Site icon Vistara News

ಹೆಲಿಕಾಪ್ಟರ್‌ನಲ್ಲಿ ಬಂದು ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

HEMALATHA NAYAK

ಕೊಪ್ಪಳ : ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿ ಹೇಮಲತಾ ನಾಯಕ ಅವರಿಗೆ ಅಚ್ಚರಿ ಎಂಬಂತೆ ಟಿಕೆಟ್ ಸಿಕ್ಕಿದೆ. ಹೇಮಲತಾ ಅವರಿಗೆ ಟಿಕೆಟ್ ಸಿಗುತ್ತೆ ಎಂದು ಯಾರು ಊಹಿಸಿರಲಿಲ್ಲ. ಅದಕ್ಕಿಂತಲೂ ಅಚ್ಚರಿಯೆಂದರೆ ಅವರು ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ ಮೂಲಕ ಆಗಮಿಸಿದರು ಎನ್ನುವುದು.

ತಾವು ಪರಿಷತ್‌ ಅಭ್ಯರ್ಥಿ ಆಗಬಹುದು ಎಂದು ಹೇಂಲತಾ ಅವರಿಗೆ ತಿಳಿದಿರಲಿಲ್ಲ. ನವದೆಹಲಿಯಿಂದ ಟಿಕೆಟ್‌ ಘೋಷಣೆ ಆದ ಕೂಡಲೆ ಅಚ್ಚರಿಪಟ್ಟಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರವೇ ಕೊನೆಯ ದಿನವೂ ಆಗಿದ್ದರಿಂದ ಆತಂಖಗೊಂಡಿದ್ದಾರೆ. ಹಾಗೂ ಹೀಗೂ ಕೊಪ್ಪಳದಿಂದ ಕಾರಿನಲ್ಲಿ ಹೊರಟಿದ್ದಾರೆ. ಆದರೆ ಮದ್ಯಾಹ್ನ ಮೂರು ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿತ್ತು.

ಇದನ್ನೂ ಓದಿ | ಲಕ್ಷ್ಮಣ ಸವದಿಗೆ ಮತ್ತೆ ಅದೃಷ್ಟ: ವಿಧಾನ ಪರಿಷತ್‌ ಬಿಜೆಪಿ ಪಟ್ಟಿ ಘೋಷಣೆ

ತುಮಕೂರಿಗೆ ಆಗಮಿಸಿದ ಹೇಮಲತಾ ಅವರನ್ನು ಸಂಪರ್ಕಿಸಿದ ಬಿಜೆಪಿ ವರಿಷ್ಠರು, ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಬರುವಂತೆ ಸೂಚಿಸಿದ್ದಾರೆ. ತುಮಕೂರು ವಿವಿಯಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ತುರ್ತಾಗಿ ಹೆಲಿಕಾಪ್ಟರ್ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಹೇಮಲತಾ ಅವರಿಗೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಸಾತ್‌ ನೀಡಿದರು. ಹೇಮಲತಾ ಅವರಿಗೆ ಇದೀಗ ಪರಿಷತ್ ಸದಸ್ಯರಾಗು ಯೋಗ ಕೂಡಿಬಂದಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ಇಂದು

ವಾಯವ್ಯ ಪದವೀಧರ, ಶಿಕ್ಷಕ ಕ್ಷೇತ್ರಕ್ಕೆ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರದಂದು ಕಾಂಗ್ರೆಸ್ ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ, ಸುನೀಲ್ ಸಂಕ್‌ರಿಂದ ನಾಮಪತ್ರ ಸಲ್ಲಿಕೆ ಆಗಲಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಬೆಳಗಾವಿಯ ಮರಾಠಾ ಮಂದಿರದಲ್ಲಿ ಬೆಳಗ್ಗೆ 11 ಕ್ಕೆ ಕಾಂಗ್ರೆಸ್‌ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್‌ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶ ಬಳಿಕ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ.

ಇದನ್ನೂ ಓದಿ | ಯಡಿಯೂರಪ್ಪ ಸರ್ಜಿಕಲ್‌ ಸ್ಟ್ರೈಕ್‌ ಫೇಲ್‌: ಬಿಜೆಪಿಯಲ್ಲಿ ಸಂತೋಷ್‌ ಮೇಲುಗೈ

Exit mobile version