ಕೊಪ್ಪಳ : ಕೊಪ್ಪಳದಲ್ಲಿ (Koppal) ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಒಟ್ಟು 5.65 ಲಕ್ಷ ರೂಪಾಯಿ ವಶಪಡಿಸಿದ್ದಾರೆ.
ಕೊಪ್ಪಳ ಹಾಗೂ ಕ್ಯಾದಿಗುಪ್ಪಾ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರ ಪರಿಶೀಲನೆ ವೇಳೆ ಹಣ ಪತ್ತೆಯಾಗಿದೆ. ಗೌತಮ ಜೈನ್ ಹಾಗೂ ಜೀತೇಂದ್ರ ಜೈನ್ ರಿಂದ ನಗದನ್ನು ವಶಪಡಿಸಿಕೊಂಡರು. ಸ್ಕೂಟಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ 3.15 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಯಿತು.
ರಾಷ್ಟ್ರೀಯ ಹೆದ್ದಾರಿ 50 ರ ಕ್ಯಾದಿಗುಪ್ಪಾ ಚೆಕ್ ಪೋಸ್ಟ್ ನಲ್ಲಿ 2.50 ಲಕ್ಷ ರೂ. ನಗದು ಪತ್ತೆಯಾಗಿದೆ. ಹೊಸಪೇಟೆಯಿಂದ ಇಲಕಲ್ ಗೆ ಹೊರಟಿದ್ದ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ಚುನಾವಣೆಯ ದಿನಾಂಕ ಘೋಷಣೆಯ ಮುನ್ನವೇ ಕಾರ್ಯಾಚರಣೆಗೆ ಪೊಲೀಸರು ಇಳಿದಿದ್ದಾರೆ. ವ್ಯಾಪಕ ತನಿಖೆ ಕೈಗೊಂಡಿದ್ದಾರೆ.