ಕೋಲಾರ: ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಸವಾರ (Road Accident) ಮೃತಪಟ್ಟ ದಾರುಣ ಘಟನೆ ಕೋಲಾರದ ಕೆಜಿಎಫ್ ತಾಲೂಕಿನ ಪಾರಂಡಹಳ್ಳಿ ಬಳಿ ನಡೆದಿದೆ. ತಾತ ರೆಡ್ಡಿಹಳ್ಳಿ ನಿವಾಸಿ ರಾಮಕೃಷ್ಣ (38) ಮೃತ ದುರ್ದೈವಿ.
ಟ್ರಾಕ್ಟರ್‌ಗೆ ಬೈಕ್ ಡಿಕ್ಕಿಯಾದ ರಭಸಕ್ಕೆ ರಾಮಕೃಷ್ಣ ತಲೆಗೆ ಗಂಭೀರ ಗಾಯವಾಗಿತ್ತು. ಗಾಯಾಳು ರಸ್ತೆಯಲ್ಲಿ ನರಳಾಡುತ್ತಿದ್ದರೂ ಯಾರೊಬ್ಬರು ನೆರವಿಗೆ ಬಂದಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ರಾಮಕೃಷ್ಣ ಅವರನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಇತ್ತ ಚಾಲಕ ಅಪಘಾತದ ನಂತರ ಟ್ರ್ಯಾಕ್ಟರ್ ಸಮೇತ ಚಾಲಕ ಪರಾರಿ ಆಗಿದ್ದಾನೆ. ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಎಳ್ಳು ತುಂಬಿದ ಲಾರಿ ಪಲ್ಟಿ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ- ಹೊಸೂರಿನ ನೈಸ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿ ಹೊಡೆದಿದೆ. ಬೇಗೂರು ಸಮೀಪದ ಅಂಡರ್ ಪಾಸ್‌ನ ಸುಮಾರು 10 ಅಡಿ ಕೆಳಗೆ ಬಿದ್ದ ಎಳ್ಳು ತುಂಬಿದ ಲಾರಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಲಾರಿ ಚಾಲಕ, ಕ್ಲೀನರ್ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ.
ಬೆಳಗಿನ ಜಾವ 3.30ರ ಸಮಯಕ್ಕೆ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಅಂಡರ್ ಪಾಸ್‌ನಲ್ಲಿ ಗಾಡಿಗಳು ಸಂಚರಿಸುತ್ತಿದ್ದಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಹಾವು ಕಡಿತಕ್ಕೆ ಕಲಬುರಗಿಯಲ್ಲಿ ಬಾಲಕ ಸಾವು; ಕನಕಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಮಗನ ವೇಷದಲ್ಲಿ ಬಂದು ಹಿಂದೂ ಕುಟುಂಬಕ್ಕೆ ಮೋಸ ಮಾಡಿದ ನಫೀಸ್
ಅಮೇಥಿ: ಉತ್ತರ ಪ್ರದೇಶದ ಅಮೇಥಿಯಲ್ಲಿ ಕುಟುಂಬವೊಂದು 22 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಪುತ್ರ ಮನೆಗೆ ಬಂದ ಖುಷಿಯಲ್ಲಿದೆ (Reunion Fraud) ಎಂಬ ಸುದ್ದಿ ವೈರಲ್ ಆಗಿತ್ತು. ಅವರ ಖುಷಿ ಒಂದೇ ದಿನಕ್ಕೆ ಸೀಮಿತವಾಗಿತ್ತು ಎಂಬುದು ಇದೀಗ ಬಯಲಾಗಿದೆ. ಯಾಕೆಂದರೆ ಅದು ಪುನರ್ಮಿಲನವಲ್ಲ, ಅದು ವಂಚನೆ. ನಫೀಸ್ ಎಂಬಾತ ನಟೋರಿಯಸ್ ಕ್ರಿಮಿನಲ್ ಮಾಡಿದ ಮೋಸ ಎಂಬುದು ಗೊತ್ತಾಗಿದೆ. ಮಗನ ರೂಪದಲ್ಲಿ ಬಂದು ಹಿಂದೂ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ಗೊತ್ತಾಗಿದೆ.
ಕಾಣೆಯಾದ ತಮ್ಮ ಮಗ ಅರುಣ್ ನನ್ನು ಹೋಲುವ ಯುವಕ ಮನೆಗೆ ಹಿಂದಿರುಗಿದಾಗ ಕುಟುಂಬವು ತುಂಬಾ ಸಂತೋಷಪಟ್ಟಿತ್ತು. ಆದರೆ, ಆತ ದುಡ್ಡು ಪಡೆದ ಪರಾರಿಯಾದಾಗ ಆಘಾತಕ್ಕೆ ಒಳಗಾಗಿದೆ. ವರದಿಯ ಪ್ರಕಾರ, ಅರುಣ್ ಎಂದು ನಟಿಸಿದ ನಫೀಸ್ ಮನೆಗೆ ಮರಳಿದ್ದಕ್ಕೆ ಪ್ರತಿಯಾಗಿ 10 ಲಕ್ಷ ರೂಪಾಯಿ ಪಡೆದಿದ್ದ . ಹೆಚ್ಚಿನ ಹಣ ಕೇಳಿದರೂ ಮನೆಯವರು ಕೊಟ್ಟಿರಲಿಲ್ಲ. ಇದೀಗ ಆತ ಪರಾರಿಯಾಗಿದ್ದಾನೆ.
22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ಈಗ ಸನ್ಯಾಸಿಯಾಗಿ ಮರಳಿದ್ದು ಮಾತ್ರವಲ್ಲದೇ, ತನ್ನ ಹೆತ್ತ ತಾಯಿಯಿಂದಲೇ ಭಿಕ್ಷೆ ಪಡೆದಿದ್ದಾನೆ ಎಂಬುದಾಗಿ ಸುದ್ದಿ ಹರಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋದಲ್ಲಿ ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಪುನರ್ಮಿಲನ ಎಂದು ಹೇಳಲಾಗಿತ್ತು. ಯೋಗಿಯಾಗಿರುವ ಮಗನು ಸಾರಂಗಿ ನುಡಿಸುತ್ತಾ, ತನ್ನ ತಾಯಿಂದಲೇ ಭಿಕ್ಷೆ ಬೇಡುವ ದೃಶ್ಯವಿತ್ತು. ಆದರೆ, ಇವೆಲ್ಲವೂ ವಂಚಕನ ಕಣ್ಣುಕಟ್ಟು ಎಂಬುದು ಇದೀಗ ಗೊತ್ತಾಗಿದೆ.
ವಂಚನಕ ಯಾಮಾರಿಸಿದ್ದ ವಿಡಿಯೊ ಇಲ್ಲಿದೆ
‘मोरे करम लिखा वैराग्य माई रे…’
— 🇮🇳Jitendra pratap singh🇮🇳 (@jpsin1) February 4, 2024
हमारे मित्र अनुज सिंह ने यह वीडियो क्लिप भेजी है. अनुज के पैतृक गाँव (अमेठी) का मामला है. उनकी रिश्तेदारी का एक बच्चा, 20-22 वर्ष पहले, अचानक कहीं चला गया था. परिजनों ने यथाशक्ति खोजबीन की. थाने में गुमशुदगी की रपट भी दर्ज कराई. वह बच्चा मिला… pic.twitter.com/VYnNpBfCNb
ತಿಳಿದೇ ಮಾಡಿದ್ದ
ತಮ್ಮ ಮಗನನ್ನು ವಾಪಸ್ ಹುಡುಕಲು ಕುಟುಂಬ ಆಸ್ತಿಯನ್ನು ಮಾರಲು ಮುಂದಾಗಿತ್ತು. ವಿಷಯ ತಿಳಿದ ವಂಚಕ ನಫೀಸ್ ಆತನಂತೆ ವೇಷ ಹಾಕಿಕೊಂಡು ಬಂದು ಯಾಮಾರಿಸಿದ್ದಾನೆ. ನೀವು ಖರ್ಚು ಮಾಡಲು ಮುಂದಾಗಿರುವ ದೊಡ್ಡನ್ನು ಕೊಡಿ ಎಂದು ಕೇಳಿ ಪಡೆದಿದ್ದ. ಹೆಚ್ಚಿನ ದುಡ್ಡಿ ದುಂಬಾಲು ಬಿದ್ದಾಗ ವಿಷಯ ಗೊತ್ತಾಗಿದೆ.
ಸನ್ಯಾಸಿಯಂತೆ ವೇಷ ಧರಿಸುವುದು ಮತ್ತು ಹಣ ಸುಲಿಗೆ ಮಾಡುವುದು ನಫೀಸ್ನ ಯೋಜನೆಯಾಗಿತ್ತು. ಅದಕ್ಕಾಗಿ ತಾಯಿ- ಮಗನ ಭಾವನಾತ್ಮಕ ಸಂಬಂಧವನ್ನು ಬಳಸಿಕೊಂಡಿದ್ದ. ಮನೆಗೆ ಬಂದವನೇ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದ. ಆರಂಭದಲ್ಲಿ ಅವರು ಹಿಂಜರಿದರೂ ಅಂತಿಮವಾಗಿ ನಫೀಸ್ ಬೇಡಿಕೆಗಳಿಗೆ ಒಪ್ಪಿಕೊಂಡಿತ್ತು.
ಇದನ್ನೂ ಓದಿ : Viral Video: ರಣರಂಗವಾದ ಆರತಕ್ಷತೆ; ವಧು-ವರರ ಕಡೆಯವರ ಹೊಡೆದಾಟದ ಕತೆ!
ಮೋಸದ ಕುಟುಂಬ
ವರದಿಗಳ ಪ್ರಕಾರ, ನಫೀಸ್ ತಮ್ಮ ಮೋಸದ ಚಟುವಟಿಕೆಗಳಿಗೆ ಹೆಸರುವಾಸಿಯಾದ ಕುಖ್ಯಾತ ಕುಟುಂಬ ಸದಸ್ಯ.. ಅಮಾಯಕ ಕುಟುಂಬಗಳನ್ನು ಮೋಸಗೊಳಿಸಲು ಸಾಧುಗಳಂತೆ ನಟಿಸುವುದು ಅವರ ಮೋಸದ ವೈಖರಿ. ಈ ವಿಧಾನದ ಮೂಲಕ ಮೋಸ ಮಾಡಿದ್ದ ನಫೀಸ್ನ ಕುಟುಂಬದ ಹಲವರು ಈ ಹಿಂದೆ ಜೈಲಿಗೆ ಹೋಗಿದ್ದಾರೆ. ನಫೀಸ್ ಅವರ ಮೋಸದ ತಂತ್ರಗಳು. ಮಗನನ್ನು ಹುಡುಕುತ್ತಿದ್ದ ಕುಟುಂಬ ಭಾವನೆಗಳು ಹಾಗೂ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ.
ಎಚ್ಚರ ವಹಿಸಿ
ಸನ್ಯಾಸಿಗಳಂತೆ ವೇಷ ಹಾಕಿಕೊಂಡು ಬಂದು ಹಿಂದೂ ಕುಟುಂಬಗಳನ್ನು ಮೋಸ ಮಾಡುವುದು ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುತ್ತವೆ. ಅವರೆಲ್ಲರೂ ಇಂಥ ನಟೋರಿಯಸ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಸಾಧು- ಸಂತರ ವೇಷ ಹಾಕಿಕೊಂಡು ಬಂದು ಜನರ ಭಾವನೆಗಳನ್ನು ಬಳಿಕೊಂಡು ಮೋಸ ಮಾಡುವವರು ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.
ವೈರಲ್ ಆದ ವಿಷಯವೇನು?
ಪ್ರಸ್ತುತ ಪ್ರಕರಣದಲ್ಲಿ, ರತಿಪಾಲ್ ಸಿಂಗ್ ಅವರ ಮಗ ಪಿಂಕು 2002ರಲ್ಲಿ ತನ್ನ 11 ನೇ ವಯಸ್ಸಿನಲ್ಲಿ ಗೋಲಿ ಆಡುವ ವಿಷಯದಲ್ಲಿ ತನ್ನ ತಂದೆಯೊಂದಿಗೆ ಜಗಳವಾಡಿ ದೆಹಲಿಯ ಅವರ ಮನೆಯಿಂದ ನಾಪತ್ತೆಯಾಗಿದ್ದ. ಅವನ ತಾಯಿ ಭಾನುಮತಿ ಆತನನ್ನು ಗದರಿಸಿದ್ದಳು. ಇದರಿಂದ ಕೋಪಗೊಂಡಿದ್ದ ರಿಂಕು ಮನೆಯನ್ನೇ ತೊರೆದು, ಎರಡು ದಶಕಗಳ ಬಳಿಕ ಹಿಂತಿರುಗಿದ್ದಾನೆ. ಆದರೆ, ಯೋಗಿಯಾಗಿ ಬಂದಿದ್ದಾನೆ.
ಎರಡು ದಶಕಗಳಿಂದ ಕಾಣೆಯಾಗಿದ್ದ ಪಿಂಕು, ತಪಸ್ವಿಯಾಗಿ ವಾಪಸ್ ಆಗಿದ್ದನ್ನು ಕಂಡು ಕಳೆದ ವಾರ ಅಮೇಠಿಯ ಖರೌಲಿ ಗ್ರಾಮವು ದಿಗ್ಭ್ರಮೆಗೊಂಡಿತು. ದಿಲ್ಲಿಯಲ್ಲಿ ನೆಲೆಸಿರುವ ಆತನ ಪೋಷಕರಿಗೆ ಈ ವಿಷಯವನ್ನು ಗ್ರಾಮಸ್ಥರು ತಿಳಿಸಿದರು. ಕೂಡಲೇ ತಂದೆ ತಾಯಿಗಳು ಆಗಮಿಸಿದರು. ಆತನ ದೇಹದ ಮೇಲಿದ್ದ ಗಾಯದ ಮೂಲಕ ಪಿಂಕುವನ್ನು ಗುರುತಿಸಿದರು. ಆದರೆ, ಈ ಪುನರ್ಮಿಲನವು ಕ್ಷಣಿಕವಾಗಿತ್ತಷ್ಟೇ. ಯಾಕೆಂದರೆ, ತಪಸ್ವಿಯಾಗಿ ಹಿಂದಿರುಗಿರುವ ಪಿಂಕು ತಾಯಿಯಿಂದಲೇ ಭಿಕ್ಷೆಯನ್ನು ಬೇಡಿದ ಮತ್ತು ಹಳ್ಳಿಯನ್ನು ತೊರೆದು ಹೋದ. ಹಾಗಾಗಿ, ತಂದೆ ತಾಯಿ ಖುಷಿ ಕೇವಲ ಕ್ಷಣಗಳಿಗೆ ಮಾತ್ರವೇ ಸೀಮಿತವಾಯಿತು.
ತನ್ನ ಮಗ ಸೇರಿರುವ ಧಾರ್ಮಿಕ ಪಂಡಡವು ಆತನನ್ನು ಬಿಡುಗಡೆ ಮಾಡಲು 11 ಲಕ್ಷ ಕೇಳುತ್ತಿದೆ ಎಂದು ಪಿಂಕು ತಂದೆ ಆರೋಪಿಸಿದ್ದಾರೆ. ನನ್ನ ಜೇಬಿನಲ್ಲಿ 11 ರೂಪಾಯಿ ಕೂಡ ಇಲ್ಲ. ನಾನು ಹೇಗೆ 11 ಲಕ್ಷ ರೂ. ನೀಡಲಿ ಎಂದು ಅವರು ಪ್ರಶ್ನಿಸಿದ್ದಾರೆ.
ಪಿಂಕು ಕೂಡ ತನ್ನ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ. ನಾನು ಕುಟುಂಬದ ಸಂಬಂಧಗಳಿಗಾಗಿ ಊರಿಗೆ ಮರಳಿ ಬರಲಿಲ್ಲ. ಬದಲಿಗೆ ಧಾರ್ಮಿಕ ಆಚರಣೆಗಾಗಿ ಬಂದಿದ್ದೇನೆ. ಸಂಪ್ರದಾಯದ ಪ್ರಕಾರ, ಸನ್ಯಾಸಿಯಾಗ ಬಯಸುವವರು ತಮ್ಮ ತಾಯಿಂದಲೇ ಭಿಕ್ಷೆಯನ್ನು ಸ್ವೀಕರಿಸಬೇಕಾಗುತ್ತದೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ