Site icon Vistara News

ಕೊಪ್ಪಳದ ಬಾಲಕಿ ಸಾವು: ಗುಂಡಿಯಲ್ಲಿ ಬೀಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಕೊಪ್ಪಳ: ಕಾಮಗಾರಿ ನಡೆಸಲು ತೋಡಲಾಗಿದ್ದ ಗುಂಡಿಯಲ್ಲಿ 15 ವರ್ಷದ ಬಾಲಕಿ ಸಾವನ್ನಪ್ಪಿದ ನಂತರ ಎಚ್ಚೆತ್ತಿರುವ ಜಾಗದ ಮಾಲಿಕ ಜೆಸಿಬಿ ಮೂಲಕ ಗುಂಡಿಗಳನ್ನು ಮುಚ್ಚಿದ್ದಾನೆ. ಇದೇ ವೇಳೆ, ಬಾಲಕಿ ಗುಂಡಿಗೆ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ.

ಹೊಸಪೇಟೆ ರಸ್ತೆಯಲ್ಲಿರುವ ಕೆ.ಎಸ್. ಆಸ್ಪತ್ರೆಗೆ ತೆರಳಿದ್ದ ಬಾಲಕಿ ಶ್ರೀದೇವಿ ಮನೆಗೆ ಹಿಂದಿರುಗಿರಲಿಲ್ಲ. ಈ ಕುರಿತು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ವಿವಿಧ ಕಡೆಗಳಲ್ಲಿ ಹುಡುಕಾಟದ ನಂತರ ಮೂರು ದಿನದ ಬಳಿಕ, ಆಸ್ಪತ್ರೆಯ ಎದುರಿನ ಗುಂಡಿಯಲ್ಲಿ ಬಾಲಕಿ ಶವ ಕಳೆದ ಬುಧವಾರ ಪತ್ತೆಯಾಗಿತ್ತು.

ಕಟ್ಟಡ ಕಾಮಗಾರಿಗಾಗಿ ಗುಂಡಿ ಅಗೆಸಿ ಹಾಗೆಯೇ ಬಿಟ್ಟಿದ್ದ ಮಾಲೀಕನ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಎಚ್ಚೆತ್ತ ಮಾಲೀಕ, ಜೆಸಿಬಿಗಳನ್ನು ಕರೆಸಿ ಗುಂಡಿಗಳನ್ನು ಮುಚ್ಚಿಸಿದ್ದಾನೆ.

ಇದೇ ವೇಳೆ, ಬಾಲಕಿ ಗುಂಡಿಯಲ್ಲಿ ಮುಳುಗುತ್ತಿರುವ ಕರುಣಾಜನಕ ದೃಶ್ಯ, ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದ ಪ್ರಕಾರ,. ಬಾಲಕಿಯು ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಳೆ. ಇದ್ದಕ್ಕಿದ್ದಂತೆ ಗುಂಡಿ ಇರುವ ದಿಕ್ಕಿನಕಡೆ ನಡೆದುಕೊಂಡು ಹೊಗಿದ್ದಾಳೆ. ಅಲ್ಲಿ ಕಾಲುಜಾರಿ ಗುಂಡಿಯಲ್ಲಿ ಬಿದ್ದಿದ್ದಾಳೆ. ಮೇಲೆ ಏಳಲು ಕೆಲಕಾಲ ಪ್ರಯತ್ನ ಪಟ್ಟಿದ್ದಾಳೆ. ಆದರೆ ಅತ್ಯಂತ ಆಳವಾಗಿದ್ದ ಗುಂಡಿಯಿಂದ ಮೇಲೇಳಲು ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾಳೆ.

ಬಾಲಕಿ ಮುಳುಗುತ್ತಿರುವ ಸಮೀಪದಲ್ಲೆ ವ್ಯಕ್ತಿಯೊಬ್ಬರು ನಿಂತಿದ್ದಾರೆ. ಅವರು ದೂರವಾಣಿಯಲ್ಲಿ ಮಾತನಾಡಿಕೊಂಡು ಸ್ಕೂಟರ್‌ ಹತ್ತಿ ಹೋಗುತ್ತಾರೆ. ಸಮೀಪದಲ್ಲೆ ಮಹಿಳೆಯೊಬ್ಬರೂ ನಿಂತಿದ್ದಾರೆ. ಆದರೆ ಇವರ‍್ಯಾರಿಗೂ ಬಾಲಕಿಯ ಕುರಿತು ತಿಳಿದುಬಂದಿಲ್ಲ. ಆದರೆ ಬಾಲಕಿ ಯಾವ ಕಾರಣಕ್ಕೆ ಗುಂಡಿಯ ಕಡೆ ಹೊಗಿದ್ದಳು ಎಂಬುದು ಮಾತ್ರ ತಿಳಿದು ಬಂದಿಲ್ಲ.

ಇದನ್ನೂ ಓದಿ: ಕೊಪ್ಪಳದಲ್ಲಿ ಮಳೆಯಿಂದ ನೆಲಕ್ಕುರುಳಿದ ಬೆಳೆ; ನೀರು ತುಂಬಿದ ಗುಂಡಿಗೆ ಬಿದ್ದು ಬಾಲಕಿ ಸಾವು –

Exit mobile version