ಗಂಗಾವತಿ: ಹಂಪಿ (Hampi) ಅಭಿವೃದ್ಧಿ ಪ್ರಾಧಿಕಾರದಿಂದ ನಮ್ಮನ್ನು ಕೈಬಿಟ್ಟು ಪ್ರತ್ಯೇಕ ಆನೆಗೊಂದಿ (Anegondi) ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಒತ್ತಾಯಿಸಿ ಜನತಾಪಕ್ಷದ ರಾಜ್ಯ ಉಪಾಧ್ಯಕ್ಷ ಟಿ. ಚಕ್ರವರ್ತಿ ನಾಯಕ್ ಸರ್ಕಾರಕ್ಕೆ (Government) ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ಅವರು, ತಾಲೂಕಿನ ಆನೆಗೊಂದಿ ಭಾಗದಲ್ಲಿನ ಕಿಷ್ಕಿಂಧಾ ಅಂಜನಾದ್ರಿ ಸೇರಿ ಸುತ್ತಲಿನ ಐತಿಹಾಸಿಕ ಮತ್ತು ಸೌಂದರ್ಯ ಸ್ಥಳಗಳ ವೀಕ್ಷಣೆಗೆ ನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಬಿಗಿಯಾದ ಕ್ರಮಗಳಿಂದ ಆನೆಗೊಂದಿ ಭಾಗದಲ್ಲಿನ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳುತ್ತಿದೆ. ಹೀಗಾಗಿ ಆನೆಗೊಂದಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿದರೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Saree Walkathon : ಲಂಡನ್‌ನಲ್ಲಿ ನಡೆಯಲಿದೆ 500 ಭಾರತೀಯ ನಾರಿಯರ ಸೀರೆ ಮ್ಯಾರಥಾನ್!
ರಾಜ್ಯ ಸರ್ಕಾರ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದ ನಾಲ್ಕು ಪಂಚಾಯಿತಿಗಳನ್ನು ಬೇರ್ಪಡಸಬೇಕು. ಆನೆಗೊಂದಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಈ ಭಾಗದ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಕಾಳಜಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೆ ಈ ಬಗ್ಗೆ ಪರಿಶೀಲಿಸಬೇಕು. ಆನೆಗೊಂದಿಯಲ್ಲಿ ಅಂಜನಾದ್ರಿ, ಪಂಪಾ ಸರೋವರ, ನವವೃಂದಾವನಗಡ್ಡೆ, ವಾಲಿಕಿಲ್ಲಾ, ಆದಿಶಕ್ತಿ ದೇಗುಲ, ಋಷಿಮುಖ ಪರ್ವತ, ಏಳುಗುಡ್ಡ ಪ್ರದೇಶಗಳಿವೆ.
ಇದನ್ನೂ ಓದಿ: Income tax notice : ಐಟಿ ರಿಟರ್ನ್ ಮಾಡದ ತೆರಿಗೆದಾರರಿಗೆ 1 ಲಕ್ಷ ನೋಟಿಸ್
ಪ್ರಕೃತಿ ಸೌಂದರ್ಯಕ್ಕಾಗಿ ಸಾಣಾಪೂರ ಜಲಾಶಯ ಸೇರಿದಂತೆ ಸಾಕಷ್ಟು ಉತ್ತಮ ತಾಣಗಳಿವೆ. ಇವುಗಳನ್ನು ನೋಡಲು ನಿತ್ಯವೂ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕ ಕ್ರಮ ಕೈಗೊಳ್ಳಬೇಕು. ಅಕ್ರಮ ಚಟುವಟಿಕೆ ನಿಯಂತ್ರಣ ಮತ್ತು ಜನರ ಸುರಕ್ಷತೆಗಾಗಿ ಆನೆಗೊಂದಿ, ಅಂಜನಾದ್ರಿ, ಅಥವಾ ಸಾಣಾಪೂರದಲ್ಲಿ ಪೊಲೀಸ್ ಠಾಣೆ ಆರಂಭಿಸಬೇಕು. ಸಂಚಾರಿ ಪೊಲೀಸ್ ವ್ಯವಸ್ಥೆ ಮತ್ತು ಅಂಜನಾದ್ರಿ ಹತ್ತಿರ ಆಸ್ಪತ್ರೆ ಸ್ಥಾಪಿಸಬೇಕು.
ಇದನ್ನೂ ಓದಿ: Road Accident : ಮಾವು ತುಂಬಿದ್ದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ; ಕಾರ್ಮಿಕ ಸಾವು, ಮೂವರಿಗೆ ಗಾಯ
ಹಂಪಿಯಿಂದ ಬೇರ್ಪಡಿಸಿ ಪ್ರತೇಕ ಆನೆಗೊಂದಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಕೂಡಲೇ ಸರ್ಕಾರ ಪ್ರಾಧಿಕಾರ ರಚನೆಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.