Site icon Vistara News

Koppala News: ಮಸೀದಿಗೆ ಮಂಗಳಾರತಿ! ಗಂಗಾವತಿ ನಗರ ಠಾಣೆ ಪಿಐ ಸೇರಿ ಮೂವರು ಸಸ್ಪೆಂಡ್‌

Koppala News Gangavathi city police station PI including three suspended

ಗಂಗಾವತಿ: ನಗರದಲ್ಲಿ ನಡೆದ ಗಣೇಶ ಮೂರ್ತಿಯ (Ganesha Idol) ವಿಸರ್ಜನಾ ಮೆರವಣಿಗೆಯ ವೇಳೆ ಮಸೀದಿಯ ಮುಂದೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ನಗರ ಠಾಣೆಯ ಪಿಐ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ (Suspended) ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ.

ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಡಿವೆಪ್ಪ ಗುಡಿಗೊಪ್ಪ, ಪಿಎಸ್ಐ ಕಾಮಣ್ಣ, ಪಿಸಿ ಮರಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ.

ಹಿಂದು ಮಹಾಮಂಡಳಿಯ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಜಾಮೀಯ ಮಸೀದಿಯ ಮುಂಭಾಗ ಪೂಜೆ ಸಲ್ಲಿಸಿದ್ದಲ್ಲದೇ, ಮಸೀದಿಗೆ ಮಂಗಳಾರತಿ ಮಾಡಿದ್ದರು. ಇದು ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು. ಪರಿಸ್ಥಿತಿ ತಿಳಿಗೊಳಿಸುವಲ್ಲಿ ಹಾಗೂ ಕಾನೂನು ಪಾಲನೆಯಲ್ಲಿ ಅಶಿಸ್ತು ತೋರಿರುವುದು ಅಮಾನತಿಗೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: Ballari News: ಏಷ್ಯನ್ ಗೇಮ್ಸ್‌ನಲ್ಲಿ ನಂದಿನಿಗೆ ಕಂಚು, ಸಿರುಗುಪ್ಪದ ಧೋಬಿ ಕುಟುಂಬದಲ್ಲಿ ಬೆಳಗಿದ ಪ್ರತಿಭೆ

ಗಂಗಾವತಿ ನಗರ ಪೊಲೀಸ್ ಠಾಣೆಯ ಪಿಐ ಅಡಿವೆಪ್ಪ ಗುಡಿಗೊಪ್ಪ ಅವರನ್ನು ಅಮಾನತ್ತು ಮಾಡಿರುವ ಹಿನ್ನಲೆಯಲ್ಲಿ ಮುಂದಿನ ಆದೇಶದವರೆಗೂ ಗಂಗಾವತಿ ನಗರ ಠಾಣೆಯ ಪ್ರಭಾರ ವಹಿಸಿಕೊಳ್ಳುವಂತೆ ಗಂಗಾವತಿ ಗ್ರಾಮೀಣ ಠಾಣೆ ಪಿಐ ಮಂಜುನಾಥ ಅವರಿಗೆ ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಸೂಚಿಸಿದ್ದಾರೆ.

Exit mobile version