ಕಿಗ್ಗ (ಶೃಂಗೇರಿ): ರಾಜ್ಯದಲ್ಲಿ ಹೆಚ್ಚುತ್ತಿರುವ ವರುಣಾರ್ಭಟವನ್ನು ನಿಲ್ಲಿಸು ದೇವರೇ ಎಂದು ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ಮಂಗಳವಾರ ಶೃಂಗೇರಿ ಸಮೀಪದ ಕಿಗ್ಗಾದಲ್ಲಿರುವ ಋಷ್ಯ ಶೃಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಕರ್ನಾಟಕ ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಅವರು ಪೂಜೆ ನೆರವೇರಿಸಿದರು.
ಕಿಗ್ಗಾದ ಋಷ್ಯಶೃಂಗೇಶ್ವರ ದೇವರು ಮಳೆ ದೇವರೆಂದೇ ಹೆಸರುವಾಸಿ. ಮಳೆ ಇಲ್ಲದೆ ಬರದ ಪರಿಸ್ಥಿತಿ ಎದುರಾದಾಗ ಋಷ್ಯಶೃಂಗನನ್ನು ಪೂಜಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಇದೇ ನಂಬಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರು ಡಿ.ಕೆ.ಶಿವಕುಮಾರ್ ಪ್ರತಿವರ್ಷ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ, ಈ ಬಾರಿ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಾರೆ. ಆದರೆ, ಈ ಬಾರಿ ಮಳೆ ವಿಪರೀತವಾಗಿ ಅನಾಹುಗಳು ಸಂಭವಿಸುತ್ತಿವೆ. ಮಳೆ ಬರಿಸುವ ಶಕ್ತಿ ಇರುವ ಋಷ್ಯಶೃಂಗನಿಗೆ ಮಳೆಯನ್ನು ನಿಲ್ಲಿಸುವ ಶಕ್ತಿಯೂ ಇದೆ ಎಂಬ ಕಾರಣಕೆ ಮಳೆ ನಿಲ್ಲಿಸಲು ಕೋರಿ ಪೂಜೆ ಸಲ್ಲಿಸಲಾಯಿತು.
ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಿಂದಾಗಿ ಭಾರಿ ಅನಾಹುತಗಳು ಸಂಭವಿಸುತ್ತಿದ್ದು, ಇದರಿಂದ ಜನರನ್ನು ರಕ್ಷಿಸು, ಮಳೆಯ ಪ್ರಹಾರವನ್ನು ಕಡಿಮೆ ಮಾಡು ಎಂದು ದೇವರ ಮುಂದೆ ಭಕ್ತಿಯಿಂದ ಪ್ರಾರ್ಥಿಸಲಾಯಿತು ಎಂದು ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಹೇಳಿದರು.
ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ರೈತರು ಮತ್ತು ಕೃಷಿ ಕಾರ್ಮಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅನೇಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ ಕೃಷಿ ಜಮೀನುಗಳು ಕೊಚ್ಚಿಹೋಗಿವೆ. ರೈತರು ಬೆಳೆದ ಫಸಲು ನಿರೂಪಲಾಗಿದೆ. ಮಳೆ ಹೀಗೆ ಮುಂದುವರಿದರೆ ರಾಜ್ಯದ ರೈತರು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ದೇವಸ್ಥಾನದಲ್ಲಿ ಪ್ರಾರ್ಥನೆ ಮತ್ತು ಪೂಜೆಗೆ ಅವಕಾಶ ಕೋಡಬೇಕು ಎಂದು ಕೋರಿ ಡಿ.ಕೆ.ಶಿವಕುಮಾರ್ ಅವರು ದೇವಸ್ಥಾನಕ್ಕೆ ಬರೆದ ಪತ್ರದಲ್ಲಿ ವಿನಂತಿಸಿದ್ದರು.
ಇದನ್ನೂ ಓದಿ | ಮುಂದುವರಿದ ಮಳೆ ಆರ್ಭಟ, ಭೂಕುಸಿತ; ಉಕ್ಕಿದ ನದಿಗಳು, ಕೊಚ್ಚಿ ಹೋದ ವಾಹನಗಳು