Site icon Vistara News

Koppal Police : ನಿರಪರಾಧಿ ಮೂರು ಕೋಳಿಗಳ ಬಂಧಿಸಿದ ಪೊಲೀಸರು

ಕೊಪ್ಪಳ: ಇಲ್ಲಿನ ಕಾರಟಗಿ ಪೊಲೀಸ್ ಠಾಣೆಯಲ್ಲಿ (Koppal Police) ಮೂರು ಕೋಳಿಗಳು ಬಂಧಿಯಾಗಿವೆ. ಅರೇ ಕೋಳಿಗಳನ್ನು ಬಂಧಿಸಿದ್ದಾರಾ? ಅವೇನು ಮಾಡಿವೆ? ಇದೇನು ತಮಾಷೆ ಎಂದು ಅನ್ನಿಸಿದರೂ ಇದು ಸತ್ಯ.

ಕಾರಟಗಿ ತಾಲೂಕಿನ ಬಸಣ್ಣ ಕ್ಯಾಂಪ್​ನಲ್ಲಿ ಕೋಳಿ ಕಾಳಗದ ಜೂಜಾಟದಲ್ಲಿದ್ದ 3 ಕೋಳಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕೋಳಿ ಪಂದ್ಯದಲ್ಲಿ ಭಾಗಿಯಾಗಿದ್ದ 6 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮಧುಕಟ್ಟ ಎಂಬಾತ ಕೋಳಿ ಕಾಳಗ ನಡೆಸುತ್ತಿದ್ದ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ಪೊಲೀಸರನ್ನು ಕಂಡ ಜೂಜುಕೋರರು ಬೈಕ್‌ಗಳನ್ನು ಬಿಟ್ಟು ಪರಾರಿ ಆಗಿದ್ದು, 9 ಬೈಕ್‌ಗಳೊಂದಿಗೆ ಕಾಳಗದಲ್ಲಿ ಭಾಗಿಯಾಗಿದ್ದ ನಿರಪರಾಧಿ ಮೂರು ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಳಿ ಪಂದ್ಯದಲ್ಲಿ ಭಾಗಿಯಾಗಿದ್ದ 6 ಜನರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Brave hunt : ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಪರಾರಿ; ತಡೆಯಲು ಹೋದ 70ರ ವೃದ್ಧನನ್ನು ರಸ್ತೆಯಲ್ಲಿ ಒಂದೂವರೆ ಕಿ.ಮೀ. ದರದರನೆ ಎಳೆದೊಯ್ದ!

Exit mobile version