Site icon Vistara News

Koo Downloads | 5 ಕೋಟಿ ಡೌನ್‌ಲೋಡ್ಸ್‌ ಕಂಡ ಕನ್ನಡಿಗರೇ ಅಭಿವೃದ್ಧಿಪಡಿಸಿದ ಕೂ, 2 ವರ್ಷದಲ್ಲೇ ಜನಪ್ರಿಯ

Koo Downloads

ಬೆಂಗಳೂರು: ಕನ್ನಡಿಗರೇ ಅಭಿವೃದ್ಧಿಪಡಿಸಿದ, ದೇಶದಲ್ಲಿ ಟ್ವಿಟರ್‌ಗೆ ಪರ್ಯಾಯವಾಗಿ ಬೆಳೆದು ನಿಂತಿರುವ ಜಾಲತಾಣ ‘ಕೂ’ 5 ಕೋಟಿ ಡೌನ್‌ಲೋಡ್‌ಗಳನ್ನು (Koo Downloads) ಕಾಣುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದೆ. 2020ರಲ್ಲಿ ಅಭಿವೃದ್ಧಿಯಾದ ಕೂ, ಎರಡೇ ವರ್ಷದಲ್ಲಿ ಮುನ್ನಡೆ ಸಾಧಿಸಿದೆ.

ಹೆಚ್ಚಿನ ಜನ ಡೌನ್‌ಲೋಡ್‌ ಮಾಡಿಕೊಳ್ಳುವ ಜತೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಆ್ಯಕ್ಟಿವ್‌ ಯೂಸರ್ಸ್‌, ಕೂ ಎಂಗೇಜ್‌ಮೆಂಟ್‌ನಲ್ಲೂ ಏಳಿಗೆಯಾಗಿದೆ. “ನಮ್ಮ ಆ್ಯಪ್ 5 ಕೋಟಿ ಡೌನ್‌ಲೋಡ್‌ಗಳನ್ನು ಕಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಎರಡು ವರ್ಷದಲ್ಲಿ ದೇಶದ ಜನರು ನೀಡಿದ ಪ್ರೀತಿ, ವಿಶ್ವಾಸವೇ ನಮ್ಮ ಮೂಲದ್ರವ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಿತ ಸೇವೆ ನೀಡುವುದು ನಮ್ಮ ಉದ್ದೇಶ” ಎಂದು ಕೂ ಸಿಇಒ, ಸಹ ಸಂಸ್ಥಾಪಕರೂ ಆದ ಅಪ್ರಮೇಯ ರಾಧಾಕೃಷ್ಣ (Aprameya Radhakrishna) ತಿಳಿಸಿದರು.

ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಆರಂಭವಾದ ಕೂ ಈಗ 10 ಭಾಷೆಗಳಲ್ಲಿ ಲಭ್ಯವಿದೆ. ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮರಾಠಿ, ಬಾಂಗ್ಲಾ, ಗುಜರಾತಿ ಭಾಷೆಗಳಲ್ಲೂ ಕೂ ಜನರನ್ನು ಆಕರ್ಷಿಸಿದೆ. ಮುಂದಿನ ವರ್ಷದ ವೇಳೆಗೆ ಡೌನ್‌ಲೋಡ್‌ಗಳ ಸಂಖ್ಯೆ 10 ಕೋಟಿ ದಾಟಿಸುವುದು ಕಂಪನಿಯ ಗುರಿಯಾಗಿದೆ. ಕೇಂದ್ರದ ಪ್ರಭಾವಿ ಸಚಿವರು ಕೂಡ ಕೂ ಖಾತೆ ಹೊಂದಿದ್ದಾರೆ.

ಇದನ್ನೂ ಓದಿ | ಸ್ಥಳೀಯತೆ, ವೇಗ ಮತ್ತು ವೈಯಕ್ತಿಕತೆ ಡಿಜಿಟಲ್‌ ಮೀಡಿಯಾದ ಭವಿಷ್ಯ: ಅಪ್ರಮೇಯ ರಾಧಾಕೃಷ್ಣ

Exit mobile version