ಗಂಗಾವತಿ: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಲೋಕಾರ್ಪಣೆಯಾಗುತ್ತಿರುವ ಹಿನ್ನಲೆಯಲ್ಲಿ ನಗರದ 1ನೇ ವಾರ್ಡ್‌ನಲ್ಲಿರುವ ಪುರಾತನ ದೇಗುಲವಾದ ಪಂಪಾಪತಿ ದೇವಸ್ಥಾನದಲ್ಲಿ ಶುಕ್ರವಾರ ರಾಮತಾರಕ ಹೋಮ-ಪೂರ್ಣಾಹುತಿ ಹಮ್ಮಿಕೊಳ್ಳಲಾಗಿತ್ತು.
ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಬಳಿಕ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು.
ಇದನ್ನೂ ಓದಿ: Benefits Of Chikoo: ಚಿಕ್ಕೂ ಎಂಬ ಚಿಕ್ಕ ಹಣ್ಣಿನ ಸದ್ಗುಣಗಳು ಗೊತ್ತೇ?
ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ದೇಗುಲದ ಪ್ರಧಾನ ಅರ್ಚಕ ಪ್ರಸನ್ನ ರಾಮ್‌ಭಟ್ ಜೋಶಿ ಅವರ ನೇತೃತ್ವದಲ್ಲಿ ಬೆಳಗ್ಗೆ ಪಂಪಾಪತಿ ದೇವರಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನಡೆಯಿತು.
ಬಳಿಕ ಅರ್ಚಕರಾದ ಅನಿಲ್ ಭಟ್, ಅನಂತ್ ಭಟ್, ಪವನ್ ಜೋಶಿ ಅವರ ನೇತೃತ್ವದಲ್ಲಿ ರಾಮತಾರಕ ಹೋಮ ನಡೆಯಿತು.
ಇದನ್ನೂ ಓದಿ: Business Guide : ಸಂದೇಹವೇ ಬೇಡ, ವ್ಯಾಪಾರದಲ್ಲಿ ಗ್ರಾಹಕರೇ ದೇವರು
ಈ ವೇಳೆ ಆರ್‌ಎಸ್‌ಎಸ್‌ನ ರವೀಂದ್ರ ಹೂಲಗೇರಿ, ಅಯ್ಯನಗೌಡ ಹೇರೂರು, ಚನ್ನಪ್ಪ ಶಿಡ್ಲಘಟ್ಟಿ ನವಲಿ ವಾಸು, ನರಸಿಂಗರಾವ್ ಕುಲಕರ್ಣಿ, ಮೇಗೂರು ರಾಘವೇಂದ್ರ, ಪವನ್ ಗುಂಡೂರು, ಆಲಂಪಲ್ಲಿ ಚಂದ್ರಕಾಂತ್, ಕೃಷ್ಣ ಆಲಂಪಲ್ಲಿ, ನಂದೀಶ್ ಗಿರಟ್ಟಿ, ವಿಜಯಕುಮಾರ ವಸ್ತ್ರದ, ಬಸವರಾಜ, ಸುರೇಶ, ಪಂಪಣ್ಣ ನಾಯಕ್, ರಘುನಾಥ್ ಪವಾರ್ ಇದ್ದರು.