Site icon Vistara News

ತ್ರಿವರ್ಣದ ಬೆಳಕಿನಲ್ಲಿ ಮಿಂಚುತ್ತಿದೆ KRS ಡ್ಯಾಮ್‌

KRS ಡ್ಯಾಮ್‌

ಮಂಡ್ಯ: KRS ಡ್ಯಾಮ್‌ ಭರ್ತಿಯಾಗುವ ಅಂಚಿಗೆ ತಲುಪಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ತ್ರಿವರ್ಣದ ಬೆಳಕಿನಲ್ಲಿ ಕನ್ನಂಬಾಡಿ ಕಟ್ಟೆ ಮಿಂಚುತ್ತಿದೆ.

ಡ್ಯಾಮ್‌ನಿಂದ ಹೊರಗೆ ಹೋಗುವ ನೀರಿನ ಗೇಟ್‌ಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಗಮನ ಸೆಳೆಯುವಂತಿದೆ. ವರ್ಣರಂಜಿತ ದೀಪಾಲಂಕಾರದ ವೈಯ್ಯಾರದೊಂದಿಗೆ ನೀರಿನ ಹರಿವು ಕಣ್ಮನ ಸೆಳೆಯುತ್ತಿದೆ.

ಹೊರಹರಿವು ಹೆಚ್ಚಳ
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ನೀರಿನ ಹೊರ ಹರಿವು ಹೆಚ್ಚಳವಾಗಿದೆ. ಹೀಗಾಗಿ ಜಲಾಶಯ ಎದುರಿನ ಉತ್ತರ ಬೃಂದಾವನಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಕಾವೇರಿ ನೀರಾವರಿ ನಿಗಮ ಎಲ್ಲ ಮಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

ಪ್ರವಾಸಿಗನ ರಕ್ಷಣೆ‌
ಭಾನುವಾರ KRS ಡ್ಯಾಮ್‌ನಿಂದ 25 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡಲಾಗಿತ್ತು.ಈ ಪರಿಣಾಮ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ಬಲಮುರಿಯಲ್ಲಿ ಪ್ರವಾಸಿಗರೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಸ್ಥಳೀಯರ ತಂಡವು ಅವರನ್ನು ರಕ್ಷಿಸಿದೆ. ಸ್ಥಳೀಯ ನಿವಾಸಿ ಪ್ರಶಾಂತ್ ಹಾಗೂ‌ ಸ್ನೇಹಿತರು ಹಗ್ಗದ ಸಹಾಯದಿಂದ ಕೊಚ್ಚಿ ಹೋಗುತ್ತಿದ್ದ ಪ್ರವಾಸಿನನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: Rain News | ಮಳೆ ಆರ್ಭಟ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ 4 ದಿನ ರೆಡ್ ಅಲರ್ಟ್, ಸಂಚಾರಕ್ಕೆ ಕಂಟಕ

Exit mobile version