Site icon Vistara News

Lokayukta Raid : ಕೊಡಗಿನ ಅಪರ ಜಿಲ್ಲಾಧಿಕಾರಿ ಕೈಲಿ 52 ಎಕರೆ ಆಸ್ತಿ, 4 ಸೈಟು; ಮನೆಯಲ್ಲೇ ಸಿಕ್ತು 23 ಲಕ್ಷ ನಗದು!

Lokayukta raid on Kodagu ADC Nanjundegowda

ಮಡಿಕೇರಿ: ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ದಾಳಿಗೆ (Lokayukta raid) ಒಳಗಾಗಿದ್ದಾರೆ. ಅವರಲ್ಲಿ ಒಬ್ಬರು ನೀರಾವರಿ ನಿಗಮದಲ್ಲಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಆಗಿರುವ ಹಾರಂಗಿ ಡ್ಯಾಂ ಅಧೀಕ್ಷಕ ರಘುಪತಿ ಮತ್ತು ಇನ್ನೊಬ್ಬರು ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿ (Kodagu Additional deputy Commissioner) ನಂಜುಂಡೇಗೌಡ.

ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ಮಡಿಕೇರಿಯಲ್ಲಿರುವ ನಂಜುಂಡೇಗೌಡ ಅವರ ನಿವಾಸ ಮೇಲೆ ದಾಳಿ ಮಾಡಲಾಗಿದೆ. ಮೂವರು ಇನ್ಸ್‌ಪೆಕ್ಟರ್ ಮತ್ತು 10ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಶೋಧ ಕಾರ್ಯ ನಡೆದಿದೆ. ಕೊಡಗು ಮತ್ತು ಮೈಸೂರು ಜಿಲ್ಲೆ ಲೋಕಾಯುಕ್ತ ಪೊಲೀಸರ ಜಂಟಿ ಕಾರ್ಯಾಚರಣೆ ಇದಾಗಿದೆ.

23 ಲಕ್ಷ ರೂ. ನಗದು ಪತ್ತೆ, 52 ಎಕರೆ ಆಸ್ತಿ!

ಮಡಿಕೇರಿಯಲ್ಲಿರುವ ನಂಜುಂಡೇಗೌಡರ ಕ್ವಾಟ್ರಸ್ ಮೇಲೆ ದಾಳಿ ನಡೆಸಿ ಶೋಧ ನಡೆಸಿದಾಗ 23 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಇದರ ಜತೆಗೆ 385 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಚಿನ್ನ, ಬೆಳ್ಳಿ ಆಭರಣಗಳ ಮೌಲ್ಯ ನಿರ್ಣಯಕ್ಕೆ ಅಕ್ಕಸಾಲಿಗರನ್ನು ಕರೆಸಲಾಗಿದೆ. ಪತ್ತೆಯಾದ ಚಿನ್ನಾಭರಣಗಳ ಒಟ್ಟು ಮೌಲ್ಯ 22 ಲಕ್ಷ ರೂ.ಗಳು.

ನಂಜುಂಡೇಗೌಡರ ಕೈಯಲ್ಲಿರುವ ಒಟ್ಟು ಸ್ಥಿರಾಸ್ತಿ ಸುಮಾರು 52 ಎಕರೆ! ಅವರ ಹೆಸರಲ್ಲಿ ನಾಲ್ಕು ನಿವೇಶನ, ಎರಡು ಮನೆಗಳಿವೆ.

ನಂಜುಂಡೇಗೌಡ ಒಟ್ಟು ಆಸ್ತಿ ಮೌಲ್ಯ 3.53 ಕೋಟಿ ರೂ.

  1. ನಂಜುಂಡೇಗೌಡರ ಒಟ್ಟು ಆಸ್ತಿ ಮೌಲ್ಯ: 3,53,43,518 ರೂ.
  2. ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ 1 ನಿವೇಶನ
  3. ಭಾಗಮಂಡಲದಲ್ಲಿ 6.80 ಎಕರೆ ಜಾಗ
  4. ಮೈಸೂರು ಜಿಲ್ಲೆಯ ಕೊಳ್ಳೆಗಾಲದಲ್ಲಿ 23 ಎಕರೆ ಜಾಗ
  5. ಪಿರಿಯಾಪಟ್ಟಣದಲ್ಲಿ 19.5 ಎಕರೆ ಜಾಗ ಹಾಗೂ ಒಂದು ಮನೆ
  6. ಮೈಸೂರಿನಲ್ಲಿ ಎರಡು ನಿವೇಶನ, 1.9 ಎಕರೆ ಜಾಗ ಖರೀದಿ
  7. ನಿವೇಶನ ಹಾಗೂ ಜಾಗದ ಒಟ್ಟು ಮೌಲ್ಯ 2 ಕೋಟಿ 55 ಲಕ್ಷ
  8. 23 ಲಕ್ಷ ನಗದು, ಫಿಕ್ಸೆಡ್‌ ಡೆಪಾಸಿಟ್ 35 ಲಕ್ಷ
  9. ಬ್ಯಾಂಕ್ ಖಾತೆಯಲ್ಲಿ 4 ಲಕ್ಷ, ಹಾಗೂ 5 ಲಕ್ಷ ಮೌಲ್ಯದ ಕಾರು.
  10. 22 ಲಕ್ಷ ಮೌಲ್ಯದ ಚಿನ್ನಾಭರಣಗಳು

ಮಾವ, ಬಾಮೈದನ ಮನೆಗೂ ಲಗ್ಗೆ ಇಟ್ಟ ಅಧಿಕಾರಿಗಳು

ನಂಜುಂಡೇಗೌಡರ ಮನೆಯಲ್ಲಿ ಪತ್ತೆಯಾಗಿರುವ ಹಣದಲ್ಲಿ ಐದು ಲಕ್ಷ ರೂ. ಬುಧವಾರ ಸಂಜೆ ಬಾಮೈದ ತಂದು ಇಟ್ಟಿದ್ದು ಎಂದು ತಿಳಿಸಲಾಗಿದೆ. ಪೊಲೀಸರು ಆ ಬಳಿಕ ಪಿರಿಯಾಪಟ್ಟಣ ತಾಲೂಕಿನ ಮಾಕನಳ್ಳಿಯಲ್ಲಿರುವ ನಂಜುಂಡೇಗೌಡರ ಮಾವನ ಮನೆ, ಮೈಸೂರಿನಲ್ಲಿರುವ ಬಾಮೈದನ ಮನೆಯಲ್ಲೂ ಶೋಧ ನಡೆಸಿದರು.

ಇದನ್ನೂ ಓದಿ: Lokayukta raid : ಗಂಡ-ಹೆಂಡ್ತಿ ಇಬ್ಬರೂ ಎಂಜಿನಿಯರ್;‌ ಮನೆಯಲ್ಲಿ ಸಿಕ್ಕಿದ್ದು1 ಕೆಜಿ ಚಿನ್ನ, 15 ಲಕ್ಷ ರೂ. ನಗದು

ನಂಜುಂಡೇಗೌಡರು ಮಡಿಕೇರಿ ಎಡಿಸಿಯಾಗಿ ಬರುವ ಮೊದಲು ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಸ್ತಿ‌ ಖರೀದಿ ಮಾಡಿದ್ದರು ಎನ್ನಲಾಗಿದೆ. ಕೆಲಸ ಮಾಡಿದ ಎಲ್ಲಾ ಜಿಲ್ಲೆಗಳಲ್ಲಿ ಭೂಮಿ ಹೊಂದಿರುವ ನಂಜುಂಡೇಗೌಡರು ಒಟ್ಟಾರೆ ಸ್ಥಿರಾಸ್ತಿ 80 ಎಕರೆಗಿಂತಲೂ ಹೆಚ್ಚು. ಆದರೆ, ಇದೆಲ್ಲವೂ ಇವರ ಹೆಸರಿನಲ್ಲಿಲ್ಲ. ಬದಲಾಗಿ ಬೇನಾಮಿ ಹೆಸರಿನಲ್ಲಿವೆ ಎನ್ನಲಾಗಿದೆ. ಅವರಿಗೆ ಕೊಡಗು, ಮೈಸೂರು, ಪಿರಿಯಾಪಟ್ಟಣ ಸೇರಿದಂತೆ ಹಲವು ಕಡೆ ಭೂಮಿ‌ ಇದೆ ಎನ್ನಲಾಗಿದೆ.

ನಂಜುಂಡೇಗೌಡರ ಮೇಲಿನ ದಾಳಿಯಲ್ಲಿ ಸಿಕ್ಕ ಆಸ್ತಿಪಾಸ್ತಿ ಮೌಲ್ಯ ವರ್ಗೀಕರಣ

ಲೋಕಾಯುಕ್ತ ಅಧಿಕಾರಿಗಳೂ ಲೆಕ್ಕ ಹಾಕಿದಂತೆ

ಒಟ್ಟು 2 ಕೋಟಿ 55 ಲಕ್ಷ

ಒಟ್ಟು- 98,43,518

ಎಲ್ಲಾ‌ಸೇರಿ ಒಟ್ಟು ಮೌಲ್ಯ- 3,53,43,518

Exit mobile version