Site icon Vistara News

Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು

Anjanadri Temple Hundi Count

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯ ದೇಗುಲದ ಹುಂಡಿ ಎಣಿಕೆ ಕಾರ್ಯವು ಮಂಗಳವಾರ (Koppala News) ನಡೆಯಿತು. ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗತ್ತಿ ಸೂಚನೆ ಮೇರೆಗೆ ತಹಸೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ಹುಂಡಿ ಕಾಣಿಕೆ ಹಣದ ಎಣಿಕೆ ಕಾರ್ಯವು ನಡೆಯಿತು. ಕಾಣಿಕೆ ಹುಂಡಿಯಲ್ಲಿ 32.95 ಲಕ್ಷ ರೂಪಾಯಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

ಇದನ್ನೂ ಓದಿ: Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

ವಿವಿಧ ದೇಶಗಳ ಮೂರು ನೋಟು ಮತ್ತು ಏಳು ನಾಣ್ಯಗಳು ಪತ್ತೆ

ಅಂಜನಾದ್ರಿ ಆಂಜನೇಯ ದೇಗುಲದ ಹುಂಡಿಯಲ್ಲಿ ಸಂಗ್ರವಾಗಿದ್ದ ಕಾಣಿಕೆ ಹಣದ ಎಣಿಕೆಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳ ಮೂರು ನೋಟು ಮತ್ತು ಏಳು ನಾಣ್ಯಗಳು ಪತ್ತೆಯಾಗಿವೆ.

ಈ ಪೈಕಿ ಸೌತ್ ಆಫ್ರಿಕಾದ ಒಂದು ನೂರು ರಾಂಡ್ ಮೊತ್ತದ ಒಂದು ನೋಟು, ಮತ್ತು ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾದ ತಲಾ ಹತ್ತು ಡಾಲರ್ ಮೊತ್ತದ ಎರಡು ನೋಟು ಪತ್ತೆಯಾಗಿವೆ ಹಾಗೂ ಸೌದಿ ಅರೇಬಿಯಾ, ಥೈಲ್ಯಾಂಡ್, ಇಟಲಿ, ಓಮನ್, ಯುಕೆ ಮತ್ತು ನೇಪಾಳದ ನಾನಾ ಮುಖಬೆಲೆಯ ನಾಣ್ಯಗಳು ಪತ್ತೆಯಾಗಿವೆ.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ಕಳೆದ ಮೇ 21ರಂದು ಹಣ ಎಣಿಕೆ ಮಾಡಿದ ಸಂದರ್ಭದಲ್ಲಿ 30.21 ಲಕ್ಷ ರೂ. ಮೊತ್ತದ ಹಣ ಸಂಗ್ರವಾಗಿತ್ತು.

Exit mobile version