Site icon Vistara News

Koppala News: ವಾಹನಗಳ ಸುಗಮ ಸಂಚಾರಕ್ಕೆ ತೆರವು ಕಾರ್ಯಾಚರಣೆ ಅಗತ್ಯ: ಶಾಸಕ ಜಿ. ಜನಾರ್ದನ ರೆಡ್ಡಿ

Gangavathi MLA G Janardhana Reddy Observation of road development work

ಗಂಗಾವತಿ: ನಗರದ ಮುಖ್ಯರಸ್ತೆಗಳು (Main roads) ಈ ಮೊದಲು 80 ಅಡಿ (80 Feet) ಇದ್ದವು. ಆದರೆ ಇದೀಗ 30ರಿಂದ 40 ಅಡಿ ಒತ್ತುವರಿಯಾಗಿದ್ದು, ವಾಹನಗಳ (Vehicles) ಸುಗಮ ಸಂಚಾರಕ್ಕೆ ತೆರವು ಕಾರ್ಯಾಚರಣೆ ಅಗತ್ಯ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದರು.

ನಗರದ ರಾಣಾ ಪ್ರತಾಪ್‌ ಸಿಂಗ್ ವೃತ್ತದಿಂದ ಸಿಬಿಎಸ್ ವೃತ್ತದ ಮಾರ್ಗವಾಗಿ ರೈಲ್ವೆ ಗೇಟ್ ಬಳಿ ಇರುವ ಸ್ವಾಗತ ಕಮಾನುವರೆಗೂ ಕೆಆರ್‌ಡಿಸಿಎಲ್‌ನಿಂದ ಕೈಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ, ಬಳಿಕ ಅವರು ಮಾತನಾಡಿದರು.

ನಗರದ ರಾಣಾ ಪ್ರತಾಪ್‌ ಸಿಂಗ್ ವೃತ್ತದಿಂದ ಇಂದಿರಾಗಾಂಧಿ ವೃತ್ತದ ಮೂಲಕ ಗಾಂಧಿವೃತ್ತವರೆಗೂ ಮತ್ತು ಕನಕದಾಸ ವೃತ್ತದಿಂದ ನೀಲಕಂಠೇಶ್ವರ ವೃತ್ತದ ರಸ್ತೆ 80 ಅಡಿ ಇರುವ ಬಗ್ಗೆ ಕಮಿಷನರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ತೆರವು ಕಾರ್ಯಾಚರಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: Anti Child labour day : ಮಕ್ಕಳ ಕೈಗೆ ಪೆನ್ಸಿಲ್‌ ಕೊಡಿ, ಸುತ್ತಿಗೆಯಲ್ಲ; ನಮ್ಮ ಕರ್ನಾಟಕ ಸೇನೆ ಜಾಗೃತಿ ಜಾಥಾ

ರಾಣಾ ಪ್ರತಾಪ್‌ಸಿಂಗ್ ವೃತ್ತ ದೊಡ್ಡದಾಗಿದ್ದು, ಇದರಿಂದ ವಾಹನ ಸವಾರರಿಗೆ ತುಂಬಾ ಸಮಸ್ಯೆಯಾಗಿದೆ. ಹೀಗಾಗಿ ವೃತ್ತದಲ್ಲಿರುವ ರಾಣಾ ಪ್ರತಾಪ್‌ ಸಿಂಗ್ ಪ್ರತಿಮೆಗೆ ಯಾವುದೇ ಹಾನಿಯಾಗದಂತೆ ಗಾತ್ರ ತಗ್ಗಿಸಲಾಗುವುದು.
ವೃತ್ತವನ್ನು ರಸ್ತೆಯ ಪಕ್ಕಕ್ಕೆ ಸರಿಸಿ ರಸ್ತೆ ಅಗಲೀಕರಣ ಮಾಡುವ ಬಗ್ಗೆ ಸಲಹೆ ವ್ಯಕ್ತವಾಗಿವೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ಇರುವ ವೃತ್ತ ಮುಂದುವರಿಯುಂತೆ ಮಾಡಿ ಕೇವಲ ಗಾತ್ರ ತಗ್ಗಿಸುವ ಚಿಂತನೆ ಇದೆ ಎಂದರು.

ಜೂನ್ 6ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳಿಗೆ ಕೆಲ-ಸಲಹೆ ಸೂಚನೆ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಎಷ್ಟರ ಮಟ್ಟಿಗೆ ಅವುಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂಬುವುದರ ಪರಿಶೀಲನೆ ಕುರಿತು ಸಭೆ ನಡೆಸಲಾಗುತ್ತಿದೆ.

ವಾಹನ ಸವಾರರಿಂದ ರಸ್ತೆ ಶುಲ್ಕ ಸಂಗ್ರಹಿಸುವ ಟೋಲ್ ಪ್ಲಾಜಾಗಳಿಂದಲೇ ರಸ್ತೆ ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಈ ಹಿಂದೆ ಇದ್ದ ಶಾಸಕರು ಈ ಬಗ್ಗೆ ಗಮನ ಹರಿಸಿರಲಿಲ್ಲ.

ಇದನ್ನೂ ಓದಿ: Indigo Flight: ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ದಿಢೀರನೆ ಪಾಕ್‌ ವಾಯುಪ್ರದೇಶ ಪ್ರವೇಶ

ನಾನು ಶಾಸಕನಾದ ತಕ್ಷಣ ಈ ಕೆಲಸ ಕೈಗೆತ್ತಿಕೊಂಡಿದ್ದು ಕೇವಲ ಒಂದೇ ತಿಂಗಳಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ರಸ್ತೆ ಸುಧಾರಣೆ ಮಾಡಿ ಎಂದು ಟೋಲ್‌ ಪ್ಲಾಜಾಗಳ ಮಾಲಿಕರ ಕೊರಳಪಟ್ಟಿ ಹಿಡಿದು ಈ ಹಿಂದಿನ ಶಾಸಕರು ಕೇಳಬೇಕಿತ್ತು, ಆದರೆ ಅವರು ಕೇಳಿಲ್ಲ, ರಸ್ತೆ ಸುಧಾರಣೆಯಾಗಲಿಲ್ಲ ಎಂದು ಟೀಕಿಸಿದರು.

Exit mobile version