ಕೊಪ್ಪಳ: ಕೊಪ್ಪಳದ ಕೊಳಗೇರಿ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ(PMAY) 402 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿದೆ. ಬಡವರಿಗೆ ಸೂರು ನೀಡುವ ಸರ್ಕಾರದ ಈ ಯೋಜನೆಯಡಿ ಈಗಾಗಲೇ ಅನೇಕ ಮನೆಗಳನ್ನು ನಿರ್ಮಿಸಿಕೊಡಲಾಗಿದೆ.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಈ ವೇಳೆಯಲ್ಲಿ ಸಚಿವ ಆನಂದ್ ಸಿಂಗ್ ಉಪಸ್ಥಿತರಿದ್ದು ಶಂಕುಸ್ಥಾಪನೆಯ ಕಾರ್ಯಕ್ರಮದ ನೇತೃತ್ವನ್ನು ವಹಿಸಿದರು. ಕೊಪ್ಪಳ ನಗರದ ಸಜ್ಜಿಹೊಲ ಪ್ರದೇಶದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನದ ಬಳಿ ಮನೆಗಳ ನಿರ್ಮಾಣ ಆಗಲಿದೆ.
ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್, ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರನ್ನುಮ್ ಸೇರಿದಂತೆ ಮತ್ತಿತರು ಭಾಗಿಯಾಗಿದ್ದರು.
ಏನಿದು ಪ್ರಧಾನ ಮಂತ್ರಿ ಆವಾಸ್ ಯೋಜನಾ?
ಪ್ರಧಾನ ಮಂತ್ರಿ ಆವಾಸ್ ಯೋಜನಾ ʼಸರ್ವರಿಗೂ ನಿವಾಸʼ ಎಂಬ ಉದ್ದೇಶಿದಿಂದ 2015ರಲ್ಲಿ ಆರಂಭಗೊಂಡ ಸರ್ಕಾರದ ಬೃಹತ್ ಯೋಜನೆ. ಈ ಯೋಜನೆಯಡಿ ಅಗತ್ಯ ಇರುವ ಸಾರ್ವಜನಿಕರಿಗೆ ಹೋಮ್ ಲೋನ್ ಮೇಲೆ ಸುಮಾರು ₹2.67 ಲಕ್ಷದಷ್ಟು ಸಬ್ಸಿಡಿ ದೊರಕಲಿದೆ. ಅರ್ಹತೆ ಇರುವವರಿಗೆ ಮಾತ್ರ ಈ ಯೋಜನೆಯ ಉಪಯೋಗ ದೊರಕಲಿದೆ.
ಹೆಚ್ಚಿನ ವಿವರ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ದೊರಕಲಿದೆ. ಓದಲು ಇಲ್ಲಿ ಕ್ಲಿಕ್ ಮಾಡಿ.
ಈಗಾಗಲೇ ಸರ್ಕಾರದಿಂದ ಸುಮಾರು 5 ಲಕ್ಷ ಮನೆಗಳನ್ನು ಈ ಯೋಜನೆಯಡಿ ನಿರ್ಮಿಸಲಾಗಿದೆ, ಹಾಗೂ ಸುಮಾರು 98 ಲಕ್ಷ ಮನೆಗಳ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಅಲ್ಲದೆ, ದೇಶದಲ್ಲಿ ಒಟ್ಟು ಸುಮಾರು 1.22 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ಇದನ್ನೂ ಓದಿ: ಅಂಜನಾದ್ರಿಗೆ ಆಗಮಿಸಲು ಯೋಗಿ ಆದಿತ್ಯನಾಥರಿಗೆ ಆಹ್ವಾನ