Site icon Vistara News

Wild Animals Attack : ಕೊಪ್ಪಳದಲ್ಲಿ ಕಂಡ ಕಂಡಲ್ಲಿ ಕರಡಿಗಳ ಹಾವಳಿ

bear attack

ಕೊಪ್ಪಳ: ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದಲ್ಲಿ ಕರಡಿಗಳು ( bear Attack) ಹಿಂಡು ಹಿಂಡಾಗಿ ಪ್ರತ್ಯಕ್ಷಗೊಂಡಿವೆ. ಕರಡಿಗಳನ್ನು ಕಂಡು ಜನರು ಭಯಭೀತರಾಗಿದ್ದಾರೆ. ಕನಕಗಿರಿ ಪಟ್ಟಣದ ತಾವರಗೇರಾ ರಸ್ತೆಯಲ್ಲಿರುವ ಚನ್ನಮ್ಮ ಸರ್ಕಲ್ ಬಳಿ ಕಳೆದ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಕರಡಿಗಳು ಕಾಣಿಸಿಕೊಂಡಿವೆ. ಈಗಾಗಲೇ ತಾಲೂಕಿನ ಅನೇಕ ಕಡೆ ಕರಡಿ ದಾಳಿಗೆ ತುತ್ತಾಗಿ ಅನೇಕರು ಆಸ್ಪತ್ರೆಗೆ ಸೇರಿದ್ದಾರೆ. ಕರಡಿಗಳನ್ನು ಸುರಕ್ಷಿತ ಜಾಗದಲ್ಲಿ ಬಿಡುವಂತೆ ಜನರು ಆಗ್ರಹಿಸಿದ್ದಾರೆ.

ರೈತನ ಮೇಲೆ ಎರಗಿದ್ದ ಕರಡಿ

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಪರಾಪುರ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ರೈತನ ಮೇಲೆ ಕರಡಿ ದಾಳಿ ಮಾಡಿತ್ತು. ಕರಡಿ ದಾಳಿಯಿಂದ ತೀವ್ರ ಗಾಯಗೊಂಡಿರುವ ರೈತ ಶಿವಶಂಕರಪ್ಪರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕರಡಿಯನ್ನು ಬೆನ್ನಟ್ಟಿದ ಶ್ವಾನಗಳು

ಕೊಪ್ಪಳ ತಾಲೂಕಿನ ಚಿಲಕಮುಖಿ ಗ್ರಾಮದ ಸಮೀಪ ಇರುವ ಜಮೀನಿಗೆ ಕರಡಿಯೊಂದು ನುಗ್ಗಿತ್ತು. ಕರಡಿ ಕಂಡೊಡನೆ ನಾಯಿಗಳು ಬೆನ್ನತ್ತಿವೆ. ನಾಯಿಗಳ ದಾಳಿ ಕಂಡು ಜಮೀನಿನಿಂದ ಕರಡಿ ಕಾಲ್ಕಿತ್ತಿದೆ. ಆಹಾರಕ್ಕಾಗಿ ಕರಡಿಗಳು ಗ್ರಾಮಕ್ಕೆ ಲಗ್ಗೆಯಿಡುತ್ತಿವೆ.

ಇದನ್ನೂ ಓದಿ: Ballari News: ಕಂಪ್ಲಿಯ ದೇವಸಮುದ್ರ ಗ್ರಾಮದಲ್ಲಿ ಎರಡು ಕರಡಿ ಪ್ರತ್ಯಕ್ಷ!

ಚಾಮರಾಜನಗರದಲ್ಲಿ ಆನೆ ಆರ್ಭಟಕ್ಕೆ ಕಾಲ್ಕಿತ್ತ ಹುಲಿ

ಕೆರೆಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿಯನ್ನು ಆನೆಯೊಂದು ಓಡಿಸಿದೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದಲ್ಲಿ ಘಟನೆ ನಡೆದಿದೆ. ಆನೆಯು ಹುಲಿಯನ್ನು ಅಟ್ಟಾಡಿಸಿದ ದೃಶ್ಯ ಬಂಡೀಪುರ ಸಫಾರಿಗೆ ತೆರಳಿದವರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಆನೆ ಆರ್ಭಟಕ್ಕೆ ಭಯದಿಂದ ಹುಲಿ ಕಾಲ್ಕಿತ್ತಿತ್ತು. ಆನೆ ಹೋದ ಬಳಿಕ ಮತ್ತೆ ಕೆರೆಗೆ ಬಂದು ಹುಲಿ ಮಲಗಿತ್ತು.

ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿಗೆ ಭರ್ಜರಿ ರೆಸ್ಪಾನ್ಸ್‌

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಸಫಾರಿ ಆರಂಭಗೊಂಡಿದೆ. ದೇಶದಲ್ಲೆ ಅತಿ ದೊಡ್ಡ ಹಾಗೂ ದಕ್ಷಿಣ ಭಾರತದ ಮೊದಲ ಚಿರತೆ ಸಫಾರಿ ಇದಾಗಿದ್ದು, ಪ್ರವಾಸಿಗರು ದಂಡು ಆಗಮಿಸಿದೆ. ಎರಡು ದಿನಗಳ ಹಿಂದೆ ಆರಂಭಗೊಂಡ ಚಿರತೆ ಸಫಾರಿಗೆ ರೆಸ್ಪಾನ್ಸ್‌ ಸಿಕ್ಕಿದೆ. ಮಕ್ಕಳೊಂದಿಗೆ ಕುಟುಂಬ ಸಮೇತ ಬಂದು ಚಿರತೆ ಸಫಾರಿಯನ್ನು ಎಂಜಾಯ್‌ ಮಾಡುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version