Site icon Vistara News

ಕೊಡಗಿನ ಗಡಿಭಾಗದಲ್ಲಿ ಟೊಮ್ಯಾಟೊ ಫ್ಲೂ : ಆರೋಗ್ಯ ಇಲಾಖೆ ಹದ್ದಿನ ಕಣ್ಣು

ಟೊಮ್ಯಾಟೊ ಫ್ಲೂ

ಮಡಿಕೇರಿ : ಕೇರಳ‌ ರಾಜ್ಯದಲ್ಲಿ ಹೆಚ್ಚಾದ ಟೊಮ್ಯಾಟೊ ಫ್ಲೂ ರೋಗದಿಂದಾಗಿ ಮೂರು‌ ಗಡಿಭಾಗದಲ್ಲೂ ಆರೋಗ್ಯ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಟೊಮ್ಯಾಟೊ ಜ್ವರದ ಪ್ರಕರಣಗಳು ಕೇರಳ ರಾಜ್ಯದ ಅರ್ಯಂಕಾರು, ಅಂಚಲ್ ಹಾಗೂ ನೆಡುವತೂರ್ ನಲ್ಲಿ ಕಂಡುಬಂದಿದ್ದು, 5 ವರ್ಷ ವಯಸ್ಸಿನೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಈ ರೋಗ ಕಂಡು ಬರುತ್ತಿದೆ.

ಚರ್ಮದ ತುರಿಕೆ, ಕೆಂಪಾಗುವುದು, ನೀರಡಿಕೆ ಮೊದಲಾದ ಲಕ್ಷಣಗಳನ್ನು ಹೊಂದಿದ್ದು, ತೀವ್ರ ಜ್ವರ, ಮೈ ಕೈ ನೋವು, ಕೀಲು ನೋವು, ಆಯಾಸ ಟೊಮ್ಯಾಟೊ ಫ್ಲೋ ಜ್ವರದ ಸೂಚನೆಗಳಾಗಿವೆ. ಕೊಡಗಿನ ಜನತೆ ಹೆಚ್ಚಾಗಿ ಕೇರಳ ರಾಜ್ಯದೊಂದಿಗೆ ಹೆಚ್ಚಿನ ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡು ಅವಲಂಬಿಸಿದ್ದಾರೆ. ಅಲ್ಲದೆ ಕೊಡಗಿಗೂ ಕೂಡ ನೆರೆಯ ಕೇರಳದಿಂದಲೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕೊಡಗಿನ ಜನತೆಗೆ ಆತಂಕ‌ ಶುರುವಾಗಿದೆ.

ಇದನ್ನೂ ಓದಿ | Tomato Flu | ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಮಕ್ಕಳಿಗೆ ಸೋಂಕು ಬಾರದಂತೆ ತಡೆಯಲು ಇಲ್ಲಿದೆ ಮಾಹಿತಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಿಂದ ಕೊಡಗಿಗೆ ಬರುವ ವಾಹನಗಳನ್ನು ಗಡಿ ಭಾಗದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದರು. ಟೊಮೆಟೋ ಜ್ವರ 5 ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುತ್ತಿದ್ದು, ಕೋವಿಡ್‍ಗೂ ಟೊಮ್ಯಾಟೊ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಇದುವರೆಗೂ ಕೊಡಗಿನಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಕೊಡಗಿಗೆ ಸಾಕಷ್ಟು ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯ ಜನ ಎಚ್ಚರ ವಹಿಸಬೇಕು. ಈಗಾಗಲೇ ತಾಲೂಕು ವೈದ್ಯಾಧಿಕಾರಿಗಳಿಗೂ ಜವಾಬ್ದಾರಿಯನ್ನು ನೀಡಲಾಗಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಮೈ-ಕೈ ನೋವು, ಜ್ವರ, ಚರ್ಮದಲ್ಲಿ ಗುಳ್ಳೆಗಳು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಡಾ.ಆರ್.ವೆಂಕಟೇಶ್ ತಿಳಿಸಿದರು.

ಕೊಡಗಿನಲ್ಲಿ ಈಗಾಗಲೇ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ತಿಳಿಸಿದ್ದಾರೆ.

ವರದಿ : ಲೋಹಿತ್ ಎಂ.ಆರ್

ಇದನ್ನೂ ಓದಿ : Acid Attack | ಯುವತಿ ಆರೋಗ್ಯದಲ್ಲಿ ಚೇತರಿಕೆ: ಸರ್ಜರಿ ಜಾಗದಲ್ಲಿ ಇನ್‌ಫೆಕ್ಷನ್‌

Exit mobile version