ಕುಷ್ಟಗಿ: ಸಿಡಿಲು (Lightning strike) ಬಡಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, 6 ಕುರಿಗಳು ಬಲಿಯಾಗಿರುವ ಘಟನೆ ತಾಲೂಕಿನ ಶಾಡಲಗೇರಿ ಗ್ರಾಮದಲ್ಲಿ ಜರುಗಿದೆ.
ಮಂಗಳವಾರ ಸಂಜೆ ಭಾರಿ ಬಿರುಗಾಳಿ ಸಮೇತ ಸಿಡಿಲು, ಗುಡುಗಿನ ಆರ್ಭಟ ಹೆಚ್ಚಾಗಿತ್ತು. ಇದೇ ವೇಳೆ ಹೊಲದಲ್ಲಿದ್ದ ಶಾಂತಮ್ಮ ದುರಗಪ್ಪ ಕಮತರ (65) ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಿಡಿಲಿನಿಂದ ಫಕೀರಸಾಬ್ ನೈನಾಪೂರ, ರಮಜಾನಬೀ ನೈನಾಪೂರ, ಶಿವು ಆರಿ ಎಂಬುವವರು ಗಾಯಗೊಂಡಿದ್ದು ಹನುಮನಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫಕೀರಸಾಬ್ ನೈನಾಪೂರ ಅವರಿಗೆ ಸೇರಿದ 5 ಕುರಿ ಮತ್ತು 1 ಟಗರು ಸಾವನ್ನಪ್ಪಿದೆ.
ಇದನ್ನೂ ಓದಿ: West Bengal: ಶೌಚಾಲಯದಲ್ಲಿ ಜನಿಸಿದ ಮಗುವನ್ನು ಕಿಟಕಿಯಿಂದ ಆಚೆ ಎಸೆದ ತಾಯಿ!
ಜೊತೆಗೆ ತಾಲೂಕಿನ ಹಾಬಲಕಟ್ಟೆ ಗ್ರಾಮದಲ್ಲಿ ಎತ್ತನ್ನು ಬೇರೆಡೆ ಕಟ್ಟಲು ಹೋಗಿದ್ದಾಗ ಅನತಿ ದೂರದಲ್ಲಿ ಸಿಡಿಲು ಬಡಿದಿದ್ದರಿಂದ ಮಹಾಂತೇಶ ರಾಜೂರು (48) ಎಂಬ ರೈತ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.