Koppala News: ಗಂಗಾವತಿಯ ಪಂಪಾಪತಿ ದೇಗುಲದಲ್ಲಿ ರಾಮತಾರಕ ಹೋಮ - Vistara News

ಕೊಪ್ಪಳ

Koppala News: ಗಂಗಾವತಿಯ ಪಂಪಾಪತಿ ದೇಗುಲದಲ್ಲಿ ರಾಮತಾರಕ ಹೋಮ

Koppala News: ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯಾಗುತ್ತಿರುವ ಹಿನ್ನಲೆಯಲ್ಲಿ ಗಂಗಾವತಿ ನಗರದ ಪುರಾತನ ದೇಗುಲವಾದ ಪಂಪಾಪತಿ ದೇವಸ್ಥಾನದಲ್ಲಿ ಶುಕ್ರವಾರ ರಾಮತಾರಕ ಹೋಮ-ಪೂರ್ಣಾಹುತಿ ನಡೆಯಿತು.

VISTARANEWS.COM


on

Ramataraka Homa at Pampapati Temple in Gangavathi
ಗಂಗಾವತಿ ನಗರದ ಪುರಾತನ ದೇಗುಲವಾದ ಪಂಪಾಪತಿ ದೇವಸ್ಥಾನದಲ್ಲಿ ಶುಕ್ರವಾರ ರಾಮತಾರಕ ಹೋಮ-ಪೂರ್ಣಾಹುತಿ ನಡೆಯಿತು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಂಗಾವತಿ: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಲೋಕಾರ್ಪಣೆಯಾಗುತ್ತಿರುವ ಹಿನ್ನಲೆಯಲ್ಲಿ ನಗರದ 1ನೇ ವಾರ್ಡ್‌ನಲ್ಲಿರುವ ಪುರಾತನ ದೇಗುಲವಾದ ಪಂಪಾಪತಿ ದೇವಸ್ಥಾನದಲ್ಲಿ ಶುಕ್ರವಾರ ರಾಮತಾರಕ ಹೋಮ-ಪೂರ್ಣಾಹುತಿ ಹಮ್ಮಿಕೊಳ್ಳಲಾಗಿತ್ತು.

ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಬಳಿಕ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು.

ಇದನ್ನೂ ಓದಿ: Benefits Of Chikoo: ಚಿಕ್ಕೂ ಎಂಬ ಚಿಕ್ಕ ಹಣ್ಣಿನ ಸದ್ಗುಣಗಳು ಗೊತ್ತೇ?

ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ದೇಗುಲದ ಪ್ರಧಾನ ಅರ್ಚಕ ಪ್ರಸನ್ನ ರಾಮ್‌ಭಟ್ ಜೋಶಿ ಅವರ ನೇತೃತ್ವದಲ್ಲಿ ಬೆಳಗ್ಗೆ ಪಂಪಾಪತಿ ದೇವರಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನಡೆಯಿತು.

ಬಳಿಕ ಅರ್ಚಕರಾದ ಅನಿಲ್‌ ಭಟ್, ಅನಂತ್‌ ಭಟ್, ಪವನ್‌ ಜೋಶಿ ಅವರ ನೇತೃತ್ವದಲ್ಲಿ ರಾಮತಾರಕ ಹೋಮ ನಡೆಯಿತು.

ಇದನ್ನೂ ಓದಿ: Business Guide : ಸಂದೇಹವೇ ಬೇಡ, ವ್ಯಾಪಾರದಲ್ಲಿ ಗ್ರಾಹಕರೇ ದೇವರು

ಈ ವೇಳೆ ಆರ್‌ಎಸ್‌ಎಸ್‌ನ ರವೀಂದ್ರ ಹೂಲಗೇರಿ, ಅಯ್ಯನಗೌಡ ಹೇರೂರು, ಚನ್ನಪ್ಪ ಶಿಡ್ಲಘಟ್ಟಿ ನವಲಿ ವಾಸು, ನರಸಿಂಗರಾವ್ ಕುಲಕರ್ಣಿ, ಮೇಗೂರು ರಾಘವೇಂದ್ರ, ಪವನ್ ಗುಂಡೂರು, ಆಲಂಪಲ್ಲಿ ಚಂದ್ರಕಾಂತ್, ಕೃಷ್ಣ ಆಲಂಪಲ್ಲಿ, ನಂದೀಶ್ ಗಿರಟ್ಟಿ, ವಿಜಯಕುಮಾರ ವಸ್ತ್ರದ, ಬಸವರಾಜ, ಸುರೇಶ, ಪಂಪಣ್ಣ ನಾಯಕ್, ರಘುನಾಥ್ ಪವಾರ್ ಇದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೊಪ್ಪಳ

Koppala News: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನ ಪತ್ತೆ

Koppala News: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನವೊಂದು ಕೊಪ್ಪಳ ತಾಲೂಕಿನ ಹೊಳೆ ಮುದ್ಲಾಪುರದ ಬಳಿ ಪತ್ತೆಯಾಗಿದೆ. ಈ ಶಾಸನವು ತುಂಗಾಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹುಲಗಿಯ ಅಣೆಕಟ್ಟೆಯ ಹೊಳೆ ಮುದ್ಲಾಪುರದ ಹತ್ತಿರದ ಅಣೆಕಟ್ಟಿನ ಪಕ್ಕದಲ್ಲಿ ಹುಟ್ಟುಬಂಡೆಯಲ್ಲಿದೆ.

VISTARANEWS.COM


on

an inscription of Hulagi Katte built during the Vijayanagara kings was discovered
Koo

ಕೊಪ್ಪಳ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಹುಲಗಿ ಕಟ್ಟೆಯ ಶಾಸನವೊಂದು ತಾಲೂಕಿನ (Koppala News) ಹೊಳೆ ಮುದ್ಲಾಪುರದ ಬಳಿ ಪತ್ತೆಯಾಗಿದೆ.

ತಾಲೂಕಿನ ಹೊಳೆ ಮುದ್ಲಾಪುರದ ಬಳಿ ಹುಲಗಿ ಅಣೆಕಟ್ಟೆಯ ಹತ್ತಿರ ವಿಜಯನಗರ ಕಾಲುವೆ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮ, ವಿಜಯನಗರ ಕಾಲುವೆಗಳ ಆಧುನಿಕರಣ ಯೋಜನೆ ನಂ-1 ಮುನಿರಾಬಾದ್‌ನ ತುಂಗಾಭದ್ರ ಜಲಾಶಯ ವಿಭಾಗದವರು ಕಾಮಗಾರಿ ಕೈಗೊಳ್ಳುವಾಗ ಶಾಸನವು ಇರುವ ಬಗ್ಗೆ ಮಾಹಿತಿಯನ್ನು ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಗೆ ವಿಜಯನಗರ ಕಾಲುವೆ ಯೋಜನೆಯ ಸಂವಹನ ಮತ್ತು ದಾಖಲಾತಿ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ತಿಳಿಸಿದ್ದರು. ಕಮಲಾಪುರ-ಹಂಪಿಯ ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ.ಆರ್.ಶೇಜೇಶ್ವರ ಹಾಗೂ ಪುರಾತತ್ವ ಇಲಾಖೆಯ ಸಹಾಯಕ ಡಾ.ಆರ್. ಮಂಜನಾಯ್ಕ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಅಲ್ಲಿ ಆರು ಸಾಲಿನ ವಿಜಯನಗರ ಅರಸರ ಕಾಲದ ಶಾಸನವು ಕಂಡುಬಂದಿದೆ.

ಇದನ್ನೂ ಓದಿ: Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

ಶಾಸನವು ತುಂಗಾಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹುಲಗಿಯ ಅಣೆಕಟ್ಟೆಯ ಹೊಳೆ ಮುದ್ಲಾಪುರದ ಹತ್ತಿರದ ಅಣೆಕಟ್ಟಿನ ಪಕ್ಕದಲ್ಲಿ ಹುಟ್ಟುಬಂಡೆಯಲ್ಲಿದೆ. ಇದು 14 ಆಡಿ ಉದ್ದ ಹಾಗೂ 3 ಆಡಿ ಆಗಲವಾಗಿದ್ದು ಆರು ಸಾಲಿನ ಕನ್ನಡ ಶಾಸನವಾಗಿದೆ. ಈ ಶಾಸನವು ತುಂಗಾಭದ್ರ ನೀರಿನಿಂದ ಮುಳುಗಿರುತ್ತಿತ್ತು ಈ ವರ್ಷ ಮಳೆ ಕಡಿಮೆ ಇದ್ದರಿಂದ ಶಾಸನವು ಕಂಡು ಬಂದಿದೆ.‌

ಇದನ್ನೂ ಓದಿ: Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

ಶಾಸನದ ಸಾರಾಂಶ

ವಿಜಯನಗರದ ಅರಸರ ಮಹಾಪ್ರಧಾನ ನಾಗಂಣದಂಣನಾಯಕನು ಮಲಿನಾಥದೇವರ ವಾಯುವ್ಯಕ್ಕೆ ಕಲಊರ ಎಂಬ ಸ್ಥಳದಲ್ಲಿ ತುಂಗಾಭದ್ರ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿಸುತ್ತಾರೆ. ಈ ಕಟ್ಟೆಗೆ ಹುಲಿಗಿಯಕಟ್ಟಿ ಎಂಬ ಉಲ್ಲೇಖವಿದೆ. ಇಲ್ಲಿಂದ ಒಂದು ಕಾಲುವೆಯನ್ನು ನಿರ್ಮಿಸಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಗೆ ನೀರನ್ನು ಕಾಲುವೆಯ ಮುಖಾಂತರ ನೀರನ್ನು ಹರಿಸಿರುವುದು ಈ ಶಾಸನದಿಂದ ತಿಳಿದುಬರುತ್ತದೆ. ಇದರಲ್ಲಿ ಕಾಲುವೆಯ ಉಲ್ಲೇಖವು ಸಹ ಇದೆ. ಶಾಸನವನ್ನು ಡಾ.ಜಗದೀಶ ಅಗಸಿಬಾಗಿಲ ಓದಿದ್ದು,ಈ ಶಾಸನದ ಕುರಿತು ಇಲಾಖೆಯಿಂದ ಹೆಚ್ಚಿನ ಅಧ್ಯಯನ ನಡೆಯುತ್ತಿದೆ ಎಂದು ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ.ಆರ್. ಶೇಜೇಶ್ವರ ತಿಳಿಸಿದ್ದಾರೆ.

Continue Reading

ಮಳೆ

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Rain News : ರಾಜ್ಯದ ಹಲವೆಡೆ ಮಳೆಯು (Karnataka Rain) ಅಬ್ಬರಿಸುತ್ತಿದೆ. ಮೈಸೂರಿನ ಹುಣಸೂರಿನಲ್ಲಿ ಜೋರು ಮಳೆಗೆ ಮನೆ ಕುಸಿದು ಬಿದ್ದರೆ, ಬೆಳಗಾವಿಯಲ್ಲಿ ಗಾಳಿ ಮಳೆಗೆ ಶಾಲೆಯ ಶೆಡ್‌
(Karnataka Weather Forecast) ಹಾರಿ ಹೋಗಿದೆ. ಯಾದಗಿರಿ, ಧಾರವಾಡದಲ್ಲಿ ಮರಗಳು ಧರೆಗುರುಳಿದ್ದವು.

VISTARANEWS.COM


on

By

Karnataka rain
Koo

ಮೈಸೂರು: ಮೈಸೂರಿನ ಹುಣಸೂರು ಭಾಗದಲ್ಲಿ ವರುಣನ (Rain News) ಅಬ್ಬರ ಜೋರಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ (Karnataka Rain) ತಾಲೂಕಿನ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಾಳೇನಹಳ್ಳಿಯಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಮನೆಯು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಜೋರಾಗಿ ಸುರಿದ ಮಳೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ನಾಶವಾಗಿದೆ. ವಾಸಕ್ಕೆ ಮನೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಟುಂಬಸ್ಥರು ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ಇತ್ತ ಹನಗೋಡಿನಲ್ಲಿ ಭಾರಿ ಮಳೆಗೆ ಜನರು ತತ್ತರಿಸಿದ್ದರು. ಹುಣಸೂರು ತಾಲೂಕಿನ ಹನಗೋಡಿ ಗ್ರಾಮದಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಮನೆ ಅಂಗಡಿಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿತ್ತು. ಬಸ್ ನಿಲ್ದಾಣ ಕೆರೆಯಂತಾಗಿತ್ತು. ಚರಂಡಿಗಳ ವ್ಯವಸ್ಥೆ ಸರಿಯಿಲ್ಲದೆ ನೀರು ಹೋಗದೆ ನಿಂತಲ್ಲೇ ನಿಂತು ಜನರಿಗೆ ತೊಂದರೆಯಾಗಿತ್ತು.

ಇದನ್ನೂ ಓದಿ: Accident Case : ಇಳಿಜಾರಿನಲ್ಲಿ ತಪ್ಪಿದ ಕಂಟ್ರೋಲ್‌; ಟ್ರ್ಯಾಕ್ಟರ್‌ ಪಲ್ಟಿಯಾಗಿ ಯುವಕ ಮೃತ್ಯು

ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಶೆಡ್‌

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜೋರು ಗಾಳಿ ಮಳೆಗೆ ಶೆಡ್ ಹಾರಿ ಹೋಗಿತ್ತು. ಶಾಲೆಗೆ ರಜೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಶಾಲೆಯ ಶೆಡ್ ಹಾರಿ ಅಕ್ಕಪಕ್ಕದ ಮನೆಗಳು ಹಾಗೂ ವಿದ್ಯುತ್ ತಂತಿಗಳು ಮೇಲೆ ಬಿದ್ದು ಹಾನಿಯಾಗಿತ್ತು.

ಯಾದಗಿರಿಯಲ್ಲಿ ಧರೆಗುರುಳಿದ ಮರಗಳು

ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರಗಳು ಧರೆಗುರುಳಿದ್ದವು. ಸತತ ಒಂದು ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಗೆ ಮರಗಳ ಮೇಲ್ಭಾಗದ ರಂಬೆ, ಕೊಂಬೆಗಳು ಸಂಪೂರ್ಣ ಗಾಳಿಗೆ ಮುರಿದು ಬೋಳಾಗಿದ್ದವು. ಕೆಲವೆಡೆ ಮನೆ ಮುಂದೆ ಇದ್ದ ಮರಗಳು ನೆಲಕ್ಕುರುಳಿದ್ದವು. ಭಾರಿ ಮಳೆಗೆ ಸುಭಾಷ್ ವೃತ್ತದ ಸಮೀಪದ ಪಿಡ್ಲೂಡಿ ಕಚೇರಿ ಆವರಣದೊಳಗೆ ಮಳೆ ನೀರು ನುಗ್ಗಿತ್ತು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಜನಸಂಪರ್ಕದ ಕಚೇರಿ ಆವರಣದಲ್ಲಿ ಮರಗಳು ಧರೆಗುರುಳಿದ್ದವು.

ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಆರು ಜನರ ಕುಟುಂಬವೊಂದು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದೆ. ಯಾದಗಿರಿಯ ಮಾತಾಮಣಿಕೇಶ್ವರಿ ನಗರದಲ್ಲಿ ಭಾರೀ ಮಳೆ ಗಾಳಿಗೆ ಮನೆಗೆ ಹಾಕಿದ ಟಿನ್ ಶೆಡ್ ಹಾರಿಹೋಗಿದೆ. ಮಳೆ ಗಾಳಿ ಜೋರಾಗುತ್ತಿದ್ದಂತೆ ಇಡೀ ಕುಟುಂಬ ಮನೆಯಿಂದ ಹೊರಬಂದು ಬಚಾವ್ ಆಗಿದ್ದಾರೆ. ಮನೆಯಿಂದ ಹೊರ ಬಂದ ಕೆಲವೇ ಕ್ಷಣದಲ್ಲಿ ಟಿನ್ ಶೆಡ್ ಕುಸಿದು ಬಿದ್ದಿದೆ. ಇತ್ತ ದಿನಸಿ ಸಾಮಾನು ಸೇರಿದಂತೆ ಎಲ್ಲ ವಸ್ತುಗಳು ಹಾಳಾಗಿವೆ.

ಧಾರಾವಾಡದಲ್ಲಿ ಧಾರಾಕಾರ ಮಳೆಗೆ ರಸ್ತೆ ಮೇಲೆ ನಿಂತ ನೀರು

ಧಾರವಾಡದಲ್ಲಿ ಗುರುವಾರದಂದು ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆಯಾಗಿತ್ತು. ಎರಡು ದಿನದಿಂದ ಬ್ರೇಕ್‌ ಕೊಟ್ಟಿದ್ದ ಮಳೆಯು ಗುರುವಾರ ದಿಢೀರ್‌ ಅಪ್ಪಳಿಸಿತ್ತು. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಧಾರವಾಡ ಹೊರವಲಯದ ಕೆಎಂಎಫ್ ಬಳಿ ಧಾರಾಕಾರ ಮಳೆಗೆ ರಸ್ತೆಯಲ್ಲೇ ನೀರು ನಿಂತಿತ್ತು. ಬಿಆರ್‌ಟಿಎಸ್ ಕಾರಿಡಾರ್‌ನಿಂದ ಹರಿದು ಹೋಗದೇ ಇರುವುದೇ ಕಾರಣ ಎಂದು ಸ್ಥಳೀಯರು ಆಕ್ರೋಶಿಸಿದರು.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸರೀಕಟ್ಟೆ, ತರೀಕೆರೆಯಲ್ಲೂ ಭಾರೀ ಮಳೆಯಾಗಿದ್ದು ರಸ್ತೆಯಲ್ಲಿ ಎರಡು ಅಡಿ ನೀರು ನಿಂತಿತ್ತು. ತರೀಕೆರೆ ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಕಾರು, ಬೈಕ್‌ಗಳು ಅರ್ಧದಷ್ಟು ಮುಳುಗಿತ್ತು. ಎನ್ಆರ್‌ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲೂ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೊಪ್ಪಳ

SSLC Toper: ಓದೋಕೂ ಬರದವ ಎಸ್‌ಎಸ್‌ಎಲ್‌ಸಿ ಟಾಪರ್‌ ಆಗಿ ಜವಾನನಾದ! ಜಡ್ಜ್‌ ದೂರಿನಿಂದ ಹೊರ ಬಿತ್ತು ಅಸಲಿಯತ್ತು!

SSLC Toper : ಓದಲು-ಬರೆಯಲು ಬಾರದ ಮಾಲಿಯೊಬ್ಬ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಗಳಿಸಿ ಟಾಪರ್‌ ಆಗಿದ್ದಾನೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದು, ನ್ಯಾಯಾಧೀಶರೊಬ್ಬರು ಇದರ ಅಸಲಿಯತ್ತು ಏನೆಂದು ತಿಳಿಯಲು ದೂರು ನೀಡಿದ್ದಾರೆ.

VISTARANEWS.COM


on

By

SSLC Toper
ಸಾಂದರ್ಭಿಕ ಚಿತ್ರ
Koo

ಕೊಪ್ಪಳ: ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಮಾಲಿ (Scavenger) ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆತನಿಗೆ ಓದೋಕು-ಬರೆಯೋಕೂ ಬರುತ್ತಿರಲಿಲ್ಲ. ಆದರೆ ಓದು ಬರಹ ಬರದ ಮಾಲಿಯೊಬ್ಬ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಟಾಪರ್‌ (SSLC Toper) ಆಗಿದ್ದ. ಮಾತ್ರವಲ್ಲ ಎಸ್‌ಎಸ್‌ಎಲ್‌ಸಿ ಅಂಕಗಳ ಆಧಾರದ ಮೇಲೆ ಮಾಲಿ ಕೆಲಸದಿಂದ ಕೋರ್ಟ್‌ ಜವಾನನಾಗಿ ನೌಕರಿಯನ್ನು ಗಿಟ್ಟಿಸಿಕೊಂಡಿದ್ದ. ಎಲ್ಲರ ಅಚ್ಚರಿಗೆ ಕಾರಣವಾಗಿದ್ದ ಟಾಪರ್‌ನ ಅಸಲಿಯತ್ತು ನ್ಯಾಯಾಧೀಶರ ಕಂಪ್ಲೇಟ್‌ನಿಂದ ಹೊರಬಿದ್ದಿದೆ.

ಕೊಪ್ಪಳದ ಪ್ರಭು ಲೋಕರೆ ಎಂಬಾತ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಮಾಲಿ ಆಗಿ ಕೆಲಸ ಮಾಡುತ್ತಿದ್ದ. ಪ್ರಭು ಬಾಗಲಕೋಟೆಯ ಕೇಂದ್ರದಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ. ಇತ್ತೀಚೆಗೆ ಬಂದ ಫಲಿತಾಂಶದಲ್ಲಿ 625ಕ್ಕೆ 623 ಅಂಕ ಪಡೆದು ಟಾಪರ್‌ ಆಗಿದ್ದ. ವಾಸ್ತವದಲ್ಲಿ ಪ್ರಭುಗೆ ಕನ್ನಡ, ಇಂಗ್ಲಿಷ್, ಹಿಂದಿ ಓದಲು ಅಥವಾ ಬರೆಯಲು ಕೂಡ ಬರೋದಿಲ್ಲ. ಆದರೂ ಪರೀಕ್ಷೆಯಲ್ಲಿ ಪ್ರಭು 623 ಅಂಕ ಪಡೆದಿದ್ದು ಎಲ್ಲರ ಅಚ್ಚರಿಗೆ ಸಾಕ್ಷಿಯಾಗಿತ್ತು. ಇತ್ತ ಈ ಸುದ್ದಿ ತಿಳಿದ ನ್ಯಾಯಾಧೀಶರಿಗೂ 623 ಅಂಕ ಹೇಗೆ ಬಂದು ಎಂಬ ಸಂದೇಹ ಬಂದಿತ್ತು.

ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದಿದ್ದ ಅಂಕಗಳ ಆಧಾರದ ಮೇಲೆ ಅದಾಗಲೇ ಪ್ರಭು ಮಾಲಿ ಕೆಲಸದಿಂದ ಮತ್ತೊಂದು ನೌಕರಿಯನ್ನು ಗಿಟ್ಟಿಸಿಕೊಂಡಿದ್ದ. ಯಾದಗಿರಿಯ ಕೋರ್ಟ್‌ನಲ್ಲಿ ಜವಾನ ಹುದ್ದೆಗೆ ಆಯ್ಕೆಯಾಗಿದ್ದ. ಪ್ರಭು ಜವಾನ ಹುದ್ದೆಗೆ ಆಯ್ಕೆಯಾಗಿದ್ದರಿಂದ ಕುತೂಹಲಗೊಂಡ ನ್ಯಾಯಾಧೀಶರು, ಇದರಿಂದ‌ ಅನುಮಾನಗೊಂಡು ನಗರ ಠಾಣೆಗೆ ದೂರು ನೀಡಿದ್ದಾರೆ.

ಓದು ಬರಹ ಬಾರದ ಪ್ರಭು ಹೆಚ್ಚು ಅಂಕ ತಗೆದುಕೊಂಡಿರುವುದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ‌ಮೋಸ‌ ಮಾಡಿದಂತೆ. ಈತನೊಂದಿಗೆ ಲಾಭಕ್ಕಾಗಿ ಶಾಮೀಲಾದವರ ವಿರುದ್ಧ ತನಿಖೆ ನಡೆಸಬೇಕೇಂದು ನ್ಯಾಯಾಧೀಶರು ದೂರು ನೀಡಿದ್ದಾರೆ. ನ್ಯಾಯಾಧೀಶರ ಸೂಚನೆ ಮೇರೆಗೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಭು ಲೋಕರೆ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: Viral Video: ರಣ ಭೀಕರ ಬಿರುಗಾಳಿ..! ಆಘಾತಕಾರಿ ವಿಡಿಯೋ ಎಲ್ಲೆಡೆ ವೈರಲ್‌

ದಬಾಂಗ್‌ ಸ್ಟೈಲ್‌ನಲ್ಲಿ ಆಸ್ಪತ್ರೆಯೊಳಗೆ ನುಗ್ಗಿದ ಪೊಲೀಸ್‌ ಜೀಪ್‌! ವಿಡಿಯೋ ವೈರಲ್‌

ಉತ್ತರಾಖಂಡ: ಸಿನಿಮಾಗಳಲ್ಲಿ ಹೀರೋ ಬಿಲ್ಡಿಂಗ್‌, ಕಾಪೌಂಡ್‌ ಅನ್ನು ಲೆಕ್ಕಿಸದೇ ವಾಹನ ನುಗ್ಗಿಸುವ ದೃಶ್ಯ ನೋಡಿರ್ತೀರಿ. ಅದರಲ್ಲೂ ಹೀರೋ ಒಂದುವೇಳೆ ಪೊಲೀಸ್‌ ಆಗಿದ್ದರೆ ತನ್ನ ಜೀಪ್‌ನಲ್ಲೇ ಅಪರಾಧಿಗಳನ್ನು ಚೇಸ್‌ ಮಾಡಿ ಹಿಡಿಯುವ ಹಲವಾರು ದೃಶ್ಯಗಳನ್ನು ನೋಡಿರ್ತೇವೆ. ಅಂತಹದ್ದೇ ಒಂದು ದೃಶ್ಯ ಋಷಿಕೇಶದಲ್ಲಿ ನಡೆದಿದೆ. ಪೊಲೀಸ್‌ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ(Sexual harassments) ಆರೋಪಿಯನ್ನು ಅರೆಸ್ಟ್‌ ಮಾಡಲೆಂದು ನೇರವಾಗಿ ಆಸ್ಪತ್ರೆ(Hospital)ಯ ಐಸಿಯು ಒಳಗೆ ತಮ್ಮ ಜೀಪನ್ನು ನುಗ್ಗಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ವಿಡಿಯೋ ಫುಲ್‌ ವೈರಲ್‌

ರಿಶಿಕೇಶ್‌ ಏಮ್ಸ್‌ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯ ಬಂಧನಕ್ಕೆಂದು ಬಂದಿದ್ದ ಪೊಲೀಸರು ಜೀಪು ಸಮೇತ ಆಸ್ಪತ್ರೆಯೊಳಗೆ ನುಗ್ಗಿದ್ದಾರೆ. ನೇರವಾಗಿ ಆಸ್ಪತ್ರೆಯ ನಾಲ್ಕನೇ ಮಹಡಿಗೆ ಬಂದ ಪೊಲೀಸರು ಐಸಿಯು ಒಳಗೆ ಜೀಪು ಚಲಾಯಿಸಿದ್ದಾರೆ. ಈ ದೃಶ್ಯವನ್ನು ಆಸ್ಪತೆಯಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಎಕ್ಸ್‌ನಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲಾಗಿದೆ.

ನರ್ಸಿಂಗ್‌ ಅಧಿಕಾರಿಯಿಂದ ಲೈಂಗಿಕ ಕಿರುಕುಳ

ಏಮ್ಸ್‌ನ ನರ್ಸಿಂಗ್‌ ಅಧಿಕಾರಿ ಸತೀಶ್‌ ಕುಮಾರ್‌ ಎಂಬಾತ ವೈದ್ಯೆಯೊಬ್ಬರಿಗೆ ಎಂಎಂಎಸ್‌ ಕಳುಹಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿತ್ತು. ಆರೋಪಿ ಬಂಧನಕ್ಕೆಂದು ಏಮ್ಸ್‌ ಆಸ್ಪತ್ರೆಗೆ ಪೊಲೀಸರು ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸತೀಶ್‌ ಕುಮಾರ್‌ ಎಸ್ಕೇಪ್‌ ಆಗಲು ಯತ್ನಿಸಿದ್ದ. ಇದು ತಿಳಿದ ಡೆಹ್ರಾಡೂನ್‌ ಪೊಲೀಸರು ಆಸ್ಪತ್ರೆಯ ಒಳಗೆ ಜೀಪ್‌ ಚಲಾಯಿಸಿದಾರೆ. ನೇರವಾಗಿ ನಾಲ್ಕನೇ ಮಹಡಿಗೆ ತಲುಪಿದ ಜೀಪ್‌ ಐಸಿಯು ಒಳಗೆ ಬಂದು ನಿಂತಿದೆ.

ಪೊಲೀಸ್‌ ವಾಹನ್‌ ಆಸ್ಪತ್ರೆ ಒಳಗೆ ಬರುತ್ತಿದ್ದಂತೆ ಅಲ್ಲಿದ್ದ ರೋಗಿಗಳು, ಜನರು ಒಂದು ಕ್ಷಣಕ್ಕೆ ಗಾಬರಿ ಆಗಿದ್ದಾರೆ. ರೋಗಿಗಳು ಮಲಗಿದ್ದ ಮಂಚ ಸರಿಸಿ ಪೊಲೀಸ್‌ ವಾಹನಕ್ಕೆ ಜಾಗ ಮಾಡಿಕೊಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದಾಗಿಯೂ ಪೊಲೀಸ್‌ ವಾಹನ ಮಾತ್ರ ನಿಲ್ಲುವುದೇ ಇಲ್ಲ. ತನ್ನ ಗುರಿ ತಲುಪಿದ ಮೇಲಷ್ಟೇ ವಾಹನಕ್ಕೆ ಬ್ರೇಕ್‌ ಬೀಳುತ್ತದೆ.

ಪೊಲೀಸ್‌ ಕ್ರಮಕ್ಕೆ ಖಂಡನೆ

ಇನ್ನು ಪೊಲೀಸರ ಈ ಕ್ರಮಕ್ಕೆ ಹಲವರಿಂದ ಖಂಡನೆ ವ್ಯಕ್ತವಾಗಿದೆ. ಆಸ್ಪತ್ರೆಯಂತಹ ಸೂಕ್ಷ್ಮ ಸ್ಥಳಗಳಲ್ಲಿ ಇಂತಹ ವಾತಾವರಣ ಸೃಷ್ಟಿಸುವುದು ಸರಿಯಲ್ಲ. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕೆಂದು ಜನ ಆಗ್ರಹಿಸಿದ್ದಾರೆ. ಅಲ್ಲದೇ ಅಲ್ಲಿದ್ದ ರೋಗಿಗಳು ಹಾಗೂ ಅವರ ಕುಟುಂಬಸ್ಥರೂ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಘಟನೆಯ ಬಗ್ಗೆ ಗಮನ ಹರಿಸಿದ್ದು,. ಕಿರುಕುಳಕ್ಕೊಳಗಾದ ಮಹಿಳಾ ವೈದ್ಯರನ್ನು ಭೇಟಿ ಮಾಡಲು ಮತ್ತು ಪರಿಸ್ಥಿತಿಯನ್ನು ನೇರವಾಗಿ ನಿರ್ಣಯಿಸಲು AIIMS ಗೆ ಭೇಟಿ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Rain News : ರಾಜ್ಯಾದ್ಯಂತ ಮಳೆ ಮುಂದುವರಿದಿದ್ದು, 8 ಜಿಲ್ಲೆಗಳಲ್ಲಿ ಭಾರಿ ಮಳೆ ಜತೆಗೆ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ಈ ಹಿನ್ನೆಲೆಯಲ್ಲಿ ಆರೆಂಜ್‌ ಹಾಗೂ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಮೇ 22ರಂದು ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ಉತ್ತರ ಒಳನಾಡು ಭಾಗದಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ (rain News) ಮಳೆಯಾಗಲಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚಿನ ಜತೆಗೆ ಗಾಳಿ ವೇಗವು ಗಂಟೆಗೆ 30-40 ಕಿ.ಮೀ ಬೀಸುವ (Karnataka Weather Forecast) ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ತುಮಕೂರು, ಮೈಸೂರು, ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಮಧ್ಯಮ ಮಳೆಯ ನಿರೀಕ್ಷೆ ಇದೆ. ಉಳಿದ ಭಾಗಗಳಲ್ಲಿ ವ್ಯಾಪಕವಾಗಿ ಹಗುರ ಕೂಡಿದ ಮಳೆಯಾಗಲಿದೆ. ಇನ್ನೂ ಉತ್ತರ ಒಳನಾಡಿನ ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಧಾರವಾಡ, ಕೊಪ್ಪಳ, ಬೆಳಗಾವಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮಳೆಯು ಸಾಧಾರಣವಾಗಿದೆ. ರಾಜಧಾನಿ ಬೆಂಗಳೂರಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ 29 ಮತ್ತು 21 ಡಿ.ಸೆ ಇರಲಿದೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

8 ಜಿಲ್ಲೆಗಳಲ್ಲಿ ಮಳೆ ರುದ್ರ ನರ್ತನ

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಕೊಡಗು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಶಿವಮೊಗ್ಗದಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅದಷ್ಟು ಈ ಭಾಗದ ಜನರು ಮರದಡಿ ನಿಲ್ಲುವುದು, ಮಳೆ ಸಮಯದಲ್ಲಿ ವಾಹನ ಚಲಾಯಿಸುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ.

ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌

ಬೆಂಗಳೂರು/ಚಿತ್ರದುರ್ಗ: ರಾಜ್ಯದ ಹಲವೆಡೆ ವರುಣಾರ್ಭಟಕ್ಕೆ ಅವಾಂತರವೇ (Karnataka Rain ) ಸೃಷ್ಟಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ (Karnataka weather) ಕರೆಂಟ್ ಕಟ್ ಆಗಿದ್ದು, ದೀಪದ ಬೆಳಕಿನಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಯಲ್ಲಿ ಒಂದು ವಾರದಿಂದ ಜನರೇಟರ್ ಕೆಟ್ಟು ಹೋಗಿದ್ದು, ಸರಿಪಡಿಸದೇ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಸೋಮವಾರ ರಾತ್ರಿ ಸುರಿದ ಮಳೆಯಿಂದ (rain News) ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ರೋಗಿಗಳಿಗೆ ಮೇಣದ ಬತ್ತಿ ಹಿಡಿದು ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಕುಮಟಾದಲ್ಲಿ ಮಳೆಗೆ ಮನೆ ಮೇಲೆ ಬಿದ್ದ ಬೃಹತ್‌ ಮರ

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವರಹಕ್ಕಲ ಗ್ರಾಮದಲ್ಲಿ ಮಳೆಗೆ ಭಾರೀ ಗಾತ್ರದ ಮರ ಬಿದ್ದು ಮನೆಗೆ ಹಾನಿಯಾಗಿದೆ. ಲಲಿತಾ ನಾಯ್ಕ ಎಂಬುವವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಎದುರಿದ್ದ ಸ್ಕೂಟಿ ಜಖಂಗೊಂಡಿದೆ. ಮನೆಯ ಮುಂಭಾಗದ ಕೋಣೆಯ ಚಾವಣಿ ಹಾನಿಯಾಗಿದೆ. ಮರ ಬಿದ್ದ ಪರಿಣಾಮ ಸ್ಕೂಟಿ, ಮನೆ ಸೇರಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಆಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರಲ್ಲಿ ಕೆರೆ ಏರಿ ತುಂಡು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದೆ. ಮಳೆಯ ಆರ್ಭಟಕ್ಕೆ ಕೆರೆಯ ಏರಿ ಹೊಡೆದು ನೀರು ಪೋಲಾಗಿದೆ. ಕಡೂರು ತಾಲೂಕಿನ ಗೌಡನ ಕಟ್ಟೆ ಗ್ರಾಮದಲ್ಲಿರುವ ಗೌಡನಕಟ್ಟೆ ಕೆರೆಯು ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಮಳೆಗೆ ಭರ್ತಿಯಾಗಿದೆ. ಪರಿಣಾಮ ಕೆರೆ ಏರಿ ತುಂಡಾಗಿ ಪಿ ಕೋಡಿಹಳ್ಳಿ ಕೆರೆಗೆ ನೀರು ಹರಿವು ಹೆಚ್ಚಾಗಿದೆ. ಭಾರಿ ಪ್ರಮಾಣದ ನೀರಿನ ಒತ್ತಡ ತಡೆಯಲಾಗದೆ ಕೆರೆ ಏರಿ ಹಿಂಭಾಗದ ತೋಟ ಜಮೀನುಗಳು ಜಲಾವೃತಗೊಂಡಿತ್ತು.

ಕಾರುಗಳ ಮೇಲೆ ಬಿದ್ದ ಮರ; ಅಪಾಯದಿಂದ ಪಾರಾದ ತಾಯಿ-ಮಗ

ದಾವಣಗೆರೆ ಆಶೋಕ್ ಟಾಕೀಸ್ ಬಳಿ ಚಲಿಸುತ್ತಿದ್ದ ಕಾರುಗಳ ಮೇಲೆ ಮರವೊಂದು ಬಿದ್ದಿತ್ತು. ಪರಿಣಾಮ ಡಸ್ಟರ್ ಕಾರು ನಜ್ಜುಗುಜ್ಜಾಗಿತ್ತು. ಡಸ್ಟರ್‌ ಕಾರು ಚಾಲಕ ಹಾಗೂ ಮತ್ತೊಂದು ಕಾರಿನಲ್ಲಿದ್ದ ಚಿಕ್ಕ ಮಗು ಹಾಗು ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಮರ ತೆರವು ಮಾಡಿದರು.

ದಾವಣಗೆರೆ ಜೆಲ್ಲೆಯ ಜಗಳೂರು ತಾಲೂಕಿನ ಗಡೆಮಾಕುಂಟೆ, ಭರಮಸಮುದ್ರ, ಮರಿಕಟ್ಟೆ, ತುಂಬಿನಕಟ್ಟೆ, ಕ್ಯಾಸೇನಹಳ್ಳಿ, ತಮ್ಮಲೇಹಳ್ಳಿ ಸೇರಿದಂತೆ ಬಹುತೇಕ ಕಡೆ ತಡ ರಾತ್ರಿ ಭರ್ಜರಿ ಮಳೆಯಾಗಿದೆ. ಇದರಿಂದಾಗಿ ಗಡೆಮಾಕುಂಟೆ ಹಾಗೂ ಭರಮಸಮುದ್ರ ಕೆರೆಗಳು ಭರ್ತಿಯಾಗಿವೆ. ಇನ್ನೂ ಖಾಲಿಯಾದ ಕೆರೆಯಲ್ಲಿ ನೀರು ಕಂಡು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Narendra Modi
ದೇಶ3 hours ago

PM Modi: 400 ಸೀಟು, 400 ಸೀಟು ಎಂದು ಪ್ರತಿಪಕ್ಷಗಳನ್ನು ಮಂಗ್ಯಾ ಮಾಡಿದ ಮೋದಿ; ಅವರ ಮಾತಲ್ಲೇ ಕೇಳಿ!

Rajakaluve
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಮುಂಗಾರಿಗೆ ಮುನ್ನವೇ ರಾಜಕಾಲುವೆ ಒತ್ತುವರಿ ತೆರವಾಗಲಿ

IPL 2024
ಪ್ರಮುಖ ಸುದ್ದಿ3 hours ago

IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

DCM D K Shivakumar instructed to test drinking water everywhere including Bengaluru
ಕರ್ನಾಟಕ3 hours ago

Bengaluru News: ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

Naxals
ದೇಶ4 hours ago

Naxals: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಎನ್‌ಕೌಂಟರ್

IPL 2024
ಪ್ರಮುಖ ಸುದ್ದಿ4 hours ago

IPL 2024 : ಐಪಿಎಲ್​ನಲ್ಲಿ ಕಳಪೆ ದಾಖಲೆಯೊಂದನ್ನು ಸೃಷ್ಟಿಸಿ ನಿರ್ಗಮಿಸಿದ ಆರ್​ಸಿಬಿ

arecanut price
ಕರ್ನಾಟಕ5 hours ago

Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್‌ ಕಿ ಬಾರ್ ₹60,000 ಪಾರ್ ಆಗಲಿದೆಯಾ?

Self Harming Husband commits suicide for taking his wife home
ಕರ್ನಾಟಕ5 hours ago

Self Harming: ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ!

WhatsApp AI
ತಂತ್ರಜ್ಞಾನ5 hours ago

WhatsApp AI: WhatsAppಗೂ ಬಂತು ಎಐ; ನಿಮ್ಮ ಪ್ರೊಫೈಲ್‌ ಫೋಟೊ ಇನ್ನು AI ಜನರೇಟೆಡ್!‌

T20 world cup 2024
ಕ್ರೀಡೆ5 hours ago

T20 World Cup 2024 : ಭಾರತ ತಂಡ ವಿಶ್ವ ಕಪ್​ ಗೆಲ್ಲುವುದಿಲ್ಲ; ಇಂಗ್ಲೆಂಡ್​ ಮಾಜಿ ಆಟಗಾರನ ಭವಿಷ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ22 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌