ್ಡಬಳ್ಳಾಪುರ: ಬೈಕ್‌ಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ಕೊಂಗಾಡಿಯಪ್ಪ ಕಾಲೇಜು ಬಳಿ ಘಟನೆ ನಡೆದಿದೆ.
ದ್ವಿಚಕ್ರದಲ್ಲಿ ಹೋಗುವಾಗ ಏಕಾಏಕಿ ನಾಯಿ ರಸ್ತೆಗೆ ನುಗ್ಗಿ ಅಡ್ಡ ಬಂದಿದೆ. ನಾಯಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಮಹಿಳೆ ಮೇಲೆ ಹಿಂದಿನಿಂದ ಬಂದ ಲಾರಿ ಹರಿದಿದೆ. ನಂದಿನಿ (28) ಮೃತ ಮಹಿಳೆ. ಕೆಳಗೆ ಬಿದ್ದ ದ್ವಿಚಕ್ರ ವಾಹನ ಸಮೇತ ಮಹಿಳೆಯನ್ನು ಲಾರಿ ಎಳೆದುಕೊಂಡು ಹೋಗಿದೆ.
ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನದಲ್ಲಿ ನಂದಿನಿ ಮತ್ತು ಅವರ ಮಗು ತೆರಳುತ್ತಿದ್ದರು. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಮಹಿಳೆ ಸಾವಿಗೀಡಾದರು. ಕೂಡಲೇ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತಾದರೂ ಬದುಕುಳಿಯಲಿಲ್ಲ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ