Site icon Vistara News

MLC Election: ಕಾಂಗ್ರೆಸ್ ಎಂಬುದು ದೇಶದಲ್ಲಿ ರಿಜೆಕ್ಟೆಡ್, ಎಕ್ಸ್‌ಪೈರಿ ಗೂಡ್ಸ್: ಪ್ರಲ್ಹಾದ್ ಜೋಶಿ ಲೇವಡಿ

Congress is rejected expired goods in the country says union minister Pralhad Joshi

ಗಂಗಾವತಿ: ಕಳೆದ ಒಂದು ದಶಕದಿಂದ ಲೋಕಸಭೆಯಲ್ಲಿ ವಿಪಕ್ಷ ಸ್ಥಾನದಲ್ಲಿ ಕೂರಲು ಅಗತ್ಯವಿರುವ ಸ್ಥಾನಗಳನ್ನೂ ಕಾಂಗ್ರೆಸ್ ಸಂಪಾದಿಸಿಕೊಳ್ಳಲು ಸಾಧ್ಯವಿಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಾಂಗ್ರೆಸ್ (Congress) ಎಂಬುವುದು ದೇಶದಲ್ಲಿ ರಿಜೆಕ್ಟೆಡ್ ಮತ್ತು ಎಕ್ಸ್‌ಪೈರಿ ಗೂಡ್ಸ್‌ನಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (MLC Election) ಲೇವಡಿ ಮಾಡಿದರು.

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಇಲ್ಲಿನ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷವನ್ನು ಜನ ನಿಧಾನವಾಗಿ ಮರೆತು ಹೋಗುತ್ತಿದ್ದಾರೆ. ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲದಂತ ಸ್ಥಿತಿ ನಿರ್ಮಾಣವಾಗಿರುವ ಕಾರಣಕ್ಕೆ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂಬ ದುರುದ್ದೇಶದಿಂದ ಈಡೇರಿಸಲು ಸಾಧ್ಯವಿಲ್ಲದಂತ ಗ್ಯಾರಂಟಿಗಳ ಆಶ್ವಾಸನೆ ನೀಡುತ್ತಿದೆ ಎಂದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

ರಾಯ್‌ಬರೇಲಿಯಂತ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸೋನಿಯಾಗಾಂಧಿ, ಪ್ರಿಯಾಂಕಾ ವಾದ್ರಾ, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌ ಸೇರಿದಂತೆ ಪಕ್ಷದ ಹಲವು ಮುಖಂಡರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಆದಾಗ್ಯೂ ಗೆಲವು ಅಷ್ಟು ಸುಲಭವಲ್ಲ. ಜನರಿಗೆ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಅರ್ಥವಾಗಿದೆ.‌

ಕಳೆದ 60 ವರ್ಷಕಾಲ ಆಡಳಿತ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್‌ನ ದುರಾಡಳಿತ, ತುಷ್ಠೀಕರಣ, ಭ್ರಷ್ಟಾಚಾರ, ದೇಶದ ಸ್ಥಿತಿಯ ಬಗ್ಗೆ ಜನರಿಗೆ ಚನ್ನಾಗಿ ಅರ್ಥವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಜನ ನಿಧಾನವಾಗಿ ಮರೆಯುತ್ತಿದ್ದಾರೆ ಎಂದರು.

ಯುಪಿಎ ಸರ್ಕಾರದ ಹತ್ತು ವರ್ಷದ ಅವಧಿಯಲ್ಲಿ 12 ಲಕ್ಷ ಕೋಟಿ ರೂಪಾಯಿ ಮೊತ್ತದ ಭ್ರಷ್ಟಾಚಾರ ನಡೆದಿದೆ. ಮೋದಿ ಸರ್ಕಾರದ ಈ ಹತ್ತು ವರ್ಷದಲ್ಲಿ ಒಂದೇ ಒಂದು ರೂಪಾಯಿ ಅಕ್ರಮ ನಡೆದಿಲ್ಲ. ಆದರೆ ಕಾಂಗ್ರೆಸ್ ಸುಳ್ಳಿನ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.

ಕ್ಷೇತ್ರದ ಮುಖ ನೋಡಿಲ್ಲ

ಶಾಸಕ ಜಿ. ಜನಾರ್ದನರೆಡ್ಡಿ ಮಾತನಾಡಿ, ಕಳೆದ ಆರು ವರ್ಷದಿಂದ ಈ ಕ್ಷೇತ್ರದ ಎಂಎಲ್ಸಿ ಕಾಂಗ್ರೆಸ್ ಪಕ್ಷದ ಚಂದ್ರಶೇಖರ್ ಪಾಟೀಲ್ ಮತದಾರರಿಗೆ ಮುಖ ತೋರಿಸಿಲ್ಲ. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೆ, `ಮುಖ ತೋರಿಸಬೇಕಾದ ಅಗತ್ಯವೇನಿದೆ..? ಮತಗಳನ್ನು ಹೇಗೆ ಪಡೆಯಬೇಕು ಎಂಬುವುದು ತಮಗೆ ಗೊತ್ತಿದೆ’ ಎಂದು ದರ್ಪದ ಮಾತುಗಳನ್ನು ಆಡಿದ್ದಾರೆ. ಶ್ರೀಮಂತಿಕೆಯ ಕುಟುಂಬದ ಹಿನ್ನೆಲೆಯ ದರ್ಪ ಚಂದ್ರಶೇಖರ್ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Washing Machine Cleaning Tips: ವಾಷಿಂಗ್ ಮೆಷಿನ್ ಹೆಚ್ಚು ಬಾಳಿಕೆ ಬರಬೇಕೆ? ಈ ರೀತಿ ಸ್ವಚ್ಛಗೊಳಿಸಿ

ಜನರ ಮಧ್ಯೆಯೇ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸರಳ ವ್ಯಕ್ತಿತ್ವದ ಅಮರನಾಥ್ ಪಾಟೀಲ್‌ ಅವರಿಗೆ ಮತ ಹಾಕಬೇಕು. ಚಂದ್ರಶೇಖರ್ ಅವರಿಗೆ ಒಂದೇ ಒಂದು ಮತ ಹಾಕಬಾರದು ಎಂದು ಶಾಸಕ ಜಿ. ಜನಾರ್ದನರೆಡ್ಡಿ ಮನವಿ ಮಾಡಿದರು.

Exit mobile version