ಕೋಲಾರ: ವಿವಿಧ ಸಂಘಟನೆಗಳಿಂದ ಇಂದು ಕೋಲಾರ ಬಂದ್‌ಗೆ ಕರೆ ನೀಡಲಾಗಿದ್ದು, ಬೆಳ್ಳಂಬೆಳಗ್ಗೆ ಹೋರಾಟಗಾರರು ರಸ್ತೆಗಿಳಿದಿದ್ದಾರೆ. ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡಿದ್ದಾರೆ.
ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬಸ್ ಡಿಪೋಗೆ ತೆರಳಿ ಬಸ್ ಸಂಚಾರ ನಿಲ್ಲಿಸುವಂತೆ ಹೋರಾಟಗಾರರು ಒತ್ತಡ ಹಾಕಿದ್ದು, ಕೋಲಾರ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಟ ಅನುಭವಿಸಿದ್ದಾರೆ.
ಕೋಲಾರ ನಗರದಲ್ಲಿನ ಹದಗೆಟ್ಟ ರಸ್ತೆ, ಮೂಲಭೂತ ಸೌಕರ್ಯ ಅವ್ಯವಸ್ಥೆ ಸರಿಪಡಿಸುವಂತೆ ಕರೆ ನೀಡಿ ಹಲವು ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೋಲಾರ ಬಂದ್‌ಗೆ ಕರೆ ನೀಡಿತ್ತು. ಬಂದ್‌ಗೆ ಬೆಳಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ | Gold Mine | ಕೋಲಾರ ಚಿನ್ನದ ಗಣಿ ಮತ್ತೆ ಶುರು! ಸಂಸ್ಕರಿತ ಅದಿರಿನಿಂದ ಚಿನ್ನ ಹೊರ ತೆಗೆಯುವ ಪ್ಲ್ಯಾನ್, ಎಷ್ಟಿದೆ ಬಂಗಾರ?