ಕೋಲಾರ: ಬೆಂಗಳೂರು-ಕುಪ್ಪಂ ಮೂಲಕ ಹಾದು ಹೋಗುವ ಹೌರಾ ಎಕ್ಸ್ಪ್ರೆಸ್ನಲ್ಲಿ ಆಕಸ್ಮಿಕ ಬೆಂಕಿ (Fire Accident) ಕಾಣಿಸಿಕೊಂಡಿದ್ದು, ಭಯಗೊಂಡ ಪ್ರಯಾಣಿಕರು ರೈಲಿಂದ ಹೊರಗೆ ಓಡಿದ್ದಾರೆ. ಶಾರ್ಟ್ ಸರ್ಕ್ಯುಟ್ನಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಚಿತ್ತೂರು ಜಿಲ್ಲೆ ಕುಪ್ಪಂ ರೈಲ್ವೆ ನಿಲ್ದಾಣ ಬಳಿ ಘಟನೆ ಸಂಭವಿಸಿದೆ. ಬೆಂಗಳೂರು-ಕುಪ್ಪಂ ಮೂಲಕ ಹೌರಾ ಎಕ್ಸ್ಪ್ರೆಸ್ ಸಂಚಾರ ಮಾಡುತ್ತಿತ್ತು. ಈ ವೇಳೆ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ತಕ್ಷಣವೇ ಪ್ರಯಾಣಿಕರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ವೇಳೆ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಹೊಂದಿತ್ತು ಎನ್ನಲಾಗಿದೆ.
ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ರೈಲು ನಿಂತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಶಾರ್ಟ್ ಸರ್ಕ್ಯುಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ | Video| ಭಾರತ್ ಜೋಡೋ ಯಾತ್ರೆ ವೇಳೆ ನಾಯಿಯನ್ನು ಮುದ್ದಾಡಿ, ನೀಲಿ ಕಾರ್ಪೆಟ್ ಮೇಲೆ ಬುಲೆಟ್ ಬೈಕ್ ರೈಡ್ ಮಾಡಿದ ರಾಹುಲ್ ಗಾಂಧಿ