ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿ ದಲಿತ ಯುವತಿಯನ್ನು ವಿಷವಿಟ್ಟು ಕೊಲೆಗೈದ ಪ್ರಕರಣ (Murder Case) ತಡವಾಗಿ ಬೆಳಕಿಗೆ ಬಂದಿದೆ. ಮರಿಯಮ್ಮ ಹನುಮಯ್ಯ ನಾಯಕ ಗಟಾಲಿ ಎಂಬ 20 ವರ್ಷದ ಯುವತಿ ಮೃತಪಟ್ಟ ಯುವತಿಯಾಗಿದ್ದಾಳೆ.
ಮೃತಳ ತಂದೆ ಗಾಳೆಪ್ಪ ಯಮನಪ್ಪ ಬೇವೂರು ಕನಕಗಿರಿ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿ ಪ್ರಕರಣ ದಾಖಲಿಸಿದ್ದಾರೆ. ಮೃತ ಯುವತಿ ಮಾದಿಗ ಸಮುದಾಯಕ್ಕೆ ಸೇರಿದ್ದಳು. ವಿಠಲಾಪುರದ ನಾಯಕ ಸಮುದಾಯಕ್ಕೆ ಸೇರಿದ ಹನುಮಯ್ಯ ಗಟಾಲಿಯನ್ನು ಪ್ರೀತಿಸಿದ್ದಳು. ಹಲವು ವರ್ಷದಿಂದ ಇಬ್ಬರ ನಡುವೆ ಪ್ರೀತಿ ಇದ್ದು, ಒಂದು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು.
ವಿವಾಹಕ್ಕೆ ಯುವಕನ ಮನೆಯವರ ವಿರೋಧವಿತ್ತು. ಇದೇ ಕಾರಣಕ್ಕೆ ಯುವಕನ ಕುಟುಂಬದವರು ವಿಷವಿಟ್ಟಿದ್ದಾರೆ ಎಂದು ಹನುಮಯ್ಯ ಹಾಗೂ ಮೃತ ಮರಿಯಮ್ಮ ಕುಟುಂಬದಿಂದ ದೂರಿದ್ದಾರೆ. ವಿವಾಹಕ್ಕೆ ಯುವಕನ ಮನೆಯವರ ವಿರೋಧವಿತ್ತು. ಇದೇ ಕಾರಣಕ್ಕೆ ಯುವಕನ ಕುಟುಂಬದವರು ವಿಷವಿಟ್ಟಿದ್ದಾರೆ ಎಂದು ಹನುಮಯ್ಯ ಹಾಗೂ ಮೃತ ಮರಿಯಮ್ಮ ಕುಟುಂಬದಿಂದ ದೂರಿದ್ದಾರೆ.
ಮದುವೆಯಾದ ನಂತರ ಮರಿಯಮ್ಮಗೆ ಯುವಕನ ಮನೆಯಲ್ಲಿ ಹಿಂಸೆ ನೀಡುತ್ತಿದ್ದರು. ಯುವಕನ ಕುಟುಂಬದವರು ಹಲ್ಲೆ ಸಹ ನಡೆಸಿದ್ದರು. ವರದಕ್ಷಿಣೆ ತರುವಂತೆ ಕೂಡ ಪೀಡಿಸುತ್ತಿದ್ದರು ಆದ್ದರಿಂದ ದಂಪತಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಾಗಿದ್ದರು.
ನನ್ನ ಮಗಳನ್ನು ಕೊಂದಿದ್ದಾರೆ ಎಂದು ಯುವತಿಯ ತಂದೆ ಪೋಲಿಸರಲ್ಲಿ ದೂರು ನೀಡಿದಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಯ್ಯ ಗಟಾಲಿ, ಕಾಳಿಂಗಪ್ಪ ಗಟಾಲಿ, ರಾಮಲಿಂಗಪ್ಪ, ಗಂಗಮ್ಮ, ಮಾರುತಿ, ಅರುಣಾ, ಶರಣಪ್ಪ, ಹಳ್ಳಮ್ಮ, ಈರಮ್ಮ, ಸುಮಾ, ಅನಿತಾ, ಶಿವಕುಮಾರ, ಹಾಗೂ ಈರಣ್ಣ ಎಂಬ ಹದಿಮೂರು ಜನರ ಮೇಲೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.