Site icon Vistara News

Pathdarshi Book: ಶ್ರೀ ಕೃಷ್ಣನ ಮಾತಿನಂತೆ ಕಲಿಯುಗದ ಕೃಷ್ಣಭಟ್ಟರು ನಡೆದು ತೋರಿಸಿದ್ದಾರೆ: ದತ್ತಾತ್ರೇಯ ಹೊಸಬಾಳೆ

Pathdarshi Book Released at Bangalore

ಬೆಂಗಳೂರು: ಪ್ರೊ.ಪಿ.ವಿ. ಕೃಷ್ಣಭಟ್ಟರನ್ನು ಕಾರ್ಯಕ್ರಮಗಳಲ್ಲಿ ನೋಡಿದ್ದೇನೆ. ಅವರ ಹೆಗಲ ಮೇಲೆ ವಾಜಪೇಯಿಯವರು ಕೈಹಾಕಿ ನಡೆದದ್ದನ್ನು ಕಂಡಿದ್ದೇನೆ. ಅವರ ಜತೆ ಜೈಲಿನಲ್ಲೂ ಕಳೆದಿದ್ದೇನೆ. ಅವರೊಂದಿಗೆ ಚಿಂತನೆ, ಸಂಘಟನೆಯ ಕಾರ್ಯವನ್ನು ಹಂಚಿಕೊಂಡ ಭಾಗ್ಯಶಾಲಿಗಳಲ್ಲಿ ನಾನೂ ಒಬ್ಬ. ದ್ವಾಪರಯುಗದ ಶ್ರೀ ಕೃಷ್ಣನ ಮಾತಿನಂತೆ ಕಲಿಯುಗದ ಕೃಷ್ಣಭಟ್ಟರು ನಡೆದು ತೋರಿಸಿದ್ದಾರೆ ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.

ನಗರದ ಅರಮನೆ ರಸ್ತೆಯ ಭಾರತೀಯ ಸ್ಕೌಟ್ಸ್‌ ಭವನದಲ್ಲಿ ಆಯೋಜಿಸಿದ್ದ ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಕುಲಾಧಿಪತಿ ಡಾ.ಪಿ.ವಿ. ಕೃಷ್ಣ ಭಟ್‌ ಅವರ ಕುರಿತ ʼಪಥದರ್ಶಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷ್ಣಭಟ್ಟರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ತಿಳಿಯಲು ಆಗಲ್ಲ. ಅವರು ನಾಡು, ಸಂಘಟನೆ ಹಾಗೂ ವಿಚಾರದ ಸಂಪತ್ತು ಎಂದರು.

ಕೃಷ್ಣಭಟ್ಟರೊಂದಿಗೆ ಬಳ್ಳಾರಿ, ಅಸ್ಸಾಂ ಜೈಲಲ್ಲೂ ನಾನಿದ್ದೆ | Dattatreya Hosabale Speech | Vistara News

ಇದನ್ನೂ ಓದಿ | ವಿಸ್ತಾರ ಅಂಕಣ: ಮುಸ್ಲಿಂ ಮಹಿಳೆಯರ ಜತೆ ರಕ್ಷಾ ಬಂಧನ ಹಾಗೂ ಸಂವಿಧಾನದ ಆಶಯ

ಮಾಜಿ ಸಚಿವ ಪಿ.ಜಿ.ಆರ್‌ ಸಿಂಧ್ಯಾ ಮಾತನಾಡಿ, ನನಗೆ ಇದು ಒಂದು ವಿಶೇಷ ಸಂದರ್ಭವಾಗಿದೆ. ಕೃಷ್ಣ ಭಟ್ ಅವರದ್ದು ತುಂಬಾ ಪರಿಶುದ್ಧವಾದ ಜೀವನ ಪದ್ಧತಿ. ಅವರ ಬಗೆಗಿನ ಎಲ್ಲ ವಿಚಾರ ಸೇರಿಸಿ ಈ ಪಥದರ್ಶಿ ಪುಸ್ತಕ ಲೋಕಾರ್ಪಣೆ ಮಾಡುತ್ತಿರುವುದು ತುಂಬಾ ಸಂತೋಷ ತಂದಿದೆ. ಅವರು ಮತ್ತು ನಮ್ಮಂತಹ ರಾಜಕಾರಣಿಗಳ ನಡುವೆ ಹೋಲಿಕೆ ಮಾಡುವುದು ಅಸಾಧ್ಯ ಎಂದು ತಿಳಿಸಿದರು.

ದತ್ತಾತ್ರೇಯ ಹೊಸಬಾಳೆ ಹಾಗೂ ಪ್ರೊ.ಪಿ.ವಿ. ಕೃಷ್ಣಭಟ್

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ನಾನು ಕೂಡ ಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಬೆಳೆದಂತಹ ವ್ಯಕ್ತಿ. ಹಲವರು ವಿದ್ಯಾರ್ಥಿಗಳು, ರಾಜಕೀಯ ನಾಯಕರು, ಸಾಮಾಜಿಕ ನಾಯಕರು ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಅವರು ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿ ಎಬಿವಿಪಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಸದನದಲ್ಲಿ ಮಾತನಾಡುವಾಗ ಧನ್ಯತಾ ಭಾವ ಮೂಡುತ್ತಿತ್ತು. ಅವರ ಈ ಪುಸ್ತಕ ಮುಂದಿನ ಪೀಳಿಗೆಗೆ ದಾರಿ ದೀಪವಾಗಿದೆ. ಅವರು ಲಕ್ಷಾಂತರ ಜನರಲ್ಲಿ ದೇಶ ಪ್ರೇಮದ ಬೀಜ ಬಿತ್ತಿದ್ದಾರೆ. ನಮ್ಮಂತಹ ಸಾಕಷ್ಟು ಮಂದಿ ಬಿಜೆಪಿ ನಾಯಕರಿಗೆ ಅವರು ಪ್ರೇರಣೆ ಎಂದು ತಿಳಿಸಿದರು.

ಇದನ್ನೂ ಓದಿ | HD Kumaraswamy : ನಿಲ್ಲದ ಎಚ್‌ಡಿಕೆ ದಾಳಿ; ನಾಯಕರ ಹೆಸರು ಹೇಳಿ ಹೇಳಿ ಅಟ್ಯಾಕ್‌; ಮೋದಿ ಕೈಗೆ ಕೊಡ್ತಾರಾ ನೈಸ್‌ ದಾಖಲೆ?

ಕೃಷ್ಣಭಟ್ಟರೊಂದಿಗೆ ಬಳ್ಳಾರಿ, ಅಸ್ಸಾಂ ಜೈಲಲ್ಲೂ ನಾನಿದ್ದೆ | Dattatreya Hosabale Speech | Vistara News

ಪ್ರೊ.ಪಿ.ವಿ. ಕೃಷ್ಣಭಟ್ ಅವರು ಮಾತನಾಡಿ, ನನ್ನ ಬಗ್ಗೆ ಅನೇಕರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಆದರೆ ಅದಕ್ಕೆ ನಾನೆಷ್ಟು ಅರ್ಹ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಇಂಗ್ಲಿಷ್‌ನಲ್ಲಿ ಲವ್ ಇಸ್ ಬ್ಲೈಂಡ್ ಎಂಬ ಮಾತಿದೆ. ಆದರೆ ಇಲ್ಲಿ ಇವರ ಪ್ರೀತಿ ಅದನ್ನು ಮೀರಿದೆ. ನಾನು ಹುಟ್ಟಿದ್ದು ಒಂದು ಕುಗ್ರಾಮದಲ್ಲಿ. ನಂತರ ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ಮುಗಿಸಿದೆ. ನನ್ನ ತಾಯಿಯವರ ಆರ್ಶೀವಾದದಿಂದ ಎಲ್ಲಾ ಆಯಿತು. ಬಾಲ್ಯದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಬಂದೆ. ಸಂಘವು ಜೀವನದ ಪಾಠ ಕಲಿಸಿಕೊಟ್ಟಿತು ಎಂದು ಹೇಳಿದರು.

ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್, ವಿ. ಮುರಳೀಧರನ್ ಸೇರಿ ಹಲವರು ಭಾಗಿಯಾಗಿದ್ದರು.

Exit mobile version