ಕೋಲಾರ: ಎಷ್ಟು ಅಭಿವೃದ್ಧಿ ಮಾಡಿದರೂ, ಕಾಸು ಕೊಟ್ಟಿಲ್ಲ ಅಂದ್ರೆ ಜನ ವೋಟ್ ಹಾಕಲ್ಲ ಎಂದು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೋಲಾರ ತಾಲೂಕಿನ ಸೀತಿ ಹೊಸೂರು ಗ್ರಾಮದಲ್ಲಿ ನಿನ್ನೆ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಭಿವೃದ್ಧಿ ಮಾಡಿದರೂ ಎಲೆಕ್ಷನ್ ಹಿಂದಿನ ದಿನ ಹಣ ಕೊಡಲೇಬೇಕು. ಕಳೆದ ಎಲೆಕ್ಷನ್‌ನಲ್ಲಿ ನಾನು ಹಣ ಕೊಟ್ಟಿಲ್ಲ. 2023ರ ಎಲೆಕ್ಷನ್‌ನಲ್ಲಿ ಹಾಗೆ ಆಗುವುದಿಲ್ಲ. ಎಲ್ಲಾ ವ್ಯವಸ್ಥೆ ಮಾಡುತ್ತೇನೆ. ಮದ್ದು ಗುಂಡು ಕೊಡ್ತೀನಿ, ಸುಟ್ಟು ಬಿಸಾಕಿ ಎಂದಿರುವ ವರ್ತೂರು, ಮತದಾರರಿಗೆ ಹಣ ಕೊಡುತ್ತೇನೆ ಎಂದು ನೇರವಾಗಿಯೇ ಹೇಳಿದ್ದಾರೆ.
ಕೋಲಾರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವರ್ತೂರು ಪ್ರಕಾಶ್, ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇವತ್ತಿನ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ಇನ್ನೂ ಕೋಲಾರ ಸ್ಪರ್ಧೆ ಫೈನಲ್ ಮಾಡಿಲ್ಲ, ಅದರ ಬಗ್ಗೆ ಮುಂದೆ ಮಾತಾಡುವೆ. ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ, ಎಸ್.ಎಂ ಕೃಷ್ಣರನ್ನು ಜೀವಂತ ಸಮಾಧಿ ಮಾಡಿದ್ದು ಸಿದ್ದರಾಮಯ್ಯ ಎಂದು ಪ್ರಕಾಶ್ ಟೀಕಿಸಿದ್ದಾರೆ.
ಇದನ್ನೂ ಓದಿ | Reservation | ಒಕ್ಕಲಿಗ, ಪಂಚಮಸಾಲಿ ಒಬಿಸಿ ಮೀಸಲಾತಿ ಪರಿಷ್ಕರಣೆ ಎಲೆಕ್ಷನ್ ಗಿಮಿಕ್: ಮಾಜಿ ಸಿಎಂ ಸಿದ್ದರಾಮಯ್ಯ