Site icon Vistara News

Lok Sabha Election 2024: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.94ರಷ್ಟು ಮತದಾನ

70.94 percent voting in Koppal Lok Sabha constituency says Koppal DC Nalin Atul

ಕೊಪ್ಪಳ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 (Lok Sabha Election 2024)ರ ಹಿನ್ನೆಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಮತದಾನದಲ್ಲಿ ಶೇಕಡಾ 70.94 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

ಇದನ್ನೂ ಓದಿ: BESCOM Helpline: ಮಳೆ ಹಾನಿ; ದೂರು ಸಲ್ಲಿಸಲು ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌, ದೂರವಾಣಿ ಸಂಖ್ಯೆ

ವಿಧಾನಸಭಾ ಕ್ಷೇತ್ರವಾರು ಮತದಾನ

ಕೊಪ್ಪಳ ಜಿಲ್ಲೆಯ 60-ಕುಷ್ಟಗಿ ವಿಧಾನಸಭಾ ಕ್ಷೇತ್ರದ 268 ಮತಗಟ್ಟೆಗಳಲ್ಲಿ ಶೇ 69.24 ರಷ್ಟು ಮತದಾನವಾಗಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಶೇ 63.59 ರಷ್ಟು ಮತದಾನ ಆಗಿತ್ತು, ಈ ಬಾರಿ ಶೇ 69.24 ರಷ್ಟು ಮತದಾನವಾಗಿದ್ದು, ಮತದಾನ ಪ್ರಮಾಣವು ದಾಖಲೆಯ ಶೇ 5.65 ರಷ್ಟು ಹೆಚ್ಚಾಗಿದೆ.

61-ಕನಕಗಿರಿ ವಿಧಾನಸಭಾ ಕ್ಷೇತ್ರದ 266 ಮತಗಟ್ಟೆಗಳಲ್ಲಿ ಶೇ 73.36 ರಷ್ಟು ಮತದಾನವಾಗಿದೆ. 62-ಗಂಗಾವತಿ ವಿಧಾನಸಭಾ ಕ್ಷೇತ್ರದ 235 ಮತಗಟ್ಟೆ ಗಳಲ್ಲಿ ಶೇ 75.34 ರಷ್ಟು ಮತದಾನವಾಗಿದೆ. 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದ 256 ಮತಗಟ್ಟೆಗಳಲ್ಲಿ ಶೇ 73.72 ರಷ್ಟು ಮತದಾನವಾಗಿದೆ.

64-ಕೊಪ್ಪಳ ವಿಧಾನಸಭಾ ಕ್ಷೇತ್ರದ 292 ಮತಗಟ್ಟೆಗಳಲ್ಲಿ ಶೇ 73.94 ರಷ್ಟು ಮತದಾನವಾಗಿದೆ. ರಾಯಚೂರು ಜಿಲ್ಲೆಯ 58-ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 269 ಮತಗಟ್ಟೆಗಳಲ್ಲಿ ಶೇ 66.11 ರಷ್ಟು ಮತದಾನವಾಗಿದೆ. 59-ಮಸ್ಕಿ ವಿಧಾನಸಭಾ ಕ್ಷೇತ್ರದ 231 ಮತಗಟ್ಟೆಗಳಲ್ಲಿ ಶೇ 64.64 ರಷ್ಟು ಮತದಾನವಾಗಿದೆ. ಬಳ್ಳಾರಿ ಜಿಲ್ಲೆಯ 92-ಸಿರುಗುಪ್ಪ ವಿಧಾನಸಭಾ ಕ್ಷೇತ್ರದ 228 ಮತಗಟ್ಟೆಗಳಲ್ಲಿ ಶೇ 71.18 ರಷ್ಟು ಮತದಾನವಾಗಿದೆ.

ಇದನ್ನೂ ಓದಿ: Air Purifier: ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ ಏಕೆ ಅಗತ್ಯ ಗೊತ್ತೆ?

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು 2045 ಮತಗಟ್ಟೆಗಳಲ್ಲಿ ಶೇ 70.94 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

Exit mobile version