Site icon Vistara News

Head Master torture: ವಾಶ್‌ ರೂಮ್‌ಗೂ ಹೋಗಲು ಬಿಡಲ್ಲ; ಹೆಡ್‌ ಮಾಸ್ಟರ್‌ ಕಿರುಕುಳಕ್ಕೆ ಶಿಕ್ಷಕಿಯರ ಕಣ್ಣೀರು!

ಕೋಲಾರ: ಬಾಲಕಿಯರು, ಶಿಕ್ಷಕಿಯರಿಗೆ ನಿತ್ಯ ಅವಾಚ್ಯ ಪದಗಳಿಂದ ನಿಂದಿಸಿ, ಕಿರುಕುಳ ನೀಡುತ್ತಾರೆ ಎಂಬ ಆರೋಪ ಜಿಲ್ಲೆಯ ಮುಳಬಾಗಿಲು ಪಟ್ಟಣದ ಶಾಲೆಯ ಮುಖ್ಯ ಶಿಕ್ಷಕರ (Head Master torture) ವಿರುದ್ಧ ಕೇಳಿಬಂದಿದೆ. ಮುಖ್ಯ ಶಿಕ್ಷಕನ ಅಸಭ್ಯ ವರ್ತನೆಯಿಂದ ಬಾಲಕಿಯರು, ಶಿಕ್ಷಕಿಯರು ಕಿರಿ ಕಿರಿ ಅನುಭವಿಸುತ್ತಿದ್ದು, ವಾಶ್‌ ರೂಮ್‌ಗೂ ಹೋಗಲು ಬಿಡದೆ ಕಾಟ ಕೊಡುತ್ತಾರೆ ಎನ್ನಲಾಗಿದೆ.

ಮುಳಬಾಗಿಲು ಪಟ್ಟಣದ ಡಿವಿಜಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸೊಣ್ಣಪ್ಪ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಶಿಕ್ಷಕಿಯರಿಗೆ ನಿತ್ಯ ಕಿರುಕುಳ ನೀಡುವ ಮುಖ್ಯ ಶಿಕ್ಷಕ, ಹೆಣ್ಣು ಮಕ್ಕಳ ಶೌಚಾಲಯಕ್ಕೂ ದಿಢೀರನೇ ಭೇಟಿ ನೀಡುತ್ತಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಶಿಕ್ಷಕಿಯರ ಕಣ್ಣೀರು ಹಾಕುತ್ತಿದ್ದಾರೆ.

ಹೆಸಾರಂತ ಕವಿ ಡಿವಿಜಿ ಹುಟ್ಟಿದ ಮನೆಯನ್ನೇ ಈ ಶಾಲೆ ನಡೆಸಲು ದಾನವಾಗಿ ನೀಡಲಾಗಿದೆ. ಆದರೆ, ಇಂತಹ ಶಾಲೆಯ ಮುಖ್ಯ ಶಿಕ್ಷಕನ ಅಸಭ್ಯ ವರ್ತನೆಯಿಂದ ಮಹಿಳಾ ಶಿಕ್ಷಕಿಯರು, ಬಾಲಕಿಯರು ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಯಾವ ಅಧಿಕಾರಿಗೂ ಈ ಮುಖ್ಯ ಶಿಕ್ಷಕ ಸೊಣ್ಣಪ್ಪ ಕ್ಯಾರೆ ಎನ್ನುತ್ತಿಲ್ಲ. ಡಿಡಿಪಿಐ, ಬಿಇಒ, ಯಾವ ಶಿಕ್ಷಣ ಅಧಿಕಾರಿ ಮಾತುಗಳನ್ನೂ ಕೇಳಲ್ಲ. ಶಾಸಕರ ಮಾತಿಗೂ ಜಗ್ಗದೆ ಮುಖ್ಯ ಶಿಕ್ಷಕ ಮೊಂಡುತನ ಪ್ರದರ್ಶಿಸುತ್ತಾರೆ ಎನ್ನಲಾಗಿದೆ. ಪ್ರಶ್ನೆ ಮಾಡಿದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜಗಳಕ್ಕೆ ಬರುತ್ತಾರೆ. ಬೆದರಿಕೆ ಹಾಕಿ ಬ್ಲ್ಯಾಕ್ ಮೇಲ್ ಮಾಡುವ ಮುಖ್ಯ ಶಿಕ್ಷಕನ ಕಾಟದಿಂದ ಬೇಸತ್ತ ಶಿಕ್ಷಕಿಯರು, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಖಾಸಗಿ ಕ್ಷಣಕ್ಕೆ ಅಡ್ಡಿಯಾಗಿದ್ದಕ್ಕೆ ಪ್ರೇಯಸಿಯ ಮಗುವನ್ನೇ ಕೊಂದ ಪಾಪಿ

ಬೆಂಗಳೂರು: ವಿವಾಹಿತೆ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ ದುಷ್ಟನೊಬ್ಬ ತನ್ನ ಖಾಸಗಿ ಕ್ಷಣಗಳಿಗೆ ಮಗು (3) ಅಡ್ಡಿಯಾಗಿದ್ದಕ್ಕೆ ಕೊಂದು (Murder case) ಹಾಕಿದ್ದಾನೆ. ಮಗುವನ್ನು ಹತ್ಯೆ ಮಾಡಿದ್ದಕ್ಕೇ ಪ್ರಿಯಕರನ ವಿರುದ್ಧವೇ ಪ್ರಿಯತಮೆ ದೂರು ನೀಡಿದ್ದಾಳೆ. ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೂರು ವರ್ಷದ ಅಶ್ವಿನ್ ಕೊಲೆಯಾದ ದುರ್ದೈವಿ ಮಗು. ಅಶ್ವಿನ್‌ ತಾಯಿ ರಮ್ಯಾ ಎಂಬಾಕೆ ನೀಡಿದ ದೂರಿನ ಮೇರೆಗೆ ಪ್ರಿಯಕರ ಮೈಕೆಲ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅವಿವಾಹಿತನಾಗಿದ್ದ ಮೈಕೆಲ್‌ ರಾಜ್‌ ಬೊಮ್ಮನಹಳ್ಳಿಯ ವಿರಾಟ್ ನಗರದ ನಿವಾಸಿ ಆಗಿದ್ದು, ಗ್ಯಾರೇಜ್ ಅಂಗಡಿಯನ್ನು ಇಟ್ಟುಕೊಂಡಿದ್ದ.

ಇದೇ ಏರಿಯಾ ಸಮೀಪದಲ್ಲಿ ರಮ್ಯ ಬಾಡಿಗೆ ಮನೆಯೊಂದರಲ್ಲಿ ವಾಸಿವಿದ್ದಳು. ರಮ್ಯಾ ಆರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದಳು. ಆದರೆ ಒಂದು ವರ್ಷದ ಹಿಂದೆ ದಂಪತಿ ಮಧ್ಯೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಪತಿಯಿಂದ ರಮ್ಯ ದೂರವಾಗಿದ್ದಳು. ಈ ವೇಳೆ ಆರೋಪಿ ಮೈಕೆಲ್ ರಾಜ್‌ನ ಪರಿಚಯವಾಗಿತ್ತು.

ಇದನ್ನೂ ಓದಿ: Fraud Case : ‌ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್‌ ನಯ ವಂಚಕ; ಡಿಸಿ, ಜಡ್ಜ್‌ ಹೆಸರು ಬಳಸಿ ಲಕ್ಷ ಲಕ್ಷ ಲೂಟಿ

ಪರಿಚಯವು ಕ್ರಮೇಣ ಇಬ್ಬರ ಸಂಬಂಧ ಆತ್ಮೀಯತೆಗೆ ತಿರುಗಿತ್ತು. ಸ್ನೇಹವು ಪ್ರೀತಿಗೆ ತಿರುಗಿತ್ತು. ಕಳೆದ ಆರೇಳು ತಿಂಗಳಿಂದ ರಮ್ಯಾಳ ಮನೆಗೆ ಮೈಕಲ್‌ ಬಂದು ಹೋಗುತ್ತಿದ್ದ. ಕಳೆದ ಜುಲೈ 6ರಂದು ಮನೆಗೆ ಬಂದಾಗ ಅಶ್ವಿನ್‌ನನ್ನು ಕಂಡು ಕೋಪಗೊಂಡಿದ್ದ. ತಮ್ಮಿಬ್ಬರ ಸಂಬಂಧಕ್ಕೆ ಮಗು ಅಡ್ಡಿಯಾಗಲಿದೆ ಎಂದು ಭಾವಿಸಿ ಕೆನ್ನೆಗೆ ಹೊಡೆದು, ನಂತರ ಬಾತ್ ರೂಮಿನ ಗೋಡೆಗೆ ತಲೆಯನ್ನು ಗುದ್ದಿಸಿ ಊತ ಬರುವಂತೆ ಮಾಡಿದ್ದ.

ಇದನ್ನು ರಮ್ಯಳಿಗೆ ಹೇಳದೆ ಮಾರೆ ಮಾಚಿ ಕಾಲ್ಕಿತ್ತಿದ್ದ. ಇತ್ತ ಮಗುವಿನ ಮೇಲೆ ಹಲ್ಲೆ ಆಗಿರುವ ವಿಷಯ ರಮ್ಯಾಗೆ ತಿಳಿದಿರಲಿಲ್ಲ. ಅದೇ ದಿನ ರಾತ್ರಿ ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಗು ಅಶ್ವಿನ್‌ ಮೃತಪಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version