Site icon Vistara News

KPSC Result Late | ಪ್ರತಿಭಟನಾಕಾರರ ಕೆನ್ನೆಗೆ ಹೊಡೆದರೇ ಪೊಲೀಸರು?

kpsc

ಬೆಂಗಳೂರು: ಕೆಪಿಎಸ್‌ಸಿ ಅಭ್ಯರ್ಥಿಗಳ (KPSC Result Late) ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಕೆನ್ನೆಗೆ ಪೊಲೀಸರು ಹೊಡೆದರು ಎಂಬ ಆರೋಪ ಕೇಳಿ ಬಂದಿದೆ.

ಉದ್ಯೋಗ ಸೌಧದಲ್ಲಿ ಅಭ್ಯರ್ಥಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು, ಕೆಪಿಎಸ್‌ಸಿ ಫಲಿತಾಂಶ ಘೋಷಣೆಗೆ ಪಟ್ಟು ಹಿಡಿದಿದ್ದರು. ಈ ವೇಳೆ ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರು ಅಭ್ಯರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದರು. ಹಾಗಾಗಿ ಈ ವೇಳೆ ಮಹಿಳಾ ಮುಖಂಡರು, ಮಹಿಳಾ ಅಭ್ಯರ್ಥಿಗಳ ಮೇಲೆ ನೂಕಾಟ, ತಳ್ಳಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಆದರೆ, ಇದೇ ವೇಳೆ ಪ್ರತಿಭಟನಾಕಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದಕ್ಕೆ ಪೊಲೀಸರು ಇದುವರೆಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

ವರ್ಷ ಕಳೆದರೂ ಪ್ರಕಟಿಸದ ಫಲಿತಾಂಶ

ಕರ್ನಾಟಕ ಲೋಕ ಸೇವಾ ಆಯೋಗವು ವಿವಿಧ ಹುದ್ದೆಗಳಿಗೆ ನೇಮಕಾತಿ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದೆ. ಕೆಪಿಎಸ್‌ಸಿ ಪರೀಕ್ಷೆ ಮುಗಿದು 17 ತಿಂಗಳು ಕಳೆದರೂ ಫಲಿತಾಂಶ (KPSC Result Late) ಪ್ರಕಟಗೊಂಡಿಲ್ಲ. ಹೀಗಾಗಿ ಮತ್ತೊಮ್ಮೆ ಕೆಪಿಎಸ್‌ಸಿ ವಿರುದ್ಧ ನೂರಾರು ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಿಬ್ಬಂದಿ ಕೊರತೆ

ಪರೀಕ್ಷೆ ವಿಚಾರವಾಗಿ ಕೂಡಲೇ ತಿಳಿಸಲು ಕಷ್ಟವಾಗುತ್ತಿದೆ. ಕಾರಣ, ಈ ವಿಭಾಗಕ್ಕೆ ಸೇರಿದ ಕಾನ್ಫಿಡೆನ್ಶಿಯಲ್ ಸಿಬ್ಬಂದಿ ಆರೋಗ್ಯ ಸರಿಯಿಲ್ಲ, ಅವರು ಬಂದ ಕೂಡಲೇ ಲಿಸ್ಟ್ ನೀಡಲಾಗುತ್ತದೆ. ಜುಲೈ 15ರಂದೇ ಲಿಸ್ಟ್ ಹೊರಬರಬೇಕಿತ್ತು. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ತಡವಾಗಿದೆ ಎಂದು ಕೆಪಿಎಸ್‌ಸಿ ಸೆಕ್ರೆಟರಿ ತಿಳಿಸಿದ್ದಾರೆ. ಸೋಮವಾರದ ವೇಳೆಗೆ ಗೆಜೆಟೆಡ್ ಲಿಸ್ಟ್ ಹೊರಬರಲಿದೆ. ಉಳಿದಂತೆ ಪಿಡಬ್ಲ್ಯೂಡಿ, ಎಸ್‌ಡಿಎ ಫೈಲ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ | KPSC Result Late | ಕೆಪಿಎಸ್‌ಸಿ ಬರೆಯಲು ಬಂದ ಯುವಕ-ಆಗುವನು ಮುದುಕ; ಪ್ರತಿಭಟನಾಕಾರರ ಕಿಡಿನುಡಿ

Exit mobile version