Site icon Vistara News

ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಅಪಘಾತ: ಉರುಳಿ ಬಿದ್ದ ಕಂಟೈನರ್‌

ಕಂಟೈನರ್

ಕೊಡುಗು: ಭಾರಿ ಮಳೆಯಿಂದಾಗಿ ಮಡಿಕೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ 275 ಸಿಂಕೋನ ಬಳಿ ಕಂಟೈನರ್ ಬಿದ್ದು ಅಪಘಾತ ಸಂಭವಿಸಿದೆ. ಮಳೆಗೆ ಸ್ಕಿಡ್ ಆಗಿ, ದಟ್ಟ ಮಂಜಿನಿಂದ ದಾರಿ‌ ಕಾಣದೆ ಅಪಘಾತ ಸಂಭವಿಸಿದೆ. ಚಾಲಕ ಗಂಭೀರವಾಗಿ ಗಾಯಗೊಂಡು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ | ರಸ್ತೆ ಅಪಘಾತ: ಹೆಲ್ಮೆಟ್ ಧರಿಸದ ಸಿಆರ್‌ಪಿಎಫ್ ಯೋಧ ಸಾವು

ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಕಂಟೈನರ್‌ನಿಂದ ರಸ್ತೆ ಸಂಪೂರ್ಣ ಬಂದ್‌ ಆಗಿದ್ದು, ಮಡಿಕೇರಿ ಮೈಸೂರು ರಸ್ತೆ ಕೂಡ ಬಂದ್‌ ಆಗಿದೆ. ಇದರಿಂದಾಗಿ ನಾಲ್ಕೈದು ಕಿಲೋಮೀಟರ್ ಸಂಪೂರ್ಣ ದೂರದವರೆಗೆ ಟ್ರಾಫಿಕ್ ಜಾಮ್ ಆಗಿದೆ. ಇದರ ಪರಿಣಾಮ ಶಾಲಾ ಕಾಲೇಜಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳ ಪರದಾಟ ಪಡುವಂತಾಗಿದೆ.

ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಂಟೈನರ್ ತೆರವಿಗೆ ಮುಂದಾದ ಪೊಲೀಸರಿಗೆ ಮಳೆ ಅಡ್ಡಿ ಬಂತು.

ಇದನ್ನೂ ಓದಿ | ರಾಮನಗರದಲ್ಲಿ ಭೀಕರ ಅಪಘಾತಕ್ಕೆ ಉಡುಪಿಯ ಮೂವರ ಸಾವು

Exit mobile version