ಬೆಳಗಾವಿ: ಭಾರಿ ಮಳೆಯಿಂದ ದೇಶದ ವಿವಿಧೆಡೆ ಪ್ರವಾಹ, ಭೂಕುಸಿತದಿಂದ ಅಪಾರ ಪ್ರಮಾಣದ ಸಾವು-ನೋವು ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭಯಾನಕ ಭವಿಷ್ಯ ನುಡಿದಿದ್ದಾರೆ. ಕಳೆದ ಇಪ್ಪತ್ತು ದಿನಗಳ ಹಿಂದೆ ನಾನು ಧಾರವಾಡದಲ್ಲಿ ಈ ರೀತಿ ಆಗುತ್ತೆ ಅಂತ ಹೇಳಿದ್ದೆ. ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ, ರೋಗರುಜಿನಗಳು ಹೆಚ್ಚಾಗುತ್ತವೆ ಅಂತ ಹೇಳಿದ್ದೆ. ಇದು ಕ್ರೋಧಿನಾಮ ಸಂವತ್ಸರ, ಪ್ರಾಕೃತಿಕ ವಿಕೋಪಗಳು ಮುಂದುವರಿಯುತ್ತೆವೆ ಎಂದು ಕೋಡಿಮಠ ಸ್ವಾಮೀಜಿ (Kodi Mutt Swamiji) ತಿಳಿಸಿದ್ದಾರೆ.
ಕೇರಳದ ವಯನಾಡು ಭೂಕುಸಿತ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಕೆಲವು ರಾಜ್ಯಗಳು ಮುಳುಗುತ್ತವೆ ಅಂತ ಹೇಳಿದ್ದೆ. ನನ್ನ ಪ್ರಕಾರ ಅಮಾವಾಸ್ಯೆವರೆಗೆ ಮಳೆ ಇರುತ್ತದೆ, ಬಳಿಕ ಬೇರೆ ಭಾಗಕ್ಕೆ ಹೋಗುತ್ತದೆ. ಇದು ಕ್ರೋಧಿನಾಮ ಸಂವತ್ಸರ, ಕ್ರೋಧಿ ಅಂದರೆ ಸಿಟ್ಟು, ಇದರಲ್ಲಿ ಒಳ್ಳೆಯದು, ಕೆಟ್ಟದ್ದು ಇದೆ. ಆ ಪೈಕಿ ಕೆಟ್ಟದ್ದೇ ಜಾಸ್ತಿ ಇರುತ್ತದೆ ಎಂದು ನುಡಿದಿದ್ದಾರೆ.
ಇದನ್ನೂ ಓದಿ | Shiradi Landslide: ಕೇರಳದ ಬೆನ್ನಿಗೇ ಶಿರಾಡಿ ಘಾಟಿಯಲ್ಲಿ ಭಾರೀ ಭೂಕುಸಿತ, ಮಣ್ಣಿನಡಿ ಸಿಲುಕಿದ ಕಾರುಗಳು, ಟ್ಯಾಂಕರ್
ಈ ವರ್ಷದಲ್ಲಿ ಪ್ರಾಕೃತಿಕ ದೋಷಗಳು ಮುಂದುವರಿಯುತ್ತವೆ. ಅಮವಾಸ್ಯೆಗೆ ಒಂದು ಭಾಗಕ್ಕೆ ಮಳೆ ನಿಲ್ಲುತ್ತೆ, ಮತ್ತೊಂದು ಭಾಗಕ್ಕೆ ಹೋಗುತ್ತೆ. ಮುಂದೆ ಅನಿಷ್ಟ ಜಾಸ್ತಿ ಇದೆ, ಕತ್ತಲು ಬೆಳಕು ಎರಡು ಇರುತ್ತದೆ, ಅದರಲ್ಲಿ ಕತ್ತಲು ಜಾಸ್ತಿ ಇರುತ್ತೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾಗಲ್ಲ
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸ್ವಾಮೀಜಿ ಪ್ರತಿಕ್ರಿಯಿಸಿ, ಸದ್ಯಕ್ಕೆ ಏನು ತೊಂದರೆ ಕಾಣುತ್ತಿಲ್ಲ ಎಂದು ಹೇಳಿದರು. ಮುಂದೆ ತೊಂದರೆ ಆಗುತ್ತಾ ಎಂಬ ಪ್ರಶ್ನೆಗೆ, ‘ಬೇಡ ಸನ್ಯಾಸಿ’ ಕತೆಯನ್ನು ಸ್ವಾಮೀಜಿ ಹೇಳಿದರು.
ಏನಾದರೂ ಹೇಳಿದರೆ ಮುಂದೆ ಓಡಾಡದ ಹಾಗೆ ಮಾಡಿಬಿಟ್ಟೀರಾ? ಜನರು ಎಲ್ಲವನ್ನೂ ಮನಶಾಂತಿಯಿಂದ ತೆಗೆದುಕೊಳ್ಳುತ್ತಿಲ್ಲ, ದ್ವೇಷ ಭಾಷೆಯಿಂದ ತೆಗೆದುಕೊಳ್ಳುತ್ತಿದ್ದಾರೆ. ಆತ್ಮಸಾಕ್ಷಿಯಾಗಿ ಜನರು ಮತ ನೀಡುತ್ತಿಲ್ಲ, ಎಲ್ಲಿಯವರೆಗೆ ಮತ ಮಾರಾಟ ಮಾಡಿಕೊಳ್ಳುತ್ತಾರೋ, ಅಲ್ಲಿಯವರೆಗೆ ಲಾಭ ನಷ್ಟ ಇರುತ್ತದೆ. ಹಿಂದಿನ ಕಾಲದಲ್ಲಿ ಧರ್ಮದ ಅನುಮತಿ ಪಡೆದು ರಾಜಕಾರಣ ಮಾಡುತ್ತಿದ್ದರು. ಈಗ ಧರ್ಮವೂ ಇಲ್ಲ, ಗುರಿಯೂ ಇಲ್ಲ, ದುಡ್ಡು ಮಾಡೋದಷ್ಟೇ ಗುರಿ. ಹಾಗಾಗಿ ಬಹುಬೇಗ ಇವರಿಗೆ ಅಪಘಾತಗಳು ಆಗುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ | ಕುದಿಯುತ್ತಿರುವ ಹಾಲಿನ ಮಡಿಕೆಯೊಳಗೆ ಮಗುವನ್ನು ಮುಳುಗಿಸಿದ ಅರ್ಚಕ! ಗಾಬರಿಗೊಳಿಸುವ ವಿಡಿಯೊ
ಮನುಷ್ಯ ಯಾವುದೇ ಅಪೇಕ್ಷೆ ಇಲ್ಲದೇ ಯಾವಾಗ ಮತ ಹಾಕುತ್ತಾನೋ, ಅಲ್ಲಿಯವರೆಗೆ ರಾಮರಾಜ್ಯ ಸಿಗಲ್ಲ. ಬರುವ ದಿನಗಳಲ್ಲಿ ರೋಗರುಜಿನಗಳು ಸ್ವಲ್ಪ ಜಾಸ್ತಿಯಾಗುತ್ತೆ, ಅಲ್ಪಾಯಸ್ಸು ಇರುತ್ತೆ, ಜನರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಬರುವ ದಿನಗಳು ಅಷ್ಟೊಂದು ಶುಭವಾಗಿಲ್ಲ. ಒಳ್ಳೆಯದು ಇದೆ, ಆದರೆ, ಬೆಳಕು ಕಪ್ಪು ಓರೆ ಮಾಡಿದಾಗ ಕಪ್ಪೇ ಜಾಸ್ತಿ ಎಂದು ಸ್ವಾಮೀಜಿ ಹೇಳಿದರು.