ಮಡಿಕೇರಿ: ಮಡಿಕೇರಿಯ ಕೇಂದ್ರ ಭಾಗದಲ್ಲಿರುವ ಜನರಲ್ ತಿಮ್ಮಯ್ಯ (General Thimmaiah) ಪ್ರತಿಮೆಗೆ KSRTC ಬಸ್ ಒಂದು ಡಿಕ್ಕಿಯಾಗಿದ್ದು, ಪ್ರತಿಮೆ ಉರುಳಿ ಬಿದ್ದಿದೆ.
ಚಾಲಕನ ನಿಯಂತ್ರಣ ತಪ್ಪಿ ಬಸ್ ಪ್ರತಿಮೆಗೆ ಡಿಕ್ಕಿಯಾಗಿದೆ. ಅಡ್ಡ ಬಂದ ಪಿಕಪ್ ವಾಹನವೊಂದನ್ನು ತಪ್ಪಿಸಲು ಹೋಗಿ ಬಸ್ ಡಿಕ್ಕಿಯಾಗಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ವೀರ ಸೇನಾನಿಯ ಪ್ರತಿಮೆ ನೆಲಕ್ಕೆ ಬಿದ್ದಿದೆ.
ಮಡಿಕೇರಿ ಡಿಪೋದಿಂದ ಬಸ್ ಸ್ಟ್ಯಾಂಡ್ ಕಡೆಗೆ ಹೊರಟಿದ್ದ ಬಸ್, ಪಿಕಪ್ ವಾಹನ ತಪ್ಪಿಸಲು ಹೋಗಿ ಹೀಗಾಗಿದೆ. ಸಣ್ಣ ಪುಟ್ಟಗಾಯಗಳಿಂದ ಚಾಲಕ ಹಾಗೂ ನಿರ್ವಾಹಕ ಪಾರಾಗಿದ್ದಾರೆ. ಬಸ್ಸಿನಲ್ಲಿ ಬೇರೆ ಪ್ರಯಾಣಿಕರು ಇರಲಿಲ್ಲ. ಮಡಿಕೇರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಗಾಂಧಿ ಪ್ರತಿಮೆಗೆ ಹಾನಿ
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿ (Mahatma gandhi) ವೃತ್ತದಲ್ಲಿದ್ದ ಗಾಂಧಿ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಎಸಗಿದ್ದಾರೆ. ಇಬ್ಬರು ಕಿಡಿಗೇಡಿಗಳಿಂದ ಕೃತ್ಯ ನಡೆದಿರುವುದು ಸಿಸಿಟಿವಿ ಪರಿಶೀಲಿಸಿದಾಗ ಕಂಡುಬಂದಿದೆ.
ಮಧ್ಯರಾತ್ರಿ 2.05ಕ್ಕೆ ಈ ಅಕೃತ್ಯ ನಡೆದಿದ್ದು, ಕಿಡಿಗೇಡಿಗಳ ಕೃತ್ಯ ಸಿಸಿಟವಿ ಫೂಟೇಜ್‌ನಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಬೈಕ್‌ನಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಇಬ್ಬರಿಂದ ಕೃತ್ಯ ನಡೆದಿದೆ. ಹಿಂಬದಿ ಸವಾರ ಬೈಕ್‌ನಿಂದ ಇಳಿದು ಪ್ರತಿಮೆ ದೂಡಿ ಹಾನಿ ಮಾಡಿದ್ದು, ನಂತರ ಅದೇ ಬೈಕ್‌ನಲ್ಲಿ ಇಬ್ಬರೂ ಪರಾರಿಯಾಗಿದ್ದಾರೆ.