Site icon Vistara News

ಕೊಪ್ಪಳದಲ್ಲಿ ಭಾರೀ ಗಾಳಿ ಸಹಿತ ಮಳೆ

ಕೊಪ್ಪಳ: ಕೊಪ್ಪಳ ನಗರ ಭಾಗ ಸೇರಿದಂತೆ ಹಲವೆಡೆ ಭಾರೀ ಗಾಳಿಯೊಂದಿಗೆ ಗುರುವಾರ ರಾತ್ರಿಯಿಡೀ ಮಳೆಯ ಆರ್ಭಟ ಕಾಣಿಸಿಕೊಂಡಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಈ ವರ್ಷದ ಮೊದಲ ಮಳೆಗೆ ಕೊಂಚ ನಿರಾಳರಾಗಿದ್ದರೂ ಮಳೆಯ ರಭಸಕ್ಕೆ ಸಾಕಷ್ಟು ಸಂಕಷ್ಟವನ್ನೂ ಎದುರಿಸುವಂತಾಗಿದೆ.

ಮಳೆ ಗಾಳಿ ಆರ್ಭಟಕ್ಕೆ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿ ಆಗಿದೆ. ಆಲಿಕಲ್ಲು ಮಳೆಯ ಹೊಡೆತಕ್ಕೆ ಭತ್ತದ ಕಾಳುಗಳು ಉದುರಿವೆ. ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಕಾರಟಗಿ ತಾಲೂಕಿನ ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಕಾರಿನ ಮೇಲೆ ಬೃಹತಕಾರದ ಮರ ಉರುಳಿದೆ. ಮರದಡಿ ಸಿಲುಕಿದ ಕಾರು, ಬೈಕ್ ನುಜ್ಜುಗುಜ್ಜು ಆಗಿವೆ. ನಗರದಲ್ಲಿ ಭಾರೀ ಗಾಳಿ ಬೀಸುತ್ತಿದ್ದ ಕಾರಣ ಜನರು ಮನೆಯಿಂದ ಹೊರ ಬರಲು ಹಿಂಜರಿಯಬೇಕಾಯಿತು.

ಇದೀಗ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಇದರಿಂದ ನಗರ ಪ್ರದೇಶದಲ್ಲಿ ಕೆಲ ಸಮಯ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಯಿತು.

ಇದನ್ನೂ ಓದಿ: ನಾಗರಹೊಳೆಯಲ್ಲಿ ಆನೆ ದಾಳಿ: ಸಲ್ಪದ್ರಲ್ಲೇ ವ್ಯಕ್ತಿ ಪಾರು

Exit mobile version