ಕೋಲಾರ ಬಂದ್‌, ಬಸ್ಸುಗಳಿಲ್ಲದೆ ಜನ ಪರದಾಟ - Vistara News

ಕೋಲಾರ

ಕೋಲಾರ ಬಂದ್‌, ಬಸ್ಸುಗಳಿಲ್ಲದೆ ಜನ ಪರದಾಟ

ವಿವಿಧ ಸಂಘಟನೆಗಳಿಂದ‌‌ ಇಂದು ಕೋಲಾರ ಬಂದ್‌ಗೆ ಕರೆ ನೀಡಲಾಗಿದ್ದು, ಬೆಳ್ಳಂಬೆಳಗ್ಗೆ ಹೋರಾಟಗಾರರು ರಸ್ತೆಗಿಳಿದಿದ್ದಾರೆ. ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡಿದ್ದಾರೆ.

VISTARANEWS.COM


on

kolar bundh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲಾರ‌: ವಿವಿಧ ಸಂಘಟನೆಗಳಿಂದ‌‌ ಇಂದು ಕೋಲಾರ ಬಂದ್‌ಗೆ ಕರೆ ನೀಡಲಾಗಿದ್ದು, ಬೆಳ್ಳಂಬೆಳಗ್ಗೆ ಹೋರಾಟಗಾರರು ರಸ್ತೆಗಿಳಿದಿದ್ದಾರೆ. ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡಿದ್ದಾರೆ.

ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬಸ್ ಡಿಪೋಗೆ ತೆರಳಿ ಬಸ್ ಸಂಚಾರ ನಿಲ್ಲಿಸುವಂತೆ ಹೋರಾಟಗಾರರು ಒತ್ತಡ ಹಾಕಿದ್ದು, ಕೋಲಾರ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಟ ಅನುಭವಿಸಿದ್ದಾರೆ.

ಕೋಲಾರ ನಗರದಲ್ಲಿನ ಹದಗೆಟ್ಟ ರಸ್ತೆ, ಮೂಲಭೂತ ಸೌಕರ್ಯ ಅವ್ಯವಸ್ಥೆ ಸರಿಪಡಿಸುವಂತೆ ಕರೆ ನೀಡಿ ಹಲವು ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೋಲಾರ ಬಂದ್‌ಗೆ ಕರೆ ನೀಡಿತ್ತು. ಬಂದ್‌ಗೆ ಬೆಳಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ | Gold Mine | ಕೋಲಾರ ಚಿನ್ನದ ಗಣಿ ಮತ್ತೆ ಶುರು! ಸಂಸ್ಕರಿತ ಅದಿರಿನಿಂದ ಚಿನ್ನ ಹೊರ ತೆಗೆಯುವ ಪ್ಲ್ಯಾನ್, ಎಷ್ಟಿದೆ ಬಂಗಾರ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : 7 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ ಕೊಟ್ಟ ಹವಾಮಾನ ತಜ್ಞರು

Karnataka Weather Forecast : ಕರಾವಳಿ, ಮಲೆನಾಡಿನಲ್ಲಿ ಮಳೆಯಾಗುತ್ತಿದ್ದು, ಏಳು ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ ಮಾಡಲಾಗಿದೆ. ಒಳನಾಡಿನಲ್ಲಿ ಹಗುರದಿಂದ ಮಧ್ಯಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

VISTARANEWS.COM


on

By

karnataka Rain
Koo

ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ (Karnataka Weather Forecast) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡು ಸುತ್ತಮುತ್ತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನಲ್ಲಿ ಚದುರಿದಂತೆ ಮಧ್ಯಮ ಮಳೆಯಾದರೆ, ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ವಿಜಯನಗರದಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಮಧ್ಯಮ ಮಳೆಯಾಗಲಿದ್ದು ಬೆಳಗಾವಿ, ಬೀದರ್, ಕಲಬುರಗಿ, ಧಾರವಾಡ ಮತ್ತು ಹಾವೇರಿ, ವಿಜಯಪುರ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ.

ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ವ್ಯಾಪಕ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ವ್ಯಾಪಕ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Karnataka Rain : ಕೃಷ್ಣಾ ನದಿ ಪ್ರವಾಹದಲ್ಲಿ ಪಲ್ಟಿ ಹೊಡೆದ ಬೋಟ್‌; ಎತ್ತುಗಳ ಮೇಲೆ ಕುಸಿದು ಬಿದ್ದ ಗೋಡೆ

ಬೆಂಗಳೂರಿನಲ್ಲೂ ಸಾಧಾರಣ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಇದು ಕ್ರಮವಾಗಿ 28 ಮತ್ತು 20 ಡಿ.ಸೆ ಇರಲಿದೆ. ರಾತ್ರಿ ಸಮಯ ಚಳಿ ಹೆಚ್ಚಾಗಲಿದೆ.

7 ಜಿಲ್ಲೆಗಳಿಗೆ ಮುನ್ನೆಚ್ಚರಿಕೆ

ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ & ಶಿವಮೊಗ್ಗ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Road Accident : ತಿರುಪತಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಬ್ರೇಕ್‌ ಫೇಲ್‌; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Road Accident : ತಿರುಪತಿ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಬ್ರೇಕ್‌ ಫೇಲ್‌ ಆಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಬೆಂಗಳೂರಿನಲ್ಲಿ ಕುಳಿತ ಜಾಗದಲ್ಲೇ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

VISTARANEWS.COM


on

By

Road Accident
Koo

ಕೋಲಾರ/ತಿರುಪತಿ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಡಲಂ ಬಳಿಯ ಭಾಕರಪೇಟ್ ಘಾಟ್‌ನಲ್ಲಿ (Road Accident) ತೆರುಳುತ್ತಿದ್ದ ಕಎಸ್‌ಆರ್‌ಟಿಸಿ ಬಸ್‌ವೊಂದು ಬ್ರೇಕ್ ಫೈಲ್ಯೂರ್‌ ಆಗಿ ಬಂಡೆಗೆ ಡಿಕ್ಕಿ ಹೊಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಪ್ರಪಾತವನ್ನು ತಪ್ಪಿಸಿದ ಚಾಲಕ ಬಸ್‌ ಅನ್ನು ಬೆಟ್ಟದ ಬಂಡೆಗೆ ಗುದ್ದಿಸಿದ್ದಾರೆ. ಬಸ್‌ನಲ್ಲಿದ್ದ 43 ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ತಿರುಪತಿಯ ರೂಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ ಮದನಪಲ್ಲಿ ಮಾರ್ಗವಾಗಿ ತಿರುಪತಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಯಾವುದೇ ಪ್ರಾಣ ಹಾನಿ ಆಗಿಲ್ಲ. ಕಂದಕ್ಕೆ ಬಸ್ ಬಿದ್ದಿದ್ದರೆ ಭಾರಿ ಆನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಚಂದ್ರಗಿರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಬಾಗೇಪಲ್ಲಿ ಡಿಪೋ ಮ್ಯಾನೇಜರ್ ಹಾಗೂ ಕೋಲಾರದ ಡಿಟಿಓ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದ್ದಾರೆ.

ಇದನ್ನೂ ಓದಿ: Karnataka Weather : ಫಲ್ಗುಣಿ ಅಬ್ಬರಕ್ಕೆ ಮುಳುಗಿದ ದೇಗುಲಗಳು; ಆಗಸ್ಟ್‌ 5ರವರೆಗೆ ಭಾರಿ ಮಳೆ ಸಾಧ್ಯತೆ

ಕುಳಿತ ಜಾಗದಲ್ಲೇ ಮೃತಪಟ್ಟ ಕಾರ್ಮಿಕ

ಬೆಂಗಳೂರಿನ ಬಾಗಲಗುಂಟೆಯ ಇಂದಿರಾ ಕ್ಯಾಂಟೀನ್ ಬಳಿ ಕುಳಿತ ಸ್ಥಿತಿಯಲ್ಲೇ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ರಾಮನಗರ ನಿವಾಸಿ ಶಿವಲಿಂಗಯ್ಯ ಮೃತ ದುರ್ದೈವಿ. ಗಾರೆ ಕೆಲಸಕ್ಕಾಗಿ ರಾಮನಗರದಿಂದ ಬೆಂಗಳೂರಿಗೆ ಬಂದಿದ್ದ ಶಿವಲಿಂಗಯ್ಯ ಅವರು ನಿನ್ನೆ ಬುಧವಾರ ಇಂದಿರಾ ಕ್ಯಾಂಟೀನ್ ಬಳಿ ಕುಳಿತಿದ್ದರು. ಆದರೆ ಮರುದಿನ ಗಮನಿಸಿದ ಸ್ಥಳೀಯರು ಶಿವಲಿಂಗಯ್ಯ ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಯಗೊಂಡ ನಾಗರ ಹಾವಿಗೆ ಟ್ರೀಟ್ಮೆಂಟ್‌

ಧಾರವಾಡದಲ್ಲಿ ಗಾಯಗೊಂಡ ನಾಗರ ಹಾವಿಗೆ ವೈದ್ಯರು ಆರೈಕೆ ಮಾಡಿದ್ದಾರೆ. ಧಾರವಾಡದ ಸಾಧುನವರ್ ಎಸ್ಟೇಟ್ ಬಳಿ ಹಾವೊಂದು ಬಿದ್ದಿತ್ತು. ಬೈಕ್ ಸವಾರರು ಗಾಯಗೊಂಡಿದ್ದ ಹಾವಿಗೆ ಆರೈಕೆ ಮಾಡಿದ್ದಾರೆ. ಪ್ರಾಣಿ ಪ್ರಿಯ ಸೋಮಶೇಖರ್ ಮೊದಲು ಆರೈಕೆ ಮಾಡಿ ಬಳಿಕ ಕೃಷಿ ವಿವಿಯ ವೈದ್ಯ ಡಾ.ಅನಿಲ್ ಪಾಟೀಲ್‌ರಿಂದ ಚಿಕಿತ್ಸೆ ನೀಡಿದ್ದಾರೆ. ಮುಂದೆ ಹೋಗಲಾರದೆ ಸ್ಥಿತಿಯಲ್ಲಿದ್ದ ಹಾವಿಗೆ ಚಿಕಿತ್ಸೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಫಲ್ಗುಣಿ ಅಬ್ಬರಕ್ಕೆ ಮುಳುಗಿದ ದೇಗುಲಗಳು; ಆಗಸ್ಟ್‌ 5ರವರೆಗೆ ಭಾರಿ ಮಳೆ ಸಾಧ್ಯತೆ

Karnataka Weather forecast : ನೈರುತ್ಯ ಮುಂಗಾರು ಸಕ್ರಿಯಗೊಂಡಿದ್ದು, ರಾಜ್ಯಾದ್ಯಂತ ಮಳೆಯು (Rain News) ವ್ಯಾಪ್ತಿಸುತ್ತಿದೆ. ಮಳೆಗೆ ಅವಾಂತರವೇ ಸೃಷ್ಟಿಯಾಗಿದ್ದು, ಆಗಸ್ಟ್‌ 5ರವರೆಗೆ ಮುಂದುವರಿಯಲಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ (Rain News) ಅಬ್ಬರ (Karnataka Weather Forecast) ಮುಂದುವರಿದಿದ್ದು, ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದೆ. ವಾಮಂಜೂರು ಶ್ರೀಅಮೃತೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಒಳ ಪ್ರಾಂಗಣ ಸಂಪೂರ್ಣ ಜಲಾವೃತವಾಗಿದ್ದು, ದೇವಸ್ಥಾನದ ಸುತ್ತಲೂ ಫಲ್ಗುಣಿ ನದಿ ನೀರು ಆವರಿಸಿದೆ. ಕಳೆದ 30 ವರ್ಷದ ಬಳಿಕ ಇದೇ ಮೊದಲ ಬಾರಿಗೆ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕ್ಷಣ ಕ್ಷಣಕ್ಕೂ ಫಲ್ಗುಣಿ ನದಿಯ ನೀರು ಏರಿಕೆಯಾಗುತ್ತಿದ್ದು, ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಪಲ್ಗುಣಿ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ಮಂಗಳೂರು ನಗರ ಹೊರವಲಯದ ಪಡುಶೆಡ್ಡೆಯ ಸುಮಾರು 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. ನೆರೆ ಬಾಧಿತ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರು ಏರಿಕೆ ಆಗುತ್ತಿದ್ದು, ನದಿ ತೀರದ ಹಲವು ಮನೆಗಳು, ಕೃಷಿ ಭೂಮಿಗಳು ಜಲಾವೃತಗೊಂಡಿದೆ. ಪಲ್ಗುಣಿ ನದಿಯ ಮಧ್ಯ ಭಾಗದಲ್ಲಿ ಡ್ರೆಜ್ಜಿಂಗ್ ಬೋಟ್ ಸಿಲುಕಿದೆ. ರಾತ್ರಿ ಸುರಿದ ಮಹಾಮಳೆಗೆ ಪಲ್ಗುಣಿ ನದಿ ಉಕ್ಕಿದ್ದು, ಬಂಟ್ವಾಳ ತಾಲೂಕಿನ ಅಮ್ಮುಂಜೆಯ ಏಳು ಮನೆಗಳು ಜಲಾವೃತಗೊಂಡು, ಅಮ್ಮುಂಜೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ನೀರು ನುಗ್ಗಿದೆ. ಬಂಟ್ವಾಳ ಸಿದ್ಧಕಟ್ಟೆ ಸಮೀಪದ ಅಂಗಾರಕರಿಯ ಸೇತುವೆ ಮೇಲೆ ನೀರು ಹರಿದಿದೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರಾ

ಅಪಾಯದ ಮಟ್ಟ ಮೀರಿ ತುಂಗಭದ್ರಾ ನದಿ ಹರಿಯುತ್ತಿದ್ದು, ನದಿಗೆ 1,67,443 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಮತ್ತೆ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಕಂಪ್ಲಿ ಸೇತುವೆ ಮುಳುಗಡೆಯಾದ ಕಾರಣಕ್ಕೆ ಬಳ್ಳಾರಿ- ಗಂಗಾವತಿ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲ್ಭಾಗದಿಂದ ಮೂರು ಅಡಿ ನೀರು ಹರಿಯುತ್ತಿದೆ. ಹೀಗಾಗಿ ಕಂಪ್ಲಿ ಕೋಟೆಯ ಪ್ರದೇಶಕ್ಕೆ ನದಿ ನೀರು ನುಗ್ಗಿದೆ. ಕಂಪ್ಲಿ ಕೋಟೆ ಪ್ರದೇಶದ ಹೊಳೆ ಆಂಜನೇಯ, ಪ್ರಸನ್ನ ವೆಂಕಟರಮಣ ದೇವಸ್ಥಾನ ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಕೋಟೆ ಪ್ರದೇಶದ ಜನರನ್ನ ಸ್ಥಳಾಂತರ ಮಾಡಲಾಗಿತ್ತು.

ಇತ್ತ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದಾಗಿ ವಿಜಯನಗರ ಜಿಲ್ಲೆಯಲ್ಲಿ ರಸ್ತೆ, ಭತ್ತದ ಗದ್ದೆಗಳು ಜಲಾವೃತವಾಗಿದೆ. ಮಕರಬ್ಬಿ-ಬ್ಯಾಲಾಹುಣಸೆ ಗ್ರಾಮದ ರಸ್ತೆ ಸಂಪೂರ್ಣ ಬಂದ್ ಆಗಿದೆ. ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಗ್ರಾಮಗಳ ಹತ್ತಾರು ಎಕರೆ ಭತ್ತದ ಜಮೀನಿಗೆ ನೀರು ನುಗ್ಗಿದ್ದರಿಂದ ಸಂಪೂರ್ಣ ನೀರು ಪಾಲಾಗಿದೆ. ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶಗಳಲ್ಲಿ ಸಂಕಷ್ಟ ಎದುರಾಗಿದೆ. ನದಿಪಾತ್ರದ 22 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಇದನ್ನೂ ಓದಿ: Karnataka Rain : ಕೃಷ್ಣಾ ನದಿ ಪ್ರವಾಹದಲ್ಲಿ ಪಲ್ಟಿ ಹೊಡೆದ ಬೋಟ್‌; ಎತ್ತುಗಳ ಮೇಲೆ ಕುಸಿದು ಬಿದ್ದ ಗೋಡೆ

ನಾಳೆ ವ್ಯಾಪಕ ಮಳೆ ಎಚ್ಚರಿಕೆ

ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 23 ಸೆ.ಮೀ, ಉತ್ತರ ಕನ್ನಡದ ಅಂಕೋಲಾದಲ್ಲಿ 20 ಸೆ.ಮೀ ಮಳೆಯಾಗಿದೆ.

ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಕರಾವಳಿ ತೀರದಲ್ಲಿ ಟ್ರಫ್ ಮುಂದುವರೆದಿದೆ. ಸಿಯರ್ ಝೋನ್ 20° ಉತ್ತರ ಅಂಕ್ಷಾಂಶದಲ್ಲಿ 4.5ಕಿ.ಮೀ ಯಿಂದ  5.8 ಕಿ.ಮೀ ವರೆಗೆ ಸುಳಿಗಾಳಿ ಇದೆ. ಇದರ ಪರಿಣಾಮ ಕರಾವಳಿ ಜಿಲ್ಲೆಗಳಿಗೆ ಆಗಸ್ಟ್‌ 5ರ ವರೆಗೆ ವ್ಯಾಪಕ ಮಳೆ ಆಗಲಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಸಾಧ್ಯತೆ ಇದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ರೆಡ್‌ ಅಲರ್ಟ್‌ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಕೃಷ್ಣಾ ನದಿ ಪ್ರವಾಹದಲ್ಲಿ ಪಲ್ಟಿ ಹೊಡೆದ ಬೋಟ್‌; ಎತ್ತುಗಳ ಮೇಲೆ ಕುಸಿದು ಬಿದ್ದ ಗೋಡೆ

Karnataka Rain : ಭಾರಿ ಮಳೆಗೆ ಅವಾಂತರಗಳು ಮುಂದುವರಿದಿದೆ. ಕೃಷ್ಣಾ ನದಿ ಪ್ರವಾಹದ ಅಬ್ಬರಕ್ಕೆ ಎನ್‌ಡಿಆರ್‌ಎಫ್‌ ಸಿಬ್ಬಂದಿಯ ಬೋಟ್‌ ಪಲ್ಟಿ ಹೊಡೆದಿದೆ. ಮತ್ತೊಂದು ಕಡೆ ಮಳೆಗೆ ಮನೆ ಗೋಡೆ ಬಿದ್ದು, ಪಕ್ಕದಲ್ಲಿದ್ದ ಎತ್ತುಗಳು ಮೃತಪಟ್ಟಿವೆ.

VISTARANEWS.COM


on

By

karnataka rain
Koo

ಚಿಕ್ಕೋಡಿ/ಬೆಳಗಾವಿ: ಭಾರಿ ಮಳೆಗೆ (Karnataka Rain) ಕೃಷ್ಣಾ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಬೋಟ್ ಪಲ್ಟಿಯಾಗಿದೆ. ಚಿಕ್ಕೋಡಿಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಬಳಿ ಕೃಷ್ಣಾ ನದಿಯಲ್ಲಿ ಘಟನೆ ನಡೆದಿದೆ. ಒಂದು ವಾರದಿಂದ ಕುಡಚಿ ಪಟ್ಟಣಕ್ಕೆ ನೀರು ಬಾರದೇ ಸಮಸ್ಯೆಯಾಗಿತ್ತು. ಹೀಗಾಗಿ ಸಿಬ್ಬಂದಿ ಕುಡಚಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪಂಪ್ ಸೆಟ್ ಸರಿಪಡಿಸಲು ಹೋಗಿದ್ದರು. ಈ ವೇಳೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಕಂಟ್ರೋಲ್ ತಪ್ಪಿ ಬೋಟ್‌ ಪಲ್ಟಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಜಾಕ್ವೆಲ್ ನಲ್ಲೇ ಇರುವ ಸಿಬ್ಬಂದಿ ಮತ್ತೊಂದು ಬೋಟ್ ತಂದು ಹೊರ ತರಲು ಪ್ಲ್ಯಾನ್ ಮಾಡಿದ್ದಾರೆ.

ಮಳೆಗೆ ಎತ್ತುಗಳ ಮೇಲೆ ಉರುಳಿ ಬಿದ್ದ ಗೋಡೆ

ನಿರಂತರ ಮಳೆಗೆ ಮನೆ ಗೋಡೆ ಉರುಳಿ ಬಿದ್ದಿದ್ದು, ಅಲ್ಲೇ ಸಮೀಪದಲ್ಲಿದ್ದ ಎತ್ತುಗಳು ಗಾಯಗೊಂಡಿವೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ‌ ಗ್ರಾಮದಲ್ಲಿ ಘಟನೆ ನಡೆದಿದೆ. ಇಂಚಲ‌ ಗ್ರಾಮದ ಯಶವಂತ ನಲವಡೆ ಎಂಬುವವರ ಎತ್ತುಗಳು ಗಾಯಗೊಂಡಿವೆ. ಯಂಕವ್ವ ಗಾಯಕವಾಡ ಎಂಬುವವರ ಮನೆ ಗೋಡೆ ಉರುಳಿ ಬಿದ್ದು ಈ ಅವಘಡ ಸಂಭವಿಸಿದೆ. ಯಶವಂತ ಹಾಗೂ ಯಂಕವ್ವ ಮನೆಗಳು ಅಕ್ಕ ಪಕ್ಕವೇ ಇದ್ದು, ಗೋಡೆ ಬೀಳುತ್ತಿದ್ದಂತೆ ಮಣ್ಣು ತೆಗೆದು ಎತ್ತುಗಳನ್ನು ಉಳಿಸಿಕೊಂಡಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇಲ್ಲೇ ಸಾಯುತ್ತೇವೆ ಹೊರತು ಕಾಳಜಿ ಕೇಂದ್ರಕ್ಕೆ ಹೋಗಲ್ಲ

ದಾವಣಗೆರೆ: ತುಂಗಾಭದ್ರ ನದಿಯ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಗಂಗಾನಗರ ಸಂಪೂರ್ಣ ಜಲಾವೃತಗೊಂಡಿದೆ. 22ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಡಳಿತದಿಂದ ಕಾಳಜಿ ಕೇಂದ್ರ ತೆರೆದರೂ ಗಂಗಾನಗರ ನಿವಾಸಿಗಳು, ಇಲ್ಲೇ ನೀರಿನಲ್ಲಿ ಸಾಯುತ್ತೇವೆ ವಿನಃ, ಕಾಳಜಿ ಕೇಂದ್ರಕ್ಕೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿ ಬಾರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಮನೆಗಳು ಮುಳುಗಡೆಯಾಗುತ್ತವೆ. ಕಾಳಜಿ ಕೇಂದ್ರಕ್ಕೆ ಸಾಮಾಗ್ರಿಗಳನ್ನು ಮಕ್ಕಳನ್ನು ಕಟ್ಟಿಕೊಂಡು ಹೋಗಬೇಕು. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಅನುಭವಿಸುತ್ತಿದ್ದೇವೆ. ಬೇರೆ ಕಡೆ ನಿವೇಶನ ನೀಡಿ ಅಲ್ಲಿ ಗುಡಿಸಲು ಹಾಕಿಕೊಂಡು ಇರುತ್ತೇವೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Road Accident : ಬೆಂಗಳೂರಲ್ಲಿ ಮಳೆಗೆ ಬೈಕ್‌ ಸವಾರ ಬಲಿ; ಕಂಟ್ರೋಲ್‌ ತಪ್ಪಿ ಬಿದ್ದವನ ಮೇಲೆ ಹರಿದ ವಾಹನಗಳು!

ಬಾಗಲಕೋಟೆಯ‌ ಗೋವಿನಕೊಪ್ಪ ಸೇತುವೆ ಜಲಾವೃತ

ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ ನದಿ ಅಬ್ಬರಕ್ಕೆ ಪ್ರವಾಹ ಭೀತಿ ಶುರುವಾಗಿದೆ. ಮಲಪ್ರಭಾ ನದಿಗೆ 12 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನದಿಗೆ ಅಡ್ಡಲಾಗಿರುವ ಗೋವಿನಕೊಪ್ಪ ಸೇತುವೆ ಜಲಾವೃತಗೊಂಡಿದೆ. ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗೋವಿನಕೊಪ್ಫ ಹಳೆ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಹೊಸ ಸೇತುವೆ ಮೂಲಕ ವಾಹನಗಳು ಓಡಾಟ ನಡೆಸಿವೆ. ನದಿಯ ಇಕ್ಕೆಲದಲ್ಲಿರುವ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ.

ಶಿರಾಡಿ ಭೂ ಕುಸಿತ ಭೀತಿ; ವಾಹನ ಸಂಚಾರ ಇಳಿಕೆ

ಶಿರಾಡಿ ಭೂಕುಸಿತದ ಬಳಿಕ ಚಿಕ್ಕಮಗಳೂರಿನಲ್ಲಿ ವಾಹನ ಸಂಚಾರ ಇಳಿಕೆಯಾಗಿದೆ. ಚಾರ್ಮಾಡಿಯಲ್ಲಿ ವಾಹನ ಸಂಚಾರಕ್ಕೆ ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ. ಕಡೂರು-ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಗಣನೀಯ ಪ್ರಮಾಣದಲ್ಲಿ ವಾಹನಗಳ ಸಂಖ್ಯೆ ಇಳಿಕೆ ಕಂಡಿದೆ. ಚಾರ್ಮಾಡಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಪದೆ ಪದೇ ಕಲ್ಲು ಬಂಡೆಗಳು, ಮರಗಳು ಬಿದ್ದು ಅವಾಂತರವೇ ಸೃಷ್ಟಿಯಾಗುತ್ತಿದೆ. ನಿತ್ಯ 1500-2000 ವಾಹನಗಳು ಸಂಚಾರಿಸುತ್ತಿದ್ದವು. ಇದೀಗ ಗುಡ್ಡ ಕುಸಿತದ ಭಯಕ್ಕೆ ದಿನವೊಂದಕ್ಕೆ 500 ವಾಹನಗಳು ಓಡಾಟ ನಡೆಸುತ್ತಿವೆ. ಚಾರ್ಮಾಡಿ ಹೆದ್ದಾರಿ ಸಂಚಾರ ಮುಕ್ತ ಗೊಳಿಸಿದರು ಸವಾರರಲ್ಲಿ ಭಯ ಆವರಿಸಿದೆ.

ಹಾವೇರಿಯಲ್ಲಿ ಮಳೆ ಅವಾಂತರಕ್ಕೆ ಬೆಳೆ ನಾಶ

ಹಾವೇರಿ ತಾಲೂಕಿನ ಕೊರಡೂರು ಗ್ರಾಮದಲ್ಲಿ ಮಳೆ ಅಬ್ಬರಕ್ಕೆ ತರಕಾರಿ ಬೆಳೆ ನಾಶವಾಗಿದೆ. ಫಕ್ಕಿರೇಶ ಕೊಡಬಾಳ ಎಂಬುವವರು ಎರಡು ಎಕರೆ ಜಮೀನಿನಲ್ಲಿ ವಿವಿಧ ತರಕಾರಿ ಬೆಳೆ ಬೆಳೆದಿದ್ದರು. ಆದರೆ ವರದಾ ನದಿಯ ಅಬ್ಬರಕ್ಕೆ ಟೊಮೆಟೋ, ಮೆಣಸಿನಕಾಯಿ, ಬೆಂಡೆ ಮತ್ತು ಚವಳಿಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆ ನೀರುಪಾಲಾಗಿದೆ.

ಪಂಪಾ ಸರೋವರಕ್ಕೆ ಹೋಗುವ ರಸ್ತೆ ಸ್ಥಗಿತ

ಕೊಪ್ಪಳದಲ್ಲಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಆನೆಗೊಂದಿ ಬಳಿಯ ಪಂಪಾ ಸರೋವರಕ್ಕೆ ಹೋಗುವ ರಸ್ತೆ ಸ್ಥಗಿತಗೊಂಡಿದೆ. ಭಾರತದ ವಿವಿಧ ಪ್ರದೇಶದಿಂದ ಭಕ್ತರು ಆಗಮಿಸುವ ಪಂಪಾಸರೋವರ ಇದೀಗ ಬಂದ್‌ ಆಗಿದೆ. ತುಂಗಭದ್ರಾ ನದಿಗೆ 1.70 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ನೀರು ರಸ್ತೆಗೆ ಬಂದಿದೆ. ನದಿಯಲ್ಲಿ ಇನ್ನಷ್ಟು ನೀರು ಬಂದರೆ ಅಂಜನಾದ್ರಿ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
intel layoffs
ವಿದೇಶ3 mins ago

Intel Layoffs: ಆರ್ಥಿಕ ಬಿಕ್ಕಟ್ಟು- ಇಂಟೆಲ್‌ ಕಂಪನಿಯಿಂದ 18,000 ಉದ್ಯೋಗಿಗಳು ವಜಾ

Sexual Abuse
Latest8 mins ago

Sexual Abuse: ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ಮಗು ಜನನ! ಆಘಾತಗೊಂಡು ಅಲ್ಲೇ ಕೂತಿದ್ದ ಬಾಲಕಿ

BJP-JDS Padayatra
ಕರ್ನಾಟಕ11 mins ago

BJP-JDS Padayatra: ಮೈಸೂರು ಚಲೋಗೆ ಸರ್ಕಾರ ಅನುಮತಿ; ನಾಳೆ ಬೆಳಗ್ಗೆ ಚಾಲನೆ, ಪಾದಯಾತ್ರೆ ಮಾರ್ಗದ ವಿವರ ಇಲ್ಲಿದೆ

1 lakh crore Rs dues paid to farmers in current sugar season says Pralhad Joshi
ದೇಶ24 mins ago

Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ

Viral Video
Latest26 mins ago

Viral Video: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬಿದ್ದ ಕಬ್ಬಿಣದ ಗೇಟ್; ಶಾಕಿಂಗ್‌ ವಿಡಿಯೊ

ಸಿನಿಮಾ31 mins ago

OTT Releases: ಒಟಿಟಿಯಲ್ಲಿ ಈ ತಿಂಗಳು ಕಲ್ಕಿ, ಇಂಡಿಯನ್‌, ಟರ್ಬೊ ಜತೆಗೆ ಇನ್ಯಾವ ಹೊಸ ಚಿತ್ರ, ವೆಬ್‌ ಸಿರೀಸ್‌?

kidnap case
ಬೆಂಗಳೂರು40 mins ago

Kidnap case : ಪತಿ ಮೇಲಿನ ಸಿಟ್ಟಿಗೆ ಗೆಳೆಯನ ಜತೆ ಸೇರಿ ಸ್ವಂತ ಮಗನನ್ನೇ ಕಿಡ್ನ್ಯಾಪ್ ಮಾಡಿದ ತಾಯಿ!

NEET UG 2024
ದೇಶ58 mins ago

NEET UG 2024: ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಎರಡು ನಗರಗಳಿಗೆ ಸೀಮಿತ; ಮರು ಪರೀಕ್ಷೆ ಅಗತ್ಯವಿಲ್ಲ-ಸುಪ್ರೀಂಕೋರ್ಟ್‌

ಸಿನಿಮಾ1 hour ago

Rakshit Shetty: ಯಶವಂತಪುರ ಪೊಲೀಸರ ಮುಂದೆ ಹಾಜರಾದ ನಟ ರಕ್ಷಿತ್‌ ಶೆಟ್ಟಿ, ಕಾಪಿರೈಟ್‌ ಉಲ್ಲಂಘನೆ ವಿಚಾರಣೆ

MS Dhoni
ಕ್ರೀಡೆ1 hour ago

MS Dhoni: ನೆಚ್ಚಿನ ಆಟಗಾರನನ್ನು ಹೆಸರಿಸಿದ ಧೋನಿ; ಕೊಹ್ಲಿ, ರೋಹಿತ್​ ಅಲ್ಲ, ಮತ್ಯಾರು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌