Income tax notice : ಐಟಿ ರಿಟರ್ನ್‌ ಮಾಡದ ತೆರಿಗೆದಾರರಿಗೆ 1 ಲಕ್ಷ ನೋಟಿಸ್ Vistara News

ವಾಣಿಜ್ಯ

Income tax notice : ಐಟಿ ರಿಟರ್ನ್‌ ಮಾಡದ ತೆರಿಗೆದಾರರಿಗೆ 1 ಲಕ್ಷ ನೋಟಿಸ್

Income tax notice ಐಟಿ ರಿಟರ್ನ್‌ ಸಲ್ಲಿಸದ ಹಾಗೂ ಆದಾಯ ವಿವರ ನೀಡದಿರುವ ತೆರಿಗೆದಾರರಿಗೆ 1 ಲಕ್ಷ ನೋಟಿಸ್‌ ಕಳಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾಆಮನ್‌ ತಿಳಿಸಿದ್ದಾರೆ. ವಿವರ ಇಲ್ಲಿದೆ.

VISTARANEWS.COM


on

Nirmala Sitaraman
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸರ್ಕಾರ ಐಟಿ ರಿಟರ್ನ್‌ ಮಾಡದ ತೆರಿಗೆದಾರರಿಗೆ 1 ಲಕ್ಷ ನೋಟಿಸ್‌ಗಳನ್ನು ಜಾರಿಗೊಳಿಸಿದೆ ಎಂದು (Income tax notice) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. (non-filing of returns) ಸರಿಯಾದ ಆದಾಯ ನಮೂದಿಸದವರಿಗೂ ನೋಟಿಸ್‌ ರವಾನಿಸಲಾಗಿದೆ.

50 ಲಕ್ಷ ರೂ. ಆಸುಪಾಸಿನ ತನಕ ಆದಾಯ ಪತ್ತೆಯಾಗಿರುವ ಪ್ರಕರಣಗಳಲ್ಲಿ ನೋಟಿಸ್‌ ರವಾನಿಸಲಾಗಿದೆ. ಪ್ರಸಕ್ತ ಸಾಲಿನ ಅಂತ್ಯಕ್ಕೆ ಪ್ರಕರಣಗಳು ಇತ್ಯರ್ಥ ಆಗುವ ನಿರೀಕ್ಷೆ ಇದೆ. ಇದುವರೆಗೆ 80 ಲಕ್ಷ ರೂ. ರಿಫಂಡ್‌ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಸಿಬಿಡಿಟಿಯ 164ನೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 2022-23ರಲ್ಲಿ ಇದುವರೆಗೆ 4 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಐಟಿಆರ್‌ಗಳನ್ನು ಸಂಸ್ಕರಿಸಲಾಗಿದೆ. 4-6 ವರ್ಷ ಹಳೆಯ ರಿಟರ್ನ್‌ಗಳಿಗೆ ಸಂಬಂಧಿಸಿ ನೋಟಿಸ್‌ ರವಾನಿಸಲಾಗಿದೆ. ಈ ಎಲ್ಲ ನೋಟಿಸ್‌ಗಳನ್ನು ಸಮಗ್ರ ಪರಿಶೀಲನೆಯ ಬಳಿಕವಷ್ಟೇ ಕಳಿಸಲಾಗಿದೆ. ಹಾಗೂ ಇದೆಲ್ಲವೂ ಕ್ಲಿಯರ್‌ ಆಗುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.

ಆದಾಯ ತೆರಿಗೆ ಕಾಯಿದೆಯ ಪ್ರಕಾರ 6 ವರ್ಷಗಳ ಹಿಂದಿನ ತೆರಿಗೆ ಅಸೆಸ್‌ಮೆಂಟ್‌ ಅನ್ನು ಮತ್ತೊಮ್ಮೆ ಪರಿಶೀಲನೆ ಮಾಡಬಹುದು. ಈ ಹಿಂದೆ ತೆರಿಗೆದಾರರು 10 ವರ್ಷಗಳ ತನಕದ ಟ್ಯಾಕ್ಸ್‌ ರೆಕಾರ್ಡ್‌ಗಳನ್ನು ಇಟ್ಟುಕೊಳ್ಳಬೇಕಾಗಿರುತ್ತಿತ್ತು. ಆದರೆ ಈಗ 6 ವರ್ಷಕ್ಕಿಳಿಸಲಾಗಿದೆ. 4-5-6 ವರ್ಷ ಹಳೆಯ ಕೇಸ್‌ಗಳನ್ನು ನಿರ್ದಿಷ್ಟ ಸಂದರ್ಭ ಮಾತ್ರ ಮತ್ತೆ ತೆರೆಯಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಕಳೆದ 4 ವರ್ಷಗಳಲ್ಲಿ ಐಟಿಆರ್‌ ಸಲ್ಲಿಸುವವರ ಸಂಖ್ಯೆಯಲ್ಲೂ 14% ಏರಿಕೆಯಾಗಿದೆ. ಆದಾಯ ತೆರಿಗೆ ಇಲಾಖೆ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಬಹಳಷ್ಟು ಕೆಲಸಗಳು ಬಾಕಿಯಾಗಿದೆ ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್‌ ಗುಪ್ತ ತಿಳಿಸಿದ್ದಾರೆ.

ಇದನ್ನೂ ಓದಿ: ITR Filing : ಐಟಿ ರಿಟರ್ನ್‌ನಲ್ಲಿ ಎಷ್ಟು ವಿಧಗಳಿವೆ? ಯಾರು ಯಾವುದನ್ನು ಬಳಸಬೇಕು?

ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಕೊನೆಯ ದಿನ ಜುಲೈ 31 ಆಗಿದೆ. ಇದನ್ನು ಮುಂದೂಡುವ ಸಾಧ್ಯತೆ ಇಲ್ಲ ಎಂದು ಕಂದಾಯ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ ತಿಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಸಲ ಹೆಚ್ಚು ಐಟಿ ರಿಟರ್ನ್‌ ಸಲ್ಲಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಬಿಜೆಪಿ ಜಯಭೇರಿ ಬೆನ್ನಲ್ಲೇ ನಿಫ್ಟಿ, ಸೆನ್ಸೆಕ್ಸ್‌ ನೆಗೆತ, ಸುಧಾರಿಸಿದ ರೂಪಾಯಿ ಮೌಲ್ಯ!

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಹೊಸ ಲವಲವಿಕೆ ಕಾಣಿಸಿದೆ. ಬಿಜೆಪಿ ಗೆಲುವಿಗೂ, ಷೇರು ಮಾರುಕಟ್ಟೆಗೆ ಏನು ಸಂಬಂಧ ಎಂಬುದಕ್ಕೆ ಉತ್ತರ ಇಲ್ಲಿದೆ.

VISTARANEWS.COM


on

Narendra Modi And Share Market
Koo

ಮುಂಬೈ: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವು ಸಾಧಿಸಿದ (Assembly Election Results 2023) ಬೆನ್ನಲ್ಲೇ ದೇಶದ ಷೇರುಪೇಟೆಯಲ್ಲಿ (Stock Market) ಹೊಸ ಉತ್ಸಾಹ ಮೂಡಿದೆ. ಸೋಮವಾರ ನಿಫ್ಟಿ, ಸೆನ್ಸೆಕ್ಸ್‌ ದಾಖಲೆಯ ಏರಿಕೆ ಕಂಡಿದ್ದು, ಚುನಾವಣೆ ಫಲಿತಾಂಶವೇ ಇದಕ್ಕೆ ಕಾರಣ ಎಂದು ಷೇರುಪೇಟೆ ತಜ್ಞರು ತಿಳಿಸಿದ್ದಾರೆ. ಮತ್ತೊಂದೆಡೆ ಡಾಲರ್‌ ಎದುರು ರೂಪಾಯಿ ಮೌಲ್ಯವೂ ಸುಧಾರಿಸಿಕೊಂಡಿದೆ.

ಷೇರು ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಭಾರಿ ಲವಲವಿಕೆ ಕಂಡುಬಂದಿದೆ. ಬಿಎಸ್‌ಇ ಸೆನ್ಸೆಕ್ಸ್‌ 877.43 ಪಾಯಿಂಟ್‌ಗಳ ಏರಿಕೆಯೊಂದಿಗೆ (ಶೇ.1.3%) 68,358.52 ಅಂಕಗಳೊಂದಿಗೆ ಸಾರ್ವಕಾಲಿಕ ಸಾಧನೆ ಮಾಡಿತು. ಇನ್ನು ನಿಫ್ಟಿಯೂ 284.80 ಅಂಕಗಳ ಏರಿಕೆಯೊಂದಿಗೆ (ಶೇ.1.41) 20,552.70 ಅಂಕಗಳನ್ನು ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಪಾಯಿಂಟ್‌ಗಳ ದಾಖಲೆ ಬರೆಯಿತು.

ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಡಾಲರ್‌ ಎದುರು ರೂಪಾಯಿ ಮೌಲ್ಯವು 6 ಪೈಸೆ ಸುಧಾರಣೆಯಾಗಿದೆ. ಇನ್ನು ಷೇರು ಮಾರುಕಟ್ಟೆಯಲ್ಲ ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ ಹಲವು ಕಂಪನಿಗಳ ಮಾರುಕಟ್ಟೆ ಬಂಡವಾಳವು 4.09 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಬೆಳಗ್ಗೆಯ ಟ್ರೇಡಿಂಗ್‌ನಲ್ಲಿ ಅದಾನಿ ಗ್ರೂಪ್‌ ಕಂಪನಿಗಳು ಹೆಚ್ಚು ಲಾಭ ಗಳಿಸಿವೆ. ಹಾಗೆಯೇ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಎನ್‌ಟಿಪಿಸಿ ಹಾಗೂ ಲಾರ್ಸೆನ್‌ & ಟರ್ಬೊ ಕೂಡ ಹೆಚ್ಚಿನ ಲಾಭ ಗಳಿಸಿದವು.

ಷೇರು ಪೇಟೆಗೂ, ಚುನಾವಣೆಗೂ ಏನು ಸಂಬಂಧ?

ಚುನಾವಣೆ ಫಲಿತಾಂಶಕ್ಕೂ, ಷೇರುಪೇಟೆ ವಹಿವಾಟಿಗೂ ಸಂಬಂಧವಿದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಷೇರುಪೇಟೆಯು ಸ್ಥಿರ ಹಾಗೂ ಸುಧಾರಣೆ ಪರವಾಗಿರುವ ರಾಜಕಾರಣವನ್ನು ಬಯಸುತ್ತದೆ. ಮಾರುಕಟ್ಟೆ ದೃಷ್ಟಿಯಿಂದ ಚುನಾವಣೆ ಫಲಿತಾಂಶವು ನಿರೀಕ್ಷೆಗಿಂತ ಹೆಚ್ಚಾಗಿದೆ. ಬಿಜೆಪಿ ಗೆಲುವು ಸಾಧಿಸಿದ ಕಾರಣ ಷೇರು ಮಾರುಕಟ್ಟೆಯಲ್ಲಿ 500 ಪಾಯಿಂಟ್‌ಗಳ ಏರಿಕೆಯಾಗಿದೆ. ಇದೇ ಬೆಳವಣಿಗೆ ಮುಂದುವರಿಯಲಿದೆ” ಎಂದು ಹೂಡಿಕೆ ತಜ್ಞ ವಿ.ಕೆ. ವಿಜಯ್‌ಕುಮಾರ್‌ ಅವರು ಪಿಟಿಐಗೆ ತಿಳಿಸಿದ್ದಾರೆ.

Rajastan BJP Win

ಇದನ್ನೂ ಓದಿ: PM Narendra Modi: 3 ರಾಜ್ಯದ ಗೆಲುವು 2024ರ ಹ್ಯಾಟ್ರಿಕ್ ಜಯದ ಮುನ್ಸೂಚನೆ; ಮೋದಿ ಬಣ್ಣನೆ

ಮಧ್ಯಪ್ರದೇಶದಲ್ಲಿ ಒಟ್ಟು 230 ಕ್ಷೇತ್ರಗಳ ಪೈಕಿ ಬಿಜೆಪಿ 163, ಕಾಂಗ್ರೆಸ್‌ 66 ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಜಸ್ಥಾನದ 199 ಕ್ಷೇತ್ರಗಳ ಪೈಕಿ ಬಿಜೆಪಿ 115, ಕಾಂಗ್ರೆಸ್‌ 69 ಹಾಗೂ 18 ಕ್ಷೇತ್ರಗಳು ಇತರೆ ಪಕ್ಷಗಳ ಪಾಲಾಗಿವೆ. ಛತ್ತೀಸ್‌ಗಢದಲ್ಲಿರುವ ಒಟ್ಟು 90 ಕ್ಷೇತ್ರಗಳ ಪೈಕಿ ಬಿಜೆಪಿ 54, ಕಾಂಗ್ರೆಸ್‌ 35 ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಮೂರೂ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Gold Rate Today: ಚಿನ್ನದ ಬೆಲೆ ದಿಢೀರನೆ 40 ರೂ. ಏರಿಕೆ; ಇಷ್ಟಿದೆ ಇಂದಿನ ದರ

Gold Rate Today: ಬೆಂಗಳೂರಿನಲ್ಲಿ ಸೋಮವಾರ ಚಿನ್ನದ ಬೆಲೆ ದಿಢೀರನೆ ಜಾಸ್ತಿಯಾಗಿದೆ. ಹಾಗಾಗಿ, ಇಂದು ಚಿನ್ನ ಖರೀದಿಸುವವರಿಗೆ ಬೆಲೆಯು ತುಸು ಹೆಚ್ಚೇ ಹೊರೆಯಾಗಲಿದೆ.

VISTARANEWS.COM


on

Ashika Ranganath
Koo

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸೋಮವಾರ (ಡಿಸೆಂಬರ್‌ 4) (Gold Rate Today) ಚಿನ್ನದ ಬೆಲೆ ಏಕಾಏಕಿ ಜಾಸ್ತಿಯಾಗಿದೆ. ನಗರದಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಹಾಗೂ 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 44 ರೂ. ಏರಿಕೆಯಾಗಿದೆ. ಇಂದರೊಂದಿಗೆ 22 ಕ್ಯಾರಟ್‌ನ ಒಂದು ಗ್ರಾಂಗೆ 5,885 ರೂ. ಆದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನಕ್ಕೆ 6,420 ರೂ. ಆಗಿದೆ.

ಭಾನುವಾರ (ಡಿಸೆಂಬರ್‌ 3) ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. 22 ಕ್ಯಾರಟ್‌ನ ಚಿನ್ನವು ಗ್ರಾಂಗೆ 5,845 ರೂ. ಹಾಗೂ 24 ಕ್ಯಾರಟ್‌ನ ಚಿನ್ನದ ಬೆಲೆ ಒಂದು ಗ್ರಾಂಗೆ 6,380 ರೂ. ಇತ್ತು. ಶನಿವಾರ (ಡಿಸೆಂಬರ್‌ 2) ಹಾಗೂ ಶುಕ್ರವಾರ (ಡಿಸೆಂಬರ್‌ 1) ಕೂಡ ಬೆಲೆ ಏರಿಕೆಯಾಗಿತ್ತು. ಕೆಲ ದಿನಗಳಿಂದ ಚಿನ್ನದ ಬೆಲೆಯು ಸತತವಾಗಿ ಏರಿಕೆಯಾಗುತ್ತಿರುವ ಕಾರಣ ಖರೀದಿದಾರರ ಜೇಬಿಗೆ ಕತ್ತರಿ ಬೀಳುತ್ತಿದೆ.

gold rate

ಚಿನ್ನದ ಕ್ಯಾರಟ್‌ ಎಂದರೇನು?

ಚಿನ್ನದ ಕ್ಯಾರಟ್‌ ಎಂಬುದು ಚಿನ್ನದ ಶುದ್ಧತೆಯನ್ನು ಅಳೆಯಲು ಬಳಸುವ ಪದ. ಚಿನ್ನದ ಶುದ್ಧತೆಯನ್ನು ಅಳೆಯಲು ಕ್ಯಾರಟ್ ಅನ್ನು ಒಂದು ಘಟಕವಾಗಿ ಬಳಸಲಾಗುತ್ತದೆ. ಕ್ಯಾರಟೇಜ್ ಹೆಚ್ಚು‌ ಇದ್ದಷ್ಟೂ ಚಿನ್ನವು ಶುದ್ಧವಾಗಿರುತ್ತದೆ. ಇತರ ಲೋಹಗಳೊಂದಿಗೆ ಮಿಶ್ರಿತ ಚಿನ್ನದ ಶುದ್ಧತೆಯ ಮಾಪನವೇ ‘ಕ್ಯಾರಟೇಜ್’. ಕ್ಯಾರಟ್‌ನ ಚಿಹ್ನೆಯು “K”

24 ಕ್ಯಾರಟ್ ಎಂಬುದು ಬೇರೆ ಯಾವುದೇ ಲೋಹಗಳ ಮಿಶ್ರವಿಲ್ಲದ ಶುದ್ಧ ಚಿನ್ನವಾಗಿದೆ. 24 ಕ್ಯಾರಟ್ ಚಿನ್ನವನ್ನು ಶುದ್ಧ ಚಿನ್ನ ಅಥವಾ 100 ಪ್ರತಿಶತ ಚಿನ್ನ ಎಂದೂ ಕರೆಯಲಾಗುತ್ತದೆ. ಚಿನ್ನದ ಎಲ್ಲಾ 24 ಭಾಗಗಳು ಯಾವುದೇ ಲೋಹವನ್ನು ಸೇರಿಸಿರುವುದಿಲ್ಲ. ಇದು 99.9 ಪ್ರತಿಶತ ಶುದ್ಧವಾಗಿರುತ್ತದೆ. ಇದು ಒಂದು ವಿಶಿಷ್ಟವಾದ ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ನಾಣ್ಯಗಳು ಮತ್ತು ಬಾರ್‌ಗಳನ್ನು ಹೆಚ್ಚಾಗಿ 24 ಕ್ಯಾರೆಟ್ ಚಿನ್ನದಿಂದ ಖರೀದಿಸಲಾಗುತ್ತದೆ.

24 ಕ್ಯಾರಟ್ ಚಿನ್ನ ಮೃದುವಾಗಿರುತ್ತದೆ, ಕಡಿಮೆ ಸಾಂದ್ರತೆಯದಾಗಿರುತ್ತದೆ. ಆದ್ದರಿಂದ ಆಭರಣಗಳನ್ನು ಮಾಡಲು ಇದು ಸೂಕ್ತವಲ್ಲ. ಕಿವಿ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಬಳಸುವಂತಹ ಎಲೆಕ್ಟ್ರಾನಿಕ್ಸ್ ಮತ್ತು ವೈದ್ಯಕೀಯ ಸಾಧನಗಳಲ್ಲಿ 24k ಚಿನ್ನವನ್ನು ಬಳಸಲಾಗುತ್ತದೆ.

22 ಕ್ಯಾರೆಟ್ ಚಿನ್ನ ಇದರಲ್ಲಿ 22 ಭಾಗಗಳಲ್ಲಿ ಚಿನ್ನ ಹಾಗೂ ಉಳಿದ ಎರಡು ಭಾಗಗಳಲ್ಲಿ ಕೆಲವು ಇತರ ಲೋಹಗಳಿರುತ್ತವೆ. ಆಭರಣಗಳ ತಯಾರಿಕೆಯಲ್ಲಿ ಇದನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳ್ಳಿ, ಸತು, ನಿಕಲ್ ಮತ್ತು ಇತರ ಮಿಶ್ರಲೋಹಗಳಂತಹ ಇತರ ಲೋಹಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಇದು ಚಿನ್ನದ ವಿನ್ಯಾಸವನ್ನು ಗಟ್ಟಿಗೊಳಿಸುತ್ತದೆ ಮತ್ತು ಆಭರಣವನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. 22 ಕ್ಯಾರಟ್ ಚಿನ್ನವು 91.67 ಪ್ರತಿಶತ ಚಿನ್ನವನ್ನು ಹೊಂದಿದ್ದು, ಉಳಿದ 8.33 ಪ್ರತಿಶತ ಬೇರೆ ಲೋಹಗಳಿಂದ ಮಾಡಲ್ಪಟ್ಟಿರುತ್ತದೆ.

ಇದನ್ನೂ ಓದಿ: Namma Metro : ಮೆಟ್ರೋದಲ್ಲಿ ಮಿಸ್‌ ಆದ ಚಿನ್ನದುಂಗುರ ಮರಳಿಸಿದ ಗೋಲ್ಡನ್‌ ಗರ್ಲ್ಸ್‌ !‌

18 ಕ್ಯಾರಟ್ ಚಿನ್ನವು 75 ಪ್ರತಿಶತ ಚಿನ್ನವನ್ನು ಒಳಗೊಂಡಿರುತ್ತದೆ. ಉಳಿದ ತಾಮ್ರ ಅಥವಾ ಬೆಳ್ಳಿಯಂತಹ ಇತರ ಲೋಹಗಳ 25 ಪ್ರತಿಶತದೊಂದಿಗೆ ಮಿಶ್ರಣವಾಗಿರುತ್ತದೆ. ಸ್ಟಡೆಡ್ ಆಭರಣಗಳು ಮತ್ತು ವಜ್ರದ ಆಭರಣಗಳನ್ನು 18 ಕ್ಯಾರಟ್ ಚಿನ್ನವನ್ನು ಬಳಸಿ ತಯಾರಿಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: ಆಧಾರ್‌ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು

Money Guide: ವರ್ಷದ ಕೊನೆಗೆ ಬಂದು ನಿಂತಿದ್ದೇವೆ. ಡಿಸೆಂಬರ್‌ 31ರೊಳಗೆ ಕೆಲವೊಂದು ಕರ್ತವ್ಯಗಳನ್ನು ಮಾಡಿ ಮುಗಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಆ ಕುರಿತಾದ ವಿವರ ಇಲ್ಲಿದೆ.

VISTARANEWS.COM


on

december
Koo

ಬೆಂಗಳೂರು: ವರ್ಷಾಂತ್ಯದ ಡಿಸೆಂಬರ್‌ ಮಾಸಕ್ಕೆ ಕಾಲಿಟ್ಟಿದ್ದೇವೆ. ಕೇಂದ್ರ ಸರ್ಕಾರ ಸೂಚಿಸಿದ ಒಂದಷ್ಟು ಕೆಲಸಗಳನ್ನು ಈ ತಿಂಗಳಾಂತ್ಯಕ್ಕೆ ಮಾಡಿ ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ದಂಡ ಬೀಳಲಿದೆ. ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಹಿಡಿದು ಬ್ಯಾಂಕ್‌ ಲಾಕರ್‌ ಒಪ್ಪಂದ ನವೀಕರಣದವರೆಗೆ ಹಲವು ವಿಚಾರಗಳಿಗೆ ಕೇಂದ್ರ ಡಿಸೆಂಬರ್‌ 31ರ ವರೆಗೆ ಗಡುವು ನೀಡಿದೆ. ಅವಧಿ ಮೀರಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವ ಜತೆಗೆ ಬಳಿಕ ಅದಕ್ಕಾಗಿ ಓಡಾಡುವ ಸಂಧಿಗ್ಥತೆಯೂ ಎದುರಾಗಬಹುದು. ಹೀಗಾಗಿ ಯಾವೆಲ್ಲ ಕರ್ತವ್ಯಗಳನ್ನು ಶೀಘ್ರ ಮುಗಿಸಬೇಕು ಎನ್ನುವುದನ್ನು ಮನಿಗೈಡ್‌ (Money Guide) ವಿವರಿಸಲಿದೆ.

ಆಧಾರ್‌ ಕಾರ್ಡ್‌ ನವೀಕರಣ

ಪ್ರಸ್ತುತ ಆಧಾರ್‌ ಕಾರ್ಡ್‌ ಪ್ರಮುಖ ದಾಖಲೆಯಾಗಿ ಬದಲಾಗಿದೆ. ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆಯುವುದರಿಂದ ಹಿಡಿದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರೆಗೆ ಆಧಾರ್‌ ಕಾರ್ಡ್‌ ಬೇಕೇ ಬೇಕು. ಈ ಹಿಂದೆ ಸರ್ಕಾರ ಆಧಾರ್‌ ಕಾರ್ಡ್‌ ಮಾಡಿಸಿ 10 ವರ್ಷ ಪೂರೈಸಿದವರು ನವೀಕರಣ ಮಾಡಿಸಬೇಕು ಎಂದು ಸೂಚಿಸಿತ್ತು. ಯೂನಿಕ್‌ ಐಡೆಂಟಿಫಿಕೇಷನ್‌ ಅಥಾರಟಿ ಆಫ್‌ ಇಂಡಿಯಾ (Unique Identification Authority of India-UIDAI) ಉಚಿತವಾಗಿ ಆಧಾರ್‌ ಕಾರ್ಡ್‌ ನವೀಕರಿಸುವ ದಿನಾಂಕವನ್ನು 2023ರ ಡಿಸೆಂಬರ್‌ 31ರ ವರೆಗೂ ವಿಸ್ತರಿಸಿದೆ. ಈ ಅವಧಿಯಲ್ಲಿ ವಿಳಾಸ, ಫೋನ್ ಸಂಖ್ಯೆ, ಇಮೇಲ್ ವಿವರಗಳನ್ನು ಉಚಿತವಾಗಿ ನವೀಕರಿಸಬಹುದು ಎಂದು ಸೂಚಿಸಿತ್ತು. 2023ರ ಡಿಸೆಂಬರ್ 31ರ ನಂತರ ನೀವು ನವೀಕರಣಕ್ಕಾಗಿ ಶುಲ್ಕ ಪಾವತಿಸಬೇಕಾಗುತ್ತದೆ.

ಬ್ಯಾಂಕ್‌ ಲಾಕರ್‌ ಒಪ್ಪಂದದ ನವೀಕರಣ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಿಕೊಳ್ಳಲು ಬ್ಯಾಂಕ್‌ಗಳಿಗೆ (Bank locker agreement) ನೀಡಿದ್ದ ಗಡುವನ್ನು 2023ರ ಡಿಸೆಂಬರ್‌ 31ರ ತನಕ ವಿಸ್ತರಿಸಿತ್ತು. ಆರ್‌ಬಿಐ ಈ ಹಿಂದೆ 2021ರ ಆಗಸ್ಟ್‌ 18ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ, 2023ರ ಜನವರಿ 1ರೊಳಗೆ ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಬಳಿಕ ಡಿಸೆಂಬರ್‌ 31ರ ತನಕ ನವೀಕರಿಸಿಕೊಳ್ಳಲು ಕಾಲಾವಕಾಶ ವಿಸ್ತರಿಸಿತ್ತು. ಹೊಸ ಲಾಕರ್ ಒಪ್ಪಂದಗಳು ಕೆಲವು ಪ್ರಮುಖ ಬದಲಾವಣೆಗಳನ್ನು ಹೊಂದಿದೆ. ಉದಾಹರಣೆಗೆ ಲಾಕರ್‌ ನಷ್ಟ ಅಥವಾ ಹಾನಿಯ ಸಂದರ್ಭದಲ್ಲಿ ಬ್ಯಾಂಕ್‌ಗಳು ಪಾವತಿಸಬೇಕಾದ ಪರಿಹಾರದ ಮೊತ್ತ ಹೆಚ್ಚಳ ಇತ್ಯಾದಿ.

ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನ ಸಲ್ಲಿಕೆ

ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ (SEBI) ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನ ಅರ್ಜಿಗಳನ್ನು ಸಲ್ಲಿಸುವ ಗಡುವನ್ನು ಡಿಸೆಂಬರ್ 31, 2023ರ ವರೆಗೆ ವಿಸ್ತರಿಸಿದೆ. ನಾಮನಿರ್ದೇಶನ ಅರ್ಜಿಯು ಮರಣದ ನಂತರ ಡಿಮ್ಯಾಟ್ ಸೆಕ್ಯುರಿಟಿಗಳನ್ನು ಯಾರು ಪಡೆಯಬೇಕು ಎಂಬುದನ್ನು ನಿರ್ಧರಿಸಲು ನೆರವಾಗುತ್ತದೆ.

ಇದನ್ನೂ ಓದಿ: Money Guide: 1.5 ಲಕ್ಷ ರೂ. ಹೂಡಿಕೆ ಮಾಡಿ 2.27 ಕೋಟಿ ರೂ. ಗಳಿಸಿ! ಯಾವುದು ಈ ಸ್ಕೀಂ?

ವಿಶೇಷ ಸ್ಥಿರ ಠೇವಣಿ(ಫಿಕ್ಸ್‌ಡ್‌ ಡೆಪಾಸಿಟ್‌)ಗಳಲ್ಲಿ ಹೂಡಿಕೆ

ಕೆಲವು ಬ್ಯಾಂಕ್‌ಗಳು 2023ರ ಡಿಸೆಂಬರ್‌ವರೆಗೆ ಹೆಚ್ಚಿನ ಬಡ್ಡಿದರಗಳೊಂದಿಗೆ ವಿಶೇಷ ಸ್ಥಿರ ಠೇವಣಿಗಳನ್ನು ನೀಡುತ್ತಿವೆ. ಅದಾಗ್ಯೂ ಈ ಠೇವಣಿಗಳಲ್ಲಿ ಹೂಡಿಕೆ ಮಾಡಲು ಗಡುವು ಇದೆ. ಉದಾಹರಣೆಗೆ ಇಂಡಿಯನ್ ಬ್ಯಾಂಕ್‌ನ ʼಇಂಡ್ ಸೂಪರ್ 400ʼ ಮತ್ತು ʼಇಂಡ್ ಸುಪ್ರೀಂ 300 ಡೇಸ್ʼ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 31, 2023. ಜತೆಗೆ ಎಸ್‌ಬಿಐಯ ಅಮೃತ್ ಕಲಾಶ್ ಯೋಜನೆ ಕೂಡ ಡಿಸೆಂಬರ್ ಕೊನೆಯ ದಿನಕ್ಕೆ ಕೊನೆಯಾಗಲಿದೆ. ಈ ವರ್ಷದ ಫೆಬ್ರವರಿಯಲ್ಲಿ ಎಸ್‌ಬಿಐ ಪರಿಚಯಿಸಿದ್ದ ಅಮೃತ್‌ ಕಲಾಶ್‌ ಯೋಜನೆ ಆಗಸ್ಟ್‌ನಲ್ಲಿ ಮುಕ್ತಾಯವಾಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಬಳಿಕ ದಿನಾಂಕವನ್ನು ಬ್ಯಾಂಕ್‌ ವಿಸ್ತರಿಸಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ದೇಶ

GST Collection: ನವೆಂಬರ್‌ನಲ್ಲಿ 1.67 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ; ಕರ್ನಾಟಕದ ಪಾಲೆಷ್ಟು?

GST Collection: ಪ್ರಸಕ್ತ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹವು ಉತ್ತಮವಾಗಿದೆ. ಇದೇ ಹಣಕಾಸು ವರ್ಷದಲ್ಲಿ ಆರು ಬಾರಿ ಜಿಎಸ್‌ಟಿ ಸಂಗ್ರಹವು 1.6 ಲಕ್ಷ ಕೋಟಿ ರೂ. ದಾಟಿರುವುದು ಇದಕ್ಕೆ ನಿದರ್ಶನವಾಗಿದೆ.

VISTARANEWS.COM


on

GST Collection
Koo

ನವದೆಹಲಿ: ಕೊರೊನಾ ಬಿಕ್ಕಟ್ಟಿನ ಬಳಿಕ ದೇಶದ ಆರ್ಥಿಕತೆ ಏಳಿಗೆಯತ್ತ ಸಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರಕು ಮತ್ತು ಸೇವಾ ತೆರಿಗೆಯ ಸಂಗ್ರಹವೂ (Goods And Service Tax) ಏರಿಕೆಯಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಕಳೆದ ನವೆಂಬರ್‌ ತಿಂಗಳಲ್ಲಿ 1.67 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ (GST Collection) ಆಗಿದೆ. ಇದು ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಶೇ.15ರಷ್ಟು ಏರಿಕೆ ಎಂದು ಕೇಂದ್ರ ಸರ್ಕಾರ (Central Government) ಮಾಹಿತಿ ನೀಡಿದೆ. ಕರ್ನಾಟಕದಿಂದ 11,970 ಕೋಟಿ ರೂ. ಸಂಗ್ರಹವಾಗಿದೆ.

1.67 ಲಕ್ಷ ಕೋಟಿ ರೂಪಾಯಿಯಲ್ಲಿ ಸಿಜಿಎಸ್‌ಟಿ 30,420 ಕೋಟಿ ರೂ., ಎಸ್‌ಜಿಎಸ್‌ಟಿ 38,336 ಕೋಟಿ ರೂ. ಹಾಗೂ ಐಜಿಎಸ್‌ಟಿ 87,009 ಕೋಟಿ ರೂ. (ಆಮದು ಸುಂಕದಿಂದ ಸಂಗ್ರಹವಾದ 39,198 ಕೋಟಿ ರೂ. ಸೇರಿ) ಇದೆ. 2023-24ನೇ ಹಣಕಾಸು ವರ್ಷದಲ್ಲಿ ಆರನೇ ಬಾರಿಗೆ ಜಿಎಸ್‌ಟಿ ಸಂಗ್ರಹ ಮೊತ್ತವು 1.60 ಲಕ್ಷ ಕೋಟಿ ರೂ. ದಾಟಿದೆ. ಕೊರೊನಾ ಹಿನ್ನೆಲೆಯಲ್ಲಿ ಜಿಎಸ್‌ಟಿ ಸಂಗ್ರಹವು ಭಾರಿ ಇಳಿಕೆಯಾಗಿತ್ತು. ಆದರೆ, ಇತ್ತೀಚೆಗೆ ಜಿಎಸ್‌ಟಿ ಸಂಗ್ರಹವು ಗಣನೀಯವಾಗಿ ಏರಿಕೆ ಕಂಡಿದ್ದು, ಕೇಂದ್ರ ಸರ್ಕಾರಕ್ಕೆ ಭರ್ಜರಿ ಆದಾಯವಾಗಿದೆ.

ದೇಶದಲ್ಲಿ ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಪ್ರಮಾಣವು ಎರಡನೇ ಗರಿಷ್ಠ ಕಲೆಕ್ಷನ್‌ ದಾಖಲೆ ಬರೆದಿತ್ತು. ಅಕ್ಟೋಬರ್‌ನಲ್ಲಿ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. 2022ರ ಅಕ್ಟೋಬರ್‌ಗೆ ಹೋಲಿಸಿದರೆ ಇದು ಶೇ.13ರಷ್ಟು ಏರಿಕೆಯಾಗಿತ್ತು. 2022ರ ಅಕ್ಟೋಬರ್‌ನಲ್ಲಿ 1.52 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.

ಸೆಪ್ಟೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 1,62,712 ಕೋಟಿ ರೂ. ಆಗಿತ್ತು. ಈ ಪೈಕಿ ಸಿಜಿಎಸ್‌ಟಿ 29,818 ಕೋಟಿ ರೂ., ಎಸ್‌ಜಿಎಸ್‌ಟಿ 37,657 ಕೋಟಿ ರೂ., ಐಜಿಎಸ್‌ಟಿ 83,623 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 41,145 ಕೋಟಿ ರೂ. ಸೇರಿದಂತೆ) ಮತ್ತು ಸೆಸ್ 11,613 ಕೋಟಿ ರೂ. (ಸಂಗ್ರಹಿಸಿದ ಸರಕುಗಳ ರೂ 881 ಕೋಟಿ ಸೇರಿದಂತೆ) ಸಂಗ್ರಹವಾಗಿತ್ತು.

ಇದನ್ನೂ ಓದಿ: GST Evasion: ಜಿಎಸ್‌ಟಿ ವಂಚಕರಿಗೆ ಗುನ್ನ; 50 ಸಾವಿರ ಕೋಟಿ ರೂ. ವಸೂಲಿ ಮಾಡಲಿದೆ ಕೇಂದ್ರ

ಇದುವರೆಗಿನ ಗರಿಷ್ಠ ಸಂಗ್ರಹ ಎಷ್ಟು?

2023ರ ಏಪ್ರಿಲ್‌ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಜಿಎಸ್‌ಟಿ ಜಾರಿಯಾದ ಬಳಿಕವೇ ಒಂದು ತಿಂಗಳಲ್ಲಿ ಸಂಗ್ರಹವಾದ ಗರಿಷ್ಠ ಜಿಎಸ್‌ಟಿ ಇದಾಗಿದೆ. ಇದರ ನಂತರ ಅಕ್ಟೋಬರ್‌ನಲ್ಲಿ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿರುವುದು ಎರಡನೇ ಗರಿಷ್ಠ ಎನಿಸಿದೆ. ಇದರೊಂದಿಗೆ 2023-24ನೇ ಹಣಕಾಸು ವರ್ಷದಲ್ಲಿ ಮಾಸಿಕ ಸರಾಸರಿ 1.66 ಲಕ್ಷ ಕೋಟಿ ರೂ. ಸಂಗ್ರಹವಾದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Kenda teaser kannada
South Cinema21 mins ago

Kannada New Movie: ಟೀಸರ್ ಮೂಲಕ ಕೌತುಕದ ಕಿಡಿ ಹೊತ್ತಿಸಿದ `ಕೆಂಡ’!

CP Yogeshwar brother in law Mahadevaiah
ಕರ್ನಾಟಕ32 mins ago

Murder Case: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಭಾವ ಮಹದೇವಯ್ಯ ಕೊಲೆ!

Foeticide case and pair of pink bunny figurines
ಕರ್ನಾಟಕ53 mins ago

Belagavi Winter Session: ಭ್ರೂಣ ಹತ್ಯೆ ಕೇಸ್‌; ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಲು ಸದನದಲ್ಲಿ ಒತ್ತಾಯ

Narendra Modi With Women
EXPLAINER55 mins ago

ಚುನಾವಣೆಯಲ್ಲಿ ಹೆಣ್ಣುಮಕ್ಕಳ ಮತಗಳನ್ನು ಸೆಳೆದ ಬಿಜೆಪಿ; ‘ಕ್ವೀನ್ಸ್’‌ ಕಿಂಗ್‌ಮೇಕರ್ಸ್‌ ಆಗಿದ್ದು ಹೇಗೆ?

Foeticide arrest
ಕರ್ನಾಟಕ1 hour ago

Foeticide Case : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ; ಹೆಡ್‌ ನರ್ಸ್‌ ಉಷಾರಾಣಿ ಬಂಧನ

Tukali imitate sangeetha sringeri
ಬಿಗ್ ಬಾಸ್1 hour ago

BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

Revenue Minister Krishna Byre Gowda making coffee
ಕರ್ನಾಟಕ2 hours ago

Belagavi Winter Session: ಕಾವೇರಿದ ಚರ್ಚೆ ನಡುವೆ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದ ಕೃಷ್ಣ ಬೈರೇಗೌಡ

Car catches fire after hitting bus
ಕರ್ನಾಟಕ2 hours ago

Video Viral : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಪ್ರಾಣ ಉಳಿಸಿದ ಡ್ರೈವರ್‌; ವಿಡಿಯೊ ಇದೆ!

Michaung Cyclone
ಕರ್ನಾಟಕ2 hours ago

ಮೈಚಾಂಗ್‌ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?

Rishab rashmika
South Cinema2 hours ago

Rishab Shetty: ಪರೋಕ್ಷವಾಗಿ ರಶ್ಮಿಕಾ, ಪ್ರಶಾಂತ್‌ ನೀಲ್‌ಗೆ ತಿರುಗೇಟು ಕೊಟ್ರಾ ರಿಷಬ್‌! ಸ್ಪಷ್ಟನೆ ಏನು?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ11 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌