ಕೊಪ್ಪಳ: ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿದ್ದಾರೆ. ನಾಗಮ್ಮ ಎಂಬಾಕೆಗೆ ಲೋನ್ ಕೊಡುವ ನೆಪದಲ್ಲಿ ಫೈನಾನ್ಸ್ ಸಿಬ್ಬಂದಿ ನನ್ನೊಟ್ಟಿಗೆ ಕೆಲವು ಸಮಯ ಕಾಲಕಳೆಯುವಂತೆ ಕೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಧರ್ಮದೇಟು ನೀಡಿರುವ (Physical Abuse) ಘಟನೆ ಕೊಪ್ಪಳ ತಾಲೂಕಿನ ಹಳೇಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ.
ಗೋದಾವರಿ ಮೈಕ್ರೋ ಫೈನಾನ್ಸ್‌ನ ಸಿಬ್ಬಂದಿ ಯಮನೂರಪ್ಪ ಎಂಬಾತನಿಗೆ ನಾಗಮ್ಮ ಚಪ್ಪಲಿಯಿಂದ ಹೊಡೆದು, ಥಳಿಸಿದ್ದಾರೆ. ನಾಗಮ್ಮ ಮೈಕ್ರೋಫೈನಾನ್ಸ್ ಮಹಿಳಾ ಗುಂಪಿನ ಸದಸ್ಯರಾಗಿದ್ದಾರೆ. ಫೈನಾನ್ಸ್ ಸಿಬ್ಬಂದಿ ಯಮನೂರಪ್ಪ ನಾಗಮ್ಮಳಿಗೆ ಲೋನ್ ಕೊಡಲು ತಕರಾರು ತೆಗೆದಿದ್ದಾನೆ.
ಮಾತ್ರವಲ್ಲ ಲೋನ್ ಕೊಡುವ ನೆಪದಲ್ಲಿ ತನ್ನ ಜತೆ ಒಂದು ದಿನ ಕಾಲಕಳೆಯಲು ಕರೆದಿದ್ದಾನೆಂದು ಎಂದು ನಾಗಮ್ಮ ಆರೋಪಿಸಿದ್ದಾರೆ. ರಾತ್ರಿ 10 ಗಂಟೆ ನಂತರ ಸುಖಾಸುಮ್ಮನೆ ಫೋನ್ ಕಾಲ್ ಮಾಡಿ ಟಾರ್ಚರ್ ಮಾಡುತ್ತಿದ್ದ.
ಫೈನಾನ್ಸ್ ಸಿಬ್ಬಂದಿ ಯಮನೂರಪ್ಪ ವರ್ತನೆಗೆ ರೊಚ್ಚಿಗೆದ್ದ ನಾಗಮ್ಮ ಹಾಗೂ ಆಕೆಯ ತಾಯಿ ರಸ್ತೆಯಲ್ಲೇ ಹಿಡಿದು ಹೊಡೆದಿದ್ದಾರೆ. ಮೊಸಳೆ ಕಣ್ಣೀರು ಹಾಕಿ ನಾನೇನು ಮಾಡಿಲ್ಲ ಎಂದವನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ