ದೇಶ
Indigo Flight: ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ದಿಢೀರನೆ ಪಾಕ್ ವಾಯುಪ್ರದೇಶ ಪ್ರವೇಶ
Indigo Flight: ಹವಾಮಾನ ವೈಪರೀತ್ಯದಿಂದಾಗಿ ಶ್ರೀನಗರದಿಂದ ಜಮ್ಮುವಿಗೆ ಹೊರಟಿದ್ದ ವಿಮಾನವು ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದೆ. ಇದಾದ ಬಳಿಕ ವಿಮಾನವನ್ನು ಅಮೃತಸರದಲ್ಲಿ ಲ್ಯಾಂಡ್ ಮಾಡಲಾಗಿದೆ.
ನವದೆಹಲಿ: ಮಳೆಗಾಲ ಆರಂಭವಾದರೆ ಸಾಕು, ವಿಮಾನಗಳ ತುರ್ತು ಭೂಸ್ಪರ್ಶ, ವಿಮಾನಗಳ ಹಾರಾಟ ವಿಳಂಬ, ಬೇರೆ ದೇಶಗಳ ವಾಯುಪ್ರದೇಶ ಪ್ರವೇಶಿಸುವುದು ಸೇರಿ ಹಲವು ರೀತಿಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಭಾನುವಾರ ಶ್ರೀನಗರ-ಜಮ್ಮು ಇಂಡಿಗೋ (Indigo Flight) ವಿಮಾನವು ದಿಢೀರನೆ ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದೆ.
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಶ್ರೀನಗರದಿಂದ ಜಮ್ಮುವಿಗೆ ಹೊರಟ್ಟಿದ್ದ ಇಂಡಿಗೋ 6e-2124 ವಿಮಾನವು ಅನಿವಾರ್ಯವಾಗಿ ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದೆ. ಇದಾದ ಬಳಿಕ ವಿಮಾನವನ್ನು ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ ಎಂದು ಇಂಡಿಗೋ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಕೂಡ ಅಮೃತಸರದಿಂದ ಅಹ್ಮದಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿತ್ತು.
ಇಂಡಿಗೋ ವಿಮಾನವು ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸುತ್ತಲೇ ನೆರೆ ರಾಷ್ಟ್ರದ ಅಧಿಕಾರಿಗಳು ಸಹಕರಿಸಿದ್ದಾರೆ. ಜಮ್ಮು ಹಾಗೂ ಲಾಹೋರ್‌ನ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳು ಸಂವಹನ ಸಾಧಿಸಿ, ಪರಸ್ಪರ ಸಹಕಾರದಿಂದ ವಿಮಾನವನ್ನು ಅಮೃತಸರದಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: IndiGo: ಏರ್ ಇಂಡಿಯಾ ದಾಖಲೆಯನ್ನೇ ಉಡೀಸ್ ಮಾಡಿದ ಇಂಡಿಗೋ! ಏನಿದು ದಾಖಲೆ?
ಭಾನುವಾರವೇ ಲಂಡನ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನವನ್ನು ಜೈಪುರದಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಿದ ಬಳಿಕ ಮತ್ತೆ ವಿಮಾನ ಹಾರಿಸಲು ವಿಮಾನದ ಪೈಲಟ್ ನಿರಾಕರಿಸಿದ ಕಾರಣ ಸುಮಾರು 350 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡಿದರು.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಎ-112 ವಿಮಾನವು ಲಂಡನ್‌ನಿಂದ ಹಾರಾಟ ಆರಂಭಿಸಿದ್ದ, ದೆಹಲಿ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಗ್ಗೆ 4 ಗಂಟೆಗೆ ತಲುಪಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನವನ್ನು ಜೈಪುರದಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನ ಲ್ಯಾಂಡ್ ಆದ ಬಳಿಕ ಮತ್ತೆ ಹಾರಾಟ ಆರಂಭಿಸಲು ಪೈಲಟ್ ನಿರಾಕರಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.
ದೇಶ
Narendra Modi : ವಾರಾಣಸಿಯಲ್ಲಿ ಪ್ರಧಾನಿ ಮೋದಿ ಭದ್ರತೆ ಉಲ್ಲಂಘನೆಗೆ ಯತ್ನಿಸಿದ ವ್ಯಕ್ತಿ ಬಂಧನ
ಮೋದಿ (Narendra Modi) ಬೆಂಗಾವಲು ವಾಹನದ ಮುಂದೆ ಹಾರಿದ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬೆಂಗಾವಲು ಪಡೆಯೊಂದಿಗೆ ವಾರಣಾಸಿಯ ರುದ್ರಾಕ್ಷಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರದಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಭದ್ರತೆಯನ್ನು ಉಲ್ಲಂಘಿಸಲು ದೊಡ್ಡ ಪ್ರಯತ್ನ ನಡೆದಿದೆ ಎಂದು ವರದಿಯಾಗಿದೆ. ವ್ಯಕ್ತಿಯೊಬ್ಬ ಬೆಂಗಾವಲು ಪಡೆಯ ಮುಂದೆ ಜಿಗಿದು ಭದ್ರತಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಆತನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ, ಗಾಜಿಪುರದ ನಿವಾಸಿ ಪ್ರಧಾನಿ ಮೋದಿಯವರ ಬೆಂಗಾವಲು ಹಾದುಹೋಗುವ ಸಮಯಕ್ಕಿಂತ ಒಂದು ಗಂಟೆ ಮೊದಲಿನಿಂದಲೂ ಕಾಯುತ್ತಿದ್ದ. ಘಟನೆ ನಡೆದಾಗ ವೇಳೆ ಆತ ತನ್ನೊಂದಿಗೆ ಫೈಲ್ ಸಹ ಒಯ್ಯುತ್ತಿದ್ದ. ಆತ ಭಾರತೀಯ ಸೇನೆಗೆ ನೇಮಕಗೊಳ್ಳಲು ಪ್ರಯತ್ನಿಸುತ್ತಿದ್ದ ಎಂದು ಹೇಳಲಾಗಿದೆ. ತಾನು ಸೇನೆಯ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ ಎಂದು ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.
ತನ್ನ ಸಮಸ್ಯೆ ಹೇಳಿಕೊಳ್ಳುವುದಕ್ಕೆ ಹಲವು ಬಾರಿ ಯತ್ನಿಸಿದ್ದೆ. ಎಲ್ಲವೂ ವ್ಯರ್ಥವಾಯಿತು. ಆದ್ದರಿಂದ ಇಂದು ಅವರು ತನ್ನ ಮನವಿಯನ್ನು ಪ್ರಧಾನಿ ಮೋದಿಯ ಗಮನ ಸೆಳೆಯಲು ಯತ್ನಿಸಿದ್ದ ಎನ್ನಲಾಗಿದೆ.
ವಾರಣಾಸಿಯ ಗಂಜಾರಿಯಲ್ಲಿ ನಿರ್ಮಿಸಲಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ಕಪಿಲ್ ದೇವ್, ದಿಲೀಪ್ ವೆಂಗ್ಸರ್ಕಾರ್, ಮದನ್ ಲಾಲ್, ಗುಂಡಪ್ಪ ವಿಶ್ವನಾಥ್, ಗೋಪಾಲ್ ಶರ್ಮಾ ಮತ್ತು ರವಿ ಶಾಸ್ತ್ರಿ ಸೇರಿದಂತೆ ಕ್ರಿಕೆಟ್ ದಿಗ್ಗಜರು ಪೂರ್ವ ಯುಪಿಯ ಮೊದಲ ಕ್ರೀಡಾಂಗಣದ ಅಡಿಪಾಯ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : Narendra Modi : ಕಲಾವಿದನ ಕುಂಚ, ಕೃತಕ ಬುದ್ಧಿಮತ್ತೆ ಸೇರಿಕೊಂಡರೆ ಪ್ರಕೃತಿಯಲ್ಲೇ ಕಾಣುತ್ತದೆ ಮೋದಿ ಮುಖ
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಕಾರ್ಯದರ್ಶಿ ಜಯ್ ಶಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಮಾರು 1,115 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಿರ್ಗತಿಕ ಮಕ್ಕಳಿಗಾಗಿ ನಿರ್ಮಿಸಲಾದ 16 ವಸತಿ ಶಾಲೆಗಳನ್ನು ಮೋದಿ ಉದ್ಘಾಟಿಸಿದ್ದಾರೆ.
ಕಟ್ಟಡ ಕಾರ್ಮಿಕರು, ದಿನಗೂಲಿಗಳು ಮತ್ತು ಕೋವಿಡ್ ಅನಾಥರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಮತ್ತು ಅವರ ಸಮಗ್ರ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಹಾಯ ಮಾಡಲು ಶಾಲೆಗಳನ್ನು ಪ್ರತ್ಯೇಕವಾಗಿ ಪ್ರಾರಂಭಿಸಲಾಗಿತ್ತು.. ಪ್ರತಿ ಅಟಲ್ ಶಾಲೆಯನ್ನು 10-15 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಮೈದಾನ, ಮನರಂಜನಾ ಪ್ರದೇಶ, ಮಿನಿ ಸಭಾಂಗಣ, ಹಾಸ್ಟೆಲ್ ಸಂಕೀರ್ಣ, ಮೆಸ್ ಮತ್ತು ಸಿಬ್ಬಂದಿಗೆ ವಸತಿ ಫ್ಲ್ಯಾಟ್ಗಳನ್ನು ಹೊಂದಿದೆ. ಪ್ರತಿ ಶಾಲೆಯು ಅಂತಿಮವಾಗಿ 1,000 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಿದೆ. ಈ ಶಾಲೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೊದಲು, ಪ್ರಧಾನಿ ಮೋದಿ ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಲೆ/ಸಾಹಿತ್ಯ
Narendra Modi : ಕಲಾವಿದನ ಕುಂಚ, ಕೃತಕ ಬುದ್ಧಿಮತ್ತೆ ಸೇರಿಕೊಂಡರೆ ಪ್ರಕೃತಿಯಲ್ಲೇ ಕಾಣುತ್ತದೆ ಮೋದಿ ಮುಖ
“ನೀವೂ ಅವರನ್ನು ನೋಡಿದ್ದೀರಾ?” ಎಂದು ಕಲಾವಿದ ಮಾಧವ್ ಕೊಹ್ಲಿ ಅವರು ಕೃತಕ ಬುದ್ಧಿ ಮತ್ತೆಯ ನೆರವಿನಿಂದ ತಾವು ರಚಿಸಿದ ಮೋದಿ (Narendra Modi) ಚಿತ್ರವನ್ನು ಹಂಚಿಕೊಂಡಿದ್ದಾರೆ.
ನವ ದೆಹಲಿ: ಸೃಜನಶೀಲತೆಯ ಎಲ್ಲೆ ಮೀರುವುದಕ್ಕೆ ಕೃತಕ ಬುದ್ಧಿಮತ್ತೆ ನೆರವಾಗುತ್ತಿದೆ. ಅಚ್ಚರಿ ಮೂಡಿಸುವಂಥ ಚಿತ್ರಗಳನ್ನು ರಚಿಸಲು ಕಲಾವಿದರು ವಿಭಿನ್ನ ಎಐ-ಚಾಲಿತ ಸಾಧನಗಳನ್ನು ಹೆಚ್ಚಾಗಿ ಬಳಸಲು ಆರಂಭಿಸಿದ್ದಾರೆ. ಮಾಧವ್ ಕೊಹ್ಲಿ ಅಂತಹ ಕಲಾವಿದರಲ್ಲಿ ಒಬ್ಬರು, ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮೋಡಿಮಾಡುವ ದೃಶ್ಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಸೃಷ್ಟಿಗಳಲ್ಲಿ ಒಂದು ದ್ವೀಪದ ಚಿತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಮುಖವನ್ನು ತೋರಿಸಲಾಗಿದೆ. ಆದಾಗ್ಯೂ, ತಂತ್ರಜ್ಞಾನವನ್ನು ತಮ್ಮ ಕಲಾತ್ಮಕ ಅಭಿವ್ಯಕ್ತಿಯೊಂದಿಗೆ ಹೇಗೆ ಬೆರೆಸಿದರು ಮತ್ತು ನರೇಂದ್ರ ಮೋದಿಯವರ ಮುಖದ ರೂಪರೇಖೆಯನ್ನು ರೂಪಿಸುವ ರೀತಿಯಲ್ಲಿ ಚಿತ್ರವನ್ನು ಹೇಗೆ ರಚಿಸಿದರು ಎಂಬುದು ವಿಸ್ಮಯವೇ ಸರಿ.
Do you see him too? pic.twitter.com/QjJzO4fBbF
— Madhav Kohli (@mvdhav) September 23, 2023
ಕೊಹ್ಲಿ ತಮ್ಮ ಸೃಷ್ಟಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದು, ನೀವು ಅವರನ್ನು ಸಹ ನೋಡುತ್ತೀರಾ? ಎಂಬ ಒಂದು ಸಾಲಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಚಿತ್ರವು ಅಸ್ತಮಿಸುವ ಸೂರ್ಯನ ಕಿರಣಗಳು ಸಾಗಿ ಬರುವ ಆಕಾಶದ ಹಿನ್ನೆಲೆಯಲ್ಲಿ ಸಣ್ಣ ಮತ್ತು ಸುಂದರ ದ್ವೀಪವನ್ನು ತೋರಿಸುತ್ತದೆ. ಮೊದಲ ನೋಟದಲ್ಲಿ, ನೋಡುಗನಿಗೆ ಪ್ರಧಾನಿಯ ಮುಖವನ್ನು ಕಾಣದಿರಬಹುದು. ಆಧರೆ ಸೂಕ್ಷ್ಮವಾಗಿ ನೋಡಿದರೆ ಮುಖ ಕಾಣುವುದು ಸ್ಪಷ್ಟ.
ಇದನ್ನೂ ಓದಿ : Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ
ಈ ಟ್ವೀಟ್ ಅನ್ನು ಕೆಲವು ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ ಅದು 2,500 ವೀಕ್ಷಣೆಗಳನ್ನು ಕಂಡಿದೆ. ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ಗೆ ಪ್ರತಿಕ್ರಿಯಿಸುವಾಗ ಇದು ಅದ್ಭುತ ಎಂದು ಬರೆದಿದ್ದಾರೆ. ಚಿತ್ರವನ್ನು ರಚಿಸಲು ಯಾವ ಅಪ್ಲಿಕೇಶನ್ ಅನ್ನು ಬಳಸಲಾಗಿದೆ ಎಂದು ಇನ್ನೊಬ್ಬ ವ್ಯಕ್ತಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೊಹ್ಲಿ, Stable diffusion ಎಂದು ಉತ್ತರಿಸಿದ್ದಾರೆ.
ಇದು ಕೃತಕ ಬುದ್ಧಿಮತ್ತೆ ಪ್ಲಾಟ್ ಫಾರ್ಮ್ ಆಗಿದ್ದು, ಬಳಕೆದಾರರು ವಿವರಣಾತ್ಮಕ ಚಿತ್ರಗಳನ್ನು ರಚಿಸಬಹುದು. ಪ್ಲಾಟ್ಫಾರ್ಮ್ನ ಅಧಿಕೃತ ವೆಬ್ಸೈಟ್ ಪ್ರಕಾರ, ಬಳಕೆದಾರರು ಎಐ ಚಿತ್ರಗಳನ್ನು “ಸಣ್ಣ ಪ್ರಾಂಪ್ಟ್ಗಳೊಂದಿಗೆ ರಚಿಸಬಹುದು. ಚಿತ್ರಗಳೊಳಗೆ ಪದಗಳನ್ನು ರಚಿಸಬಹುದು.
ಕರ್ನಾಟಕ
VISTARA TOP 10 NEWS : ಸೆ. 26ಕ್ಕೆ ಬೆಂಗಳೂರು ಬಂದ್‌ಗೆ ಕರೆ, ಚೈತ್ರಾ ಕುಂದಾಪುರ ಟೀಮ್ ಪರಪ್ಪನ ಅಗ್ರಹಾರದಲ್ಲಿ ಸೆರೆ
VISTARA TOP 10 NEWS : ಕಾವೇರಿ ಹೋರಾಟದ ಕಿಚ್ಚು ಹೊತ್ತಿ ಉರಿಯುತ್ತಿದೆ. ಮಂಡ್ಯ ಬಂದ್ ಯಶಸ್ವಿಯಾಗಿದೆ. ಬೆಂಗಳೂರು ಬಂದ್ ರೆಡಿಯಾಗಿದೆ. ಚೈತ್ರಾ ಕುಂದಾಪುರ ಟೀಮ್ ಪರಪ್ಪನ ಅಗ್ರಹಾರ ತಲುಪಿದೆ. ಹೀಗೆ ದಿನ ವಿಶೇಷ ಬೆಳವಣಿಗೆಗಳ ಸುತ್ತು ನೋಟವೇ ವಿಸ್ತಾರ ಟಾಪ್ 10 ನ್ಯೂಸ್
1.ರಾಜಧಾನಿಯಲ್ಲಿ ತೀವ್ರಗೊಂಡ ಕಾವೇರಿ ಹೋರಾಟ: ಸೆ.26ಕ್ಕೆ ಬೆಂಗಳೂರು ಬಂದ್‌ಗೆ ಕರೆ
ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್ 26ರಂದು (ಮಂಗಳವಾರ) ಬೆಂಗಳೂರು ಬಂದ್‌ಗೆ (Bangalore bandh on September 26) ಕರೆ ನೀಡಲಾಗಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಶನಿವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಸೆ. 26ರಬಂದ್‌ಗೆ ಭಾರಿ ಬೆಂಬಲ; ಏನಿರುತ್ತೆ? ಏನಿರಲ್ಲ?; ಕರ್ನಾಟಕ ಬಂದ್‌ಗೂ ಪ್ಲ್ಯಾನಿಂಗ್
2. ರೈತ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್ ಸಕ್ಸಸ್: ರಾಜ್ಯಾದ್ಯಂತ ವ್ಯಾಪಿಸಿದ ಜ್ವಾಲೆ
ರಾಜ್ಯದಲ್ಲಿ ಮಳೆ ಇಲ್ಲದೆ ಸಂಕಷ್ಟ ಕಾಲ ಬಂದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ (Cauvery protest) ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್ (Mandya bandh) ಯಶಸ್ವಿಯಾಯಿತು. ಕಾವೇರಿ ಹೋರಾಟಕ್ಕೆ ರಾಜ್ಯದ ಎಲ್ಲ ಕಡೆಗಳಲ್ಲೂ ಬೆಂಬಲ ವ್ಯಕ್ತವಾಗಿದ್ದು, ಸಂಘಟನೆಗಳು ಪ್ರತಿಭಟನೆ, ಜಾಥಾಗಳನ್ನು ನಡೆಸಿದವು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ನಾನು ಹೇಳಿದ ಹಾಗೆ ಮಾಡ್ತೀರಾ?; ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ಕುಮಾರಸ್ವಾಮಿ 3 ಸಲಹೆಗಳು
3. ಕಾಂಗ್ರೆಸ್‌ನಲ್ಲಿ ನಿಲ್ಲದ ಡಿಸಿಎಂ ರಗಳೆ- ಮೂರಲ್ಲ, ಐವರು ಡಿಸಿಎಂ ಬೇಕೆಂದ ರಾಯರೆಡ್ಡಿ
ರಾಜ್ಯದಲ್ಲಿ ಇನ್ನೂ ಮೂರು ಹೊಸ ಡಿಸಿಎಂ ಸ್ಥಾನಗಳನ್ನು ಸೃಷ್ಟಿಸಬೇಕು ಬೇಡಿಕೆಯ ನಡುವೆಯೇ ಶಾಸಕ ಬಸವರಾಜ ರಾಯರೆಡ್ಡಿ (MLA Basavaraja Rayareddy) ಇದನ್ನೂ ಮೀರಿಸಿ ಹೊಸದಾಗಿ ಐದು ಉಪಮುಖ್ಯಮಂತ್ರಿಗಳು ಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ದೇವೇಗೌಡರ ತುಮಕೂರು ಸ್ಪರ್ಧೆಗೆ ಬಿಜೆಪಿ ಸಂಸದರ ವಿರೋಧ
4. ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್‌ನ ಏಳು ಮಂದಿ ಪರಪ್ಪನ ಅಗ್ರಹಾರ ಜೈಲಿಗೆ, 14 ದಿನ ನ್ಯಾಯಾಂಗ ಸೆರೆ
ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಏಳು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಕೋರ್ಟ್ ಆದೇಶಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ಕೋರ್ಟ್ ತಾತ್ಕಾಲಿಕ ನಿರ್ಬಂಧ
5. ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
ಪ್ರತಿ ಭಾರತೀಯನೂ, ಈ ದೇಶ ನನ್ನದು, ನಾನು ನನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ದೇಶ ಏಳಿಗೆ ಆಗುತ್ತದೆ ಎಂದು ಭಾವಿಸಬೇಕು. ಆಗ ವಿಶ್ವದ ಯಾವ ಶಕ್ತಿಯೂ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ
ಪೂರ್ಣ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ
6 ಲೋಕ ಸಮರ ಹೊತ್ತಲ್ಲೇ ವಾರಾಣಸಿಯಲ್ಲಿ ಅಭಿವೃದ್ಧಿ ಪರ್ವ: ಕ್ರಿಕೆಟ್ ಸ್ಟೇಡಿಯಂಗೆ ಮೋದಿ ಶಂಕುಸ್ಥಾಪನೆ
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಶಿವನ ಮಾದರಿಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. 330 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಸ್ಟೇಡಿಯಂ ಶಿವನಿಗೆ ಸಮರ್ಪಣೆ ಎಂದಿದೆ ಬಿಸಿಸಿಐ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
7. ಭಾರತದ ಬೆನ್ನಿಗೆ ನಿಂತ ಅಮೆರಿಕ: ಆನೆ ಜತೆ ಇರುವೆ ಕಾಳಗಕ್ಕೆ ಇಳಿದಿದೆ ಅಂತ ಕೆನಡಾಗೆ ವ್ಯಂಗ್ಯ
ಭಾರತ ಹಾಗೂ ಕೆನಡಾ ನಡುವಿನ ಬಿಕ್ಕಟ್ಟು (India Canada Row) ದಿನೇದಿನೆ ಉಲ್ಬಣವಾಗುತ್ತಿರುವ ಕಾರಣ ಅಮೆರಿಕ ಮಧ್ಯಪ್ರವೇಶಿಸಲು ಯತ್ನಿಸುತ್ತಿದೆ. ಜತೆಗೆ “ಕೆನಡಾ ಭಾರತದ ಜತೆ ಸಂಘರ್ಷಕ್ಕೆ ಇಳಿದಿದೆ ಎಂದರೆ, ಅದು ಇರುವೆಯೊಂದು ಆನೆಯ ಜತೆ ಕಾಳಗಕ್ಕೆ ಇಳಿದಂತೆ” ಎಂದು ಗೇಲಿ ಮಾಡಿದೆ. ಪೂರ್ಣ ವರದಿಗೆ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಭಾರತದಿಂದಲೇ G20 ಶೃಂಗಸಭೆ ಯಶಸ್ವಿ ಎಂದ ಬ್ರೆಜಿಲ್; ಕೆನಡಾ ಆರೋಪಕ್ಕೆ ಏನೆಂದಿತು?
8. ಸುಂದರ ಆಟಗಾರ ಶುಭಮನ್ ಗಿಲ್ ಜತೆಗಿನ ಪ್ರೀತಿಗೆ ಕ್ಲ್ಯಾರಿಟಿ ನೀಡಿದ ಸಾರಾ ತೆಂಡೂಲ್ಕರ್
ಮುಂಬಯಿ: ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಇಬ್ಬರು ಕದ್ದು ಮುಚ್ಚಿ ಡೇಟಿಂಗ್(sara tendulkar and shubman gill relationship) ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ಕೇಳಿಬಂದಿದೆ. ಇದೀಗ ಸಾರಾ ಅವರು ಮಾಡಿರುವ ಟ್ವೀಟ್ ಈ ಜೋಡಿ ನಿಜವಾಗಿಯೂ ಪ್ರೀತಿಸುತ್ತಿರುವುದು ಖಚಿತ ಎಂಬ ಸುಳಿವು ನೀಡಿದಂತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಮಗಳ ವಯಸ್ಸಿನ ನಟಿಯ ಜತೆ ರೊಮ್ಯಾನ್ಸ್ ಮಾಡಲಾರೆ ಎಂದ ವಿಜಯ್ ಸೇತುಪತಿ!
ವಿಜಯ್ ಸೇತುಪತಿ ತಮಿಳು ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಬ್ಯುಸಿ. ಇಷ್ಟೊಂದು ಜನಪ್ರಿಯತೆ ಪಡೆದಿರುವ ವಿಜಯ್ ಸೇತುಪತಿ ಅವರು ನಟಿ ಕೃತಿ ಶೆಟ್ಟಿ (Krithi Shetty) ಜತೆ ನಾಯಕನಾಗಿ ನಟಿಸಲು ನಿರಾಕರಿಸಿದ್ದಾರೆ. ಮಗಳ ಪಾತ್ರ ಮಾಡಿದ ನಟಿ ಜತೆ ರೊಮ್ಯಾನ್ಸ್ ಮಾಡಲಾರೆʼ ಎಂದು ನಟ ಹೇಳಿದ್ದಾರಂತೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಸಿಲ್ಕ್ ಸ್ಮಿತಾ ಶವದ ಮೇಲೆ ನಡೆದಿತ್ತಂತೆ ಸಾಮೂಹಿಕ ಅತ್ಯಾಚಾರ: ನಟಿಯ ಪುಣ್ಯತಿಥಿಯಂದೇ ಹೊರಬಿತ್ತು ಸತ್ಯ
ಸಿಲ್ಕ್ ಸ್ಮಿತಾ (Silk Smitha) ಎಂಬ ಅಪ್ಸರೆಯಂಥ ನಟಿ ಬದುಕಿನಲ್ಲಿ ಏನೆಲ್ಲ ಅನುಭವಿಸಿದರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಅವರು ಮೃತಪಟ್ಟ ಬಳಿಕ ಅವರ ಶವದ ಮೇಲೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಭಯಾನಕ ಸುದ್ದಿ ಮತ್ತೊಮ್ಮೆ ವೈರಲ್ ಆಗಿದೆ. ಏನಿದು ಪೈಶಾಚಿಕ ಕೃತ್ಯ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ದೇಶ
Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ
ಮಹಿಳಾ ಮೀಸಲಾತಿ ವಿಧೇಯಕವನ್ನು (Women’s Reservation Bill) ತೀವ್ರವಾಗಿ ವಿರೋಧಿಸಿದ ರಾಜಕೀಯ ಪಕ್ಷಗಳು ಮಹಿಳೆಯರ ಏಕತೆ ಮತ್ತು ಶಕ್ತಿಯಿಂದಾಗಿ ಸಂಸತ್ತಿನಲ್ಲಿ ಅದನ್ನು ಅನಿವಾರ್ಯವಾಗಿ ಬೆಂಬಲಿಸಬೇಕಾಯಿತು ಎಂದು ಪ್ರಧಾನಿ ಮೋದಿ ಹೇಳಿದರು
ನವದೆಹಲಿ: ಈ ಹಿಂದೆ ಮಹಿಳಾ ಮೀಸಲಾತಿ ವಿಧೇಯಕವನ್ನು (Women’s Reservation Bill) ವಿರೋಧಿಸಿದ್ದ ಮತ್ತು ಮೂರು ದಶಕಗಳಿಂದ ಬಾಕಿ ಉಳಿಸಿಕೊಂಡಿದ್ದ ರಾಜಕೀಯ ಪಕ್ಷಗಳು ಈಗ ಸಂಸತ್ತಿನ ಉಭಯ ಸದನಗಳಲ್ಲಿ ದಾಖಲೆಯ ಮತಗಳಿಂದ ವಿಧೇಯಕ ಅಂಗೀಕಾರವಾಗಿರುವುದನ್ನು ಕಂಡು ಭೀತಿಗೆ ಒಳಗಾಗಿ ನಡುಗುತ್ತಿವೆ ಎಂದು ಪ್ರಧಾನಿ ನರೇಂದ್ರ (PM Narendra Modi) ಮೋದಿ ಶನಿವಾರ ಹೇಳಿದ್ದಾರೆ.
ವಾರಣಾಸಿಯ (ಕಾಶಿ) ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ನಾರಿ ಶಕ್ತಿ ವಂದನ ಕಾರ್ಯಕ್ರಮದಲ್ಲಿ 5,000 ಮಹಿಳೆಯರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು “ಕಳೆದ ಮೂರು ದಶಕಗಳಿಂದ ಈ ವಿಧೇಯಕ ಬಾಕಿ ಉಳಿದಿತ್ತು. ಆದರೆ ಸಂಸತ್ತಿನ ಉಭಯ ಸದನಗಳಲ್ಲಿ ತಾಯಂದಿರು ಮತ್ತು ಸಹೋದರಿಯರ ಏಕತೆ ಮತ್ತು ಶಕ್ತಿಯಿಂದಾಗಿ ಅದು ಅಂಗೀಕಾರಗೊಂಡಿದೆ. ಇದೇ ವೇಳೆ ವಿಧೇಯಕವನ್ನು ಸತತವಾಗಿ ವಿರೋಧಿಸಿದ್ದ ರಾಜಕೀಯ ಪಕ್ಷಗಳು ಅನಿವಾರ್ಯವಾಗಿ ಬೆಂಬಲಕ್ಕೆ ನಿಂತತು. ಆ ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರ ಬಗ್ಗೆ ಹೆದರುತ್ತಿವೆ. ಅವರು ನಡುಗುತ್ತಿದ್ದಾರೆ. ಹೀಗಾಗಿ ವಿಧೇಯಕವನ್ನು ಬೆಂಬಲಿಸಿದರು ಮತ್ತು ಅದನ್ನು ಸಂಸತ್ತಿನ ಉಭಯ ಸದನಗಳಲ್ಲಿ ದಾಖಲೆಯ ಮತಗಳಿಂದ ಅಂಗೀಕರಿಸಿದರು ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕರಿಸಿದ ಬಳಿಕ ಕಾಶಿಗೆ ಬಂದಿರುವದು ಅದೃಷ್ಟದ ವಿಷಯ ಎಂಬುದಾಗಿಯೂ ಇದೇ ವೇಳೆ ಮೋದಿ ಹೇಳಿದರು.
ಕಾಶಿಯಲ್ಲಿ ಮಾತೃಶಕ್ತಿಯ ವೈಭವ
ಕಾಶಿ ನಗರ ತಾಯಿ ಕೂಷ್ಮಾಂಡ, ತಾಯಿ ಶೃಂಗಾರ ಗೌರಿ, ತಾಯಿ ಅನ್ನಪೂರ್ಣ ಮತ್ತು ತಾಯಿ ಗಂಗಾ ಇರುವ ಪವಿತ್ರ ನಗರ. ಮಾತೃಶಕ್ತಿಯ ವೈಭವವು ಈ ಸ್ಥಳದ ಪ್ರತಿಯೊಂದು ಭಾಗಕ್ಕೂ ಅಂಟಿಕೊಂಡಿದೆ. ವಿಂಧ್ಯಾವಾಸಿನಿ ದೇವಿ ಕೂಡ ಬನಾರಸ್ ನಿಂದ ಬಹಳ ದೂರದಲ್ಲಿಲ್ಲ. ಅಹಲ್ಯಾಬಾಯಿ ಹೋಳ್ಕರ್ ಅವರ ಸತ್ಕಾರ್ಯಗಳಿಗೆ ಕಾಶಿ ನಗರವು ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ : Women’s Reservation Bill: ಮೋದಿಯವರ ಮಹಿಳಾ ಮೀಸಲಾತಿ 2024, 2029, 2034ರಲ್ಲೂ ಜಾರಿಯಾಗಲ್ಲ: ಸಿದ್ದರಾಮಯ್ಯ
ಮಹಾದೇವನಿಗಿಂತ ಮೊದಲು ತಾಯಿ ಪಾರ್ವತಿ ಮತ್ತು ಗಂಗೆಯನ್ನು ಪೂಜಿಸುವ ಜನರು ನಾವು. ನಮ್ಮ ಕಾಶಿ ರಾಣಿ ಲಕ್ಷ್ಮಿಬಾಯಿಯಂತವರ ಜನ್ಮಸ್ಥಳವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷ್ಮಿಬಾಯಿಯಂತಹ ರಾಣಿಯಿಂದ ಹಿಡಿದು ಮಿಷನ್ ಚಂದ್ರಯಾನವನ್ನು ಮುನ್ನಡೆಸಿದ ಮಹಿಳಾ ವಿಜ್ಞಾನಿಗಳವರೆಗೆ ನಾವು ಪ್ರತಿ ಅವಧಿಯಲ್ಲೂ ಮಹಿಳಾ ನಾಯಕತ್ವದ ಶಕ್ತಿಯನ್ನು ಸಾಬೀತುಪಡಿಸಿದ್ದೇವೆ ಎಂದು ಮೋದಿ ಅವರು ಹೇಳಿದರು. ನಾರಿ ಶಕ್ತಿ ವಂದನ ಕಾಯ್ದೆಯು ವಿಶಾಲ ದೃಷ್ಟಿಕೋನವನ್ನು ಹೊಂದಿದೆ ಎಂದು ಅವರು ನುಡಿದರು.
ಮಹಿಳೆಯರ ಸಬಲೀಕರಣ
ಮಹಿಳೆಯರು ಸಾಧನೆಗೆ ಯಾರ ಸಹಾಯ ಅಗತ್ಯವಿಲ್ಲದಂತಹ ವ್ಯವಸ್ಥೆಯನ್ನು ರಚಿಸಲು ನಾವು ಬಯಸುತ್ತೇವೆ. ಇದಕ್ಕಾಗಿ, ಕಾನೂನಿನ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವುದು ಅವಶ್ಯಕ. ಆದ್ದರಿಂದ, ಈ ಕಾನೂನನ್ನು ನಾರಿ ಶಕ್ತಿ ವಂದನ್ ಕಾಯ್ದೆ ಎಂದು ಹೆಸರಿಸಿದ್ದೇವೆ. ಕೆಲವು ಜನರಿಗೆ ಇದರಲ್ಲಿಯೂ ವಂದನ್ ಎಂಬ ಪದದೊಂದಿಗೆ ಸಮಸ್ಯೆಗಳಿವೆ. ನಾವು ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಪೂಜಿಸದಿದ್ದರೆ ಇನ್ನೇನು ಮಾಡಬಹುದು? ಮಹಿಳಾ ಶಕ್ತಿಯನ್ನು ಪೂಜಿಸುವುದರ ಅರ್ಥವೇನೆಂದು ಈ ಜನರಿಗೆ ಅರ್ಥವಾಗುವುದಿಲ್ಲ. ಇಂತಹ ನಕಾರಾತ್ಮಕ ಚಿಂತನೆಯನ್ನು ತಪ್ಪಿಸುವ ಮೂಲಕ ನಾವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬೇಕು ಎಂಬುದಾಗಿ ಮೋದಿ ಹೇಳಿದರು.
ನಾರಿ ಶಕ್ತಿ ವಂದನ್ ಅಧಿನಿಯಮ್ ಕಾನೂನು “ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ” ಎಂದು ಮೋದಿ ಹೇಳಿದರು.
ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ
ಇಲ್ಲಿನ ಗಂಜಾರಿ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ತಮ್ಮ ಸರ್ಕಾರ ದೇಶದ ದೂರದ ಪ್ರದೇಶಗಳು ಸೇರಿದಂತೆ ಪ್ರತಿಯೊಂದು ಮೂಲೆಯಲ್ಲೂ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.
1,115 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 16 ಅಟಲ್ ಅವಸಿಯಾ ವಿದ್ಯಾಲಯಗಳನ್ನು (ವಸತಿ ಶಾಲೆಗಳು) ಮೋದಿ ಉದ್ಘಾಟಿಸಿದರು. ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
-
ವೈರಲ್ ನ್ಯೂಸ್6 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಕರ್ನಾಟಕ11 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ15 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
South Cinema8 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಅಂಕಣ18 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ಬಾಲಿವುಡ್11 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕ್ರಿಕೆಟ್11 hours ago
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
-
ಪ್ರಮುಖ ಸುದ್ದಿ4 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ