Site icon Vistara News

ಹಣಕ್ಕಾಗಿ ವೃದ್ಧೆ ಕೊಲೆ, ಪಕ್ಕದ ಮನೆಯವರೇ ಆರೋಪಿಗಳು

murder

ಕೋಲಾರ: ಹಣಕಾಸು ಮತ್ತು ಬಂಗಾರದ ಲೋಭದಿಂದ ಪಕ್ಕದ ವೃದ್ಧೆಯನ್ನು ಕೊಂದ ಇನ್ನೊಬ್ಬಳು ವೃದ್ಧೆ ಹಾಗೂ ಆಕೆಯ ಮಗನನ್ನು ಬಂಧಿಸಲಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಶಾಂತಿನಗರದಲ್ಲಿ ಅ.13ರಂದು ಕೊಲೆ ಪ್ರಕರಣ ನಡೆದಿತ್ತು. ವೃದ್ಧೆ ಗೀತಾ ಎಂಬವರನ್ನು ಕೊಲೆ‌ ಮಾಡಿ ಮೈಮೇಲಿದ್ದ ಒಡವೆಗಳನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು. ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಸಿಟಿವಿ ದೃಶ್ಯಗಳ ಮೂಲಕ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಈಗ ಇಬ್ಬರನ್ನು ಬಂಧಿಸಿದ್ದಾರೆ. ವೃದ್ಧೆಯ ಪಕ್ಕದ ಮನೆಯಲ್ಲಿದ್ದ ಶಾಂತಾಬಾಯಿ(70) ಹಾಗೂ ಆನಂದ್ ಕಿರಣ್ ಶಿಂದೆ (47) ಬಂಧಿತರು. ಮನೆಯಲ್ಲಿ ಯಾರೂ ಇಲ್ಲದ‌ ವೇಳೆ ಪಕ್ಕದ ಮನೆಯ ಈ ಇಬ್ಬರು ಮನೆಗೆ ಬಂದು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇವರು ವೃದ್ಧೆಯನ್ನು ಕೊಲೆ‌ ಮಾಡಿ ಮೈಮೇಲಿದ್ದ ಚಿನ್ನದ‌ ಒಡವೆ ದೋಚಿ ಪರಾರಿಯಾಗಿದ್ದರು. ಇದೀಗ ಇಬ್ಬರೂ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ | ಅಪರಿಚಿತ ಶವದ ಬೆನ್ನು ಹತ್ತಿದ ಪೊಲೀಸರಿಗೆ ಸಿಕ್ಕಿತು ಪ್ರೇಮಿಗಳ ಆತ್ಮಹತ್ಯೆ, ಕೊಲೆ ರಹಸ್ಯ

Exit mobile version