ಬೆಂಗಳೂರು: ಶೇ.20 ರಷ್ಟು ವೇತನ ಹೆಚ್ಚಳಕ್ಕೆ ಇಂಧನ ಇಲಾಖೆ ಒಪ್ಪಿಗೆ ಸೂಚಿಸಿದ್ದರೂ ಶೇ.22 ರಷ್ಟು ವೇತನ ಹೆಚ್ಚಳ ಮಾಡಲೇಬೇಕು ಎಂದು ಕೆಪಿಟಿಸಿಎಲ್ ನೌಕರರ ಸಂಘ ಮತ್ತು ವಿವಿಧ ಎಸ್ಕಾಂಗಳ ಅಧಿಕಾರಿಗಳು, ನೌಕರರ ಒಕ್ಕೂಟ (KPTCL Strike) ಪಟ್ಟು ಹಿಡಿದಿವೆ. ತಮ್ಮ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಲಿಖಿತ ರೂಪದ ಆದೇಶವನ್ನು ಬುಧವಾರ ರಾತ್ರಿ 12 ಗಂಟೆಯೊಳಗೆ ನೀಡದಿದ್ದರೆ ಮಾರ್ಚ್ 16ರಿಂದ ಮುಷ್ಕರಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿವೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಲ್) ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂಗಳ) ಅಧಿಕಾರಿಗಳು ಮತ್ತು ನೌಕರರ ಒಕ್ಕೂಟ ಶೇ.40 ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದವು. ಆದರೆ ಸರ್ಕಾರ ಶೇ.20ರಷ್ಟು ಹೆಚ್ಚು ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ, ಇದು ನೌಕರರಿಗೆ ಅತೃಪ್ತಿ ತಂದಿದೆ. ನಮಗೆ ಶೇ. 22ರಷ್ಟು ಹೆಚ್ಚಳ ಮಾಡಬೇಕೆಂದು ಬೇಡಿಕೆ ಇಟ್ಟಿದ್ದೇವೆ ಎಂದು ಕೆಪಿಟಿಸಿಎಲ್ ನೌಕರರ ಸಂಘ ತಿಳಿಸಿದೆ.
ಈಗ ನೌಕರರಿಗೆ ಮಂಡಳಿ ತೀರ್ಮಾನದ ಪ್ರಕಾರ ಶೇ.22ರಷ್ಟು ಹೆಚ್ಚಳ ಮಾಡುವವರೆಗೂ ಮುಷ್ಕರ ಹಿಂಪಡೆಯಲ್ಲ. ಸರ್ಕಾರಕ್ಕೆ ಬುಧವಾರ ರಾತ್ರಿ 12 ಗಂಟೆಯವರೆಗೆ ಡೆಡ್ ಲೈನ್ ಕೊಟ್ಟಿದ್ದೇವೆ. ಸರ್ಕಾರ ಲಿಖಿತ ರೂಪದ ಆದೇಶ ನೀಡದಿದ್ದರೆ ನಾಳೆಯಿಂದ (ಮಾ.16ರಿಂದ) ಮುಷ್ಕರಕ್ಕೆ ಸಿದ್ಧರಿದ್ದೇವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | KPTCL Strike : ಶೇ.20 ರಷ್ಟು ವೇತನ ಹೆಚ್ಚಳ ಘೋಷಿಸಿದ ಸರ್ಕಾರ; ಕೆಪಿಟಿಸಿಎಲ್ ನೌಕರರ ಮುಷ್ಕರ ಹಿಂದಕ್ಕೆ?