ಕೋಲಾರ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಮಾಡಲು ಸಿದ್ಧತೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯ ವಿವಾಹ (Child Marriage) ನಿಲ್ಲಿಸಿ ಬಾಲಕಿಯನ್ನು ರಕ್ಷಿಸಿದ ಘಟನೆ ತಾಲೂಕಿನ ಸುಗುಟೂರು ಹೋಬಳಿಯ ಮಾಧವ ಗುರ್ಜೆನಹಳ್ಳಿಯಲ್ಲಿ ನಡೆದಿದೆ.
17 ವರ್ಷದ ಬಾಲಕಿ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಹೀಗಾಗಿ ಗೋಪಾಲ್ ಎಂಬ ಯುವಕನ ಜತೆ ಜ. 21 ಮತ್ತು 22 ರಂದು ವಿವಾಹ ನಿಶ್ಚಯವಾಗಿತ್ತು. ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ, ಬಾಲಕಿಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ | Murder Case: ಪ್ರತಿದಿನವೂ ಅಕ್ಕನನ್ನು ಪೀಡಿಸುತ್ತಿದ್ದ ತಮ್ಮ; ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಬಾವ
ಎಸ್‌ಎಸ್ಎಲ್‌ಸಿ ಮಾರ್ಕ್ಸ್ ಕಾರ್ಡ್ ಹಾಗೂ ಲಗ್ನ ಪತ್ರಿಕೆ ಪರಿಶೀಲನೆ ನಡೆಸಿದಾಗ ಆಕೆ ಅಪ್ರಾಪ್ತೆ ಎಂಬುವುದು ತಿಳಿದುಬಂದಿದೆ. ಹೀಗಾಗಿ ಶನಿವಾರ ಹರಿಶಿನ ಶಾಸ್ತ್ರ ಮಾಡುತ್ತಿದ್ದ ವೇಳೆ ಸಿಡಿಪಿಒ ಪವಿತ್ರ ಹಾಗೂ ಗ್ರಾಮಾಂತರ ಪೊಲೀಸರು ತೆರಳಿ ಮದುವೆ ನಿಲ್ಲಿಸಿದ್ದಾರೆ.