Site icon Vistara News

Karnataka election 2023: ಕೆಆರ್‌ಪಿ ಪಕ್ಷಕ್ಕೆ ಸೇರ್ಪಡೆಯಾದ ಬಳ್ಳಾರಿ ಪಾಲಿಕೆ ಸದಸ್ಯ ಕೆ.ಎಸ್.ಅಶೋಕ್

Karnataka election 2023 KS Ashok Member of Ballari Corporation joins KRP party

ಬಳ್ಳಾರಿ: ರಾಜ್ಯ ವಿಧಾನಸಭಾ ಚುನಾವಣೆ (Karnataka election 2023 ) ದಿನದಿಂದ ದಿನಕ್ಕೆ ರಂಗೇರುತಿದ್ದು, ಪಕ್ಷಾಂತರ ಪರ್ವವೂ ಮುಂದುವರಿದಿದೆ, ನಗರದಲ್ಲಿ ಭಾನುವಾರ 18ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಕೆ.ಎಸ್.ಅಶೋಕ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಿ ಅರುಣ ಜನಾರ್ದನ ರೆಡ್ಡಿ ಅವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಮಹಾನಗರ ಪಾಲಿಕೆ ಸದಸ್ಯ ಕೆ.ಎಸ್.ಅಶೋಕ್ ಸೇರ್ಪಡೆಯಾದರು.

ಇದನ್ನೂ ಓದಿ: ವಧುವಿನ ಹಣೆಗೆ ಸಿಂಧೂರ ಇಡುವ ಬದಲು ಎಲ್ಲೆಲ್ಲೋ ಸಿಂಪಡಿಸಿದ ವರ; ಮದುವೆಯೇ ಬೇಡವೆಂದು ಎದ್ದು ನಡೆದ ಯುವತಿ

ಕೆಆರ್‌ಪಿಪಿಗೆ ಸೇರ್ಪಡೆಯಾದ ಕೆ.ಎಸ್.ಅಶೋಕ್ ಅವರ ಸಹೋದರ ಕೆ.ಎಸ್‌.ದಿವಾಕರ್‌ ಬಿಜೆಪಿ ಪಕ್ಷದಿಂದ ಸಂಡೂರು ಕ್ಷೇತ್ರಕ್ಕೆ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು ಆದರೆ ಅವರಿಗೆ ಟಿಕೆಟ್‌ ದೊರಕದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕೆಆರ್‌ಪಿ ಪಕ್ಷಕ್ಕೆ ಸೇರ್ಪಡೆಯಾಗಿ ಸಂಡೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಬೆನ್ನಲ್ಲೆ ಪಾಲಿಕೆ ಕಾರ್ಪೊರೇಟರ್‌ ಕೆ.ಎಸ್.ಅಶೋಕ್ ಬಿಜೆಪಿ ತೊರೆದು ಕೆಆರ್‌ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: Maoists killed: ಪೊಲೀಸರ ಮೇಲೆ ದಾಳಿಗೆ ಹೊಂಚು ಹಾಕಿದ್ದ ಇಬ್ಬರು ನಕ್ಸಲರ ಹತ್ಯೆ

ವಿವಿಧೆಡೆ ಚುನಾವಣಾ ಪ್ರಚಾರ

ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಿ ಅರುಣ ಜನಾರ್ದನ ರೆಡ್ಡಿ, ನಗರದ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿ ಈ ಬಾರಿಯ ಚುನಾವಣೆಯಲ್ಲಿ ತಮಗೆ ಮತ ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಈ ವೇಳೆ ಕೆಆರ್‌ಪಿಪಿಗೆ ಸೇರ್ಪಡೆಯಾದ ಕೆ.ಎಸ್.ಅಶೋಕ್, ಇತರರಿದ್ದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Exit mobile version