Site icon Vistara News

Iskcon Temple | ಇಸ್ಕಾನ್‌ನಲ್ಲಿ ಅದ್ಧೂರಿಯಾಗಿ ಕೃಷ್ಣ ಜನ್ಮಾಷ್ಟಮಿ ಆಚರಣೆ

Iskcon Temple

ಬೆಂಗಳೂರು : ರಾಜ್ಯಾದ್ಯಂತ ಅದ್ಧೂರಿಯಾಗಿ ಶುಕ್ರವಾರ (ಆ.19) ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ. ಕೃಷ್ಣನ ದರ್ಶನಕ್ಕಾಗಿ ಇಸ್ಕಾನ್ ದೇಗುಲದತ್ತ (Iskcon Temple) ಭಕ್ತ ಸಮೂಹ ಹರಿದು ಬರುತ್ತಿದೆ. ರಾಧಾಕೃಷ್ಣಚಂದ್ರ, ಕೃಷ್ಣಬಲರಾಮ, ನಿತ್ಯಾನಂದ ಪ್ರಭು, ಶ್ರೀಚೈತನ್ಯ ಮಹಾಪ್ರಭು, ಪ್ರಹ್ಲಾದ, ನರಸಿಂಹ, ಶ್ರೀನಿವಾಸ ಗೋವಿಂದ ದೇವರಿಗೆ ವಿಶೇಷ ಪೂಜೆ ಆಗಿದೆ.

ಬೆಳಗಿನ ಜಾವದಿಂದ ದೇವಾಲಯದಲ್ಲಿ ವಿಶೇಷ ಅಲಂಕಾರ, ಮಂಗಳಾರತಿ ಸೇರಿದಂತೆ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ರಾಧಾಕೃಷ್ಣನಿಗೆ ಪಂಚಾಮೃತ ಸೇರಿದಂತೆ ಏಳು ನದಿ ನೀರಿನಿಂದ ವಿಶೇಷ ಅಭಿಷೇಕ ಮಾಡಲಾಗಿದೆ. ಬೆಳಗಿನ ಜಾವ 4 ಗಂಟೆಯಿಂದ ಆರಂಭವಾಗಿರುವ ಕೃಷ್ಣನ ಆರಾಧನೆ, ವಿಶೇಷ ಪೂಜೆಗಳು ಮಧ್ಯ ರಾತ್ರಿ 12:30ರವರೆಗೆ ನಡೆಯಲಿವೆ.

ಕೃಷ್ಣ ಜನ್ಮಾಷ್ಟಮಿ ನಿಮಿತ್ತ ರಾಧಾಕೃಷ್ಣರಿಗೆ, ಹೂವಿನ ಅಲಂಕಾರದ ಜತೆ ವಿಶೇಷ ಪೂಜೆ ಆರಂಭಗೊಂಡಿದೆ. ಮಹಾ ಮಂಗಳಾರತಿ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ರಾಧಾಕೃಷ್ಣನಿಗೆ ಚಾಮರ ಸೇವೆ ಆಗಲಿದ್ದು ನೂರಾರು ಸಂಖ್ಯೆಯಲ್ಲಿ ಬಂದ ಭಕ್ತರಿಂದ ಕೃಷ್ಣ ಭಜನೆ ನೆರವೇರಲಿದೆ.

ಇದನ್ನೂ ಓದಿ | Festive Fashion | ಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಸಾಂಪ್ರದಾಯಿಕ ಉಡುಗೆ ಸಾಥ್‌

Exit mobile version