Site icon Vistara News

KM Cariappa College : ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 5ನೇ ಬಾರಿ ಸ್ಥಾನ ಪಡೆದ ಡಾ.ಜೆ.ಜಿ.ಮಂಜುನಾಥ

Dr JG Manjunatha has been ranked among the world's top scientists for the fifth time in a row

ಕೊಡಗು: ಯು.ಎಸ್.ಎ.ಯ ಸ್ಟ್ಯಾನ್‌ಫೋರ್ಡ್ ವಿ.ವಿ. ಮತ್ತು ಎಲ್ಸ್ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಜೆ.ಜಿ.ಮಂಜುನಾಥ (Dr JG Manjunatha) ಅವರು ಸತತ 5ನೇ ಬಾರಿ ಸ್ಥಾನ ಪಡೆದಿದ್ದಾರೆ.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೆ.ಜಿ.ಮಂಜುನಾಥ ಅವರು “Analytical Chemistry and Energy” ವಿಷಯಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳ ಆಧಾರದ ಮೇಲೆ ಇವರು 2024ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 8257ನೇ ಸ್ಥಾನವನ್ನು ಮತ್ತು ವಿಶ್ವದ ವೃತ್ತಿಜೀವಮಾನ ಸಾಧಕರ ಪಟ್ಟಿಯಲ್ಲಿ 65119ನೇ ಸ್ಥಾನವನ್ನು ಪಡೆದಿದ್ದಾರೆ (ಸಂಯೋಜಿತ ಅಂಕಗಳ ಆಧಾರದ ಮೇಲೆ ಶ್ರೇಣಿ).

ಇವರು 194 ಅಂತರಾಷ್ಟ್ರೀಯ ಲೇಖನಗಳನ್ನು ಅತ್ಯಂತ ಪ್ರತಿಷ್ಟಿತ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದು, 25 ಪುಸ್ತಕಗಳನ್ನು ಹೊರ ತಂದಿದ್ದಾರೆ. 27 ಜರ್ನಲ್‌ಗಳಲ್ಲಿ ಎಡಿಟೋರಿಯಲ್ ಬೋರ್ಡ್ಮೆಂಬರ್ ಆಗಿಯೂ ಹಾಗೂ Sensing technology (Taylor and francis) ಜರ್ನಲ್‌ನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ.

Dr JG Manjunatha has been ranked among the world's top scientists for the fifth time in a row

ಇವರ ಈ ಸಾಧನೆಯೂ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜ್ ಗೆ ಹೆಮ್ಮೆ ತಂದಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಮತ್ತು ಕೊಡಗು ವಿಶ್ವವಿದ್ಯಾಲಯದ ಕುಲಪತಿಯವರು, ಕುಲಸಚಿವರು, ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version