Site icon Vistara News

ಎನ್‌ಸಿಸಿ ಕಾರ್ಯಕಾರಿ ಅಧ್ಯಕ್ಷರಾಗಿ ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಆಯ್ಕೆ

Prof B K Ravi

ಬೆಂಗಳೂರು: ​ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ. ಕೆ. ರವಿಯವರು (Prof. B. K. Ravi) ರಾಷ್ಟ್ರೀಯ ಸಂವಹನ ಕಾಂಗ್ರೆಸ್ (National Communication Congress)ನ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.​

ಕೊಲ್ಕತ್ತದ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸ್ಥಾನ ಹೊಂದಿದೆ. ಎನ್‌ಸಿಸಿಯ ಅಧ್ಯಕ್ಷರಾಗಿ ವಿಶ್ವಭಾರತಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿಪ್ ಲ್ಯಾಬ್ ಲೋಹಾ ಚೌಧುರಿ ಚುನಾಯಿತರಾಗಿದ್ದಾರೆ.

ಇದನ್ನೂ ಓದಿ: Honour killing : ಕೋಲಾರದಲ್ಲಿ ಮರ್ಯಾದಾ ಹತ್ಯೆ; ಅನ್ಯಕೋಮಿನ ಯುವಕನ ಪ್ರೀತಿಸಿದ ಮಗಳನ್ನು ಹೂತುಹಾಕಿದರು!

ಉಪಾಧ್ಯಕ್ಷರಾಗಿ ಮಕನ್ ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಸಂವಹನ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಜಿ. ಸುರೇಶ್ ಹಾಗೂ ಮಹಾಪ್ರಧಾನ ಕಾರ್ಯದರ್ಶಿಯಾಗಿ ಭುವನೇಶ್ವರ ಉಕ್ಕಲ್ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಉಪೇಂದ್ರ ಪಾಢಿ ಚುನಾಯಿತರಾಗಿದ್ದಾರೆ.

ಸಂಪರ್ಕ ಸೇತುವೆ

ರಾಷ್ಟ್ರೀಯ ಸಂವಹನ ಕಾಂಗ್ರೆಸ್ ದೇಶದ ಮಾಧ್ಯಮ ವಿದ್ವಾಂಸರು, ಸಂವಹನ ತಜ್ಞರು, ಮಾಧ್ಯಮ ಶಿಕ್ಷಕರು, ಸಂಶೋಧಕರು ಮತ್ತು ಭಾರತೀಯ ಮಾಧ್ಯಮದ ವೃತ್ತಿಪರರನ್ನು ಒಳಗೊಂಡಿದೆ. ದೇಶದಾದ್ಯಂತ ಮಾಧ್ಯಮಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳು, ಸಮ್ಮೇಳನಗಳು, ಪ್ರಕಟಣೆಗಳು, ತರಬೇತಿ ಹಾಗೂ ಸಂಶೋಧನೆಗಳನ್ನು ನಡೆಸಲಿದೆ. ಭಾರತೀಯ ಮಾಧ್ಯಮ ಶಿಕ್ಷಣ ಹಾಗೂ ಭಾರತೀಯ ಮಾಧ್ಯಮ ಉದ್ಯಮದ ನಡುವೆ ಸಂಪರ್ಕ ಸಾಧಿಸುವ ಸೇತುವೆಯಾಗಿ ಎನ್.ಸಿ.ಸಿ. ಕಾರ್ಯನಿರ್ವಹಿಸಲಿದೆ.​

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ​

Exit mobile version