ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(KSOU) ಗಲಾಟೆ ಪ್ರಕರಣದ ತನಿಖೆ ಕಾಯ್ದಿರಿಸಿ ಸಹಾಯಕ ಕುಲಸಚಿವ ಪ್ರದೀಪ್ ಗಿರಿ ಅವರನ್ನು ಅಮಾನತು ಮಾಡಿ ಕೆಎಸ್‌ಒಯು ಕುಲಸಚಿವ ಪ್ರೊ. ರಾಜಣ್ಣ ಆದೇಶ ಹೊರಡಿಸಿದ್ದಾರೆ.
ಸಹಾಯಕ ಕುಲಸಚಿವ ಪ್ರದೀಪ್ ಗಿರಿ ಸಕಾಲಕ್ಕೆ ಕೆಲಸಕ್ಕೆ ಬರುವುದಿಲ್ಲ. ಇದನ್ನೇ ಅಭ್ಯಾಸ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಪ್ರದೀಪ್ ಗಿರಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕಚೇರಿಗೆ ಬಂದಿದ್ದು, ಊಟದ ವಿರಾಮಕ್ಕಿಂತ ತಡವಾಗಿ ಆಗಮಿಸಿದ್ದಾರೆ. ಇದನ್ನು ಪ್ರಶ್ನಿಸಿದ ಕುಲಪತಿ ವಿರುದ್ಧ ಸಹಾಯಕ ಕುಲಸಚಿವ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಲೂ ಮುಂದಾಗಿದ್ದಾರೆ. ಇದನ್ನು ಪರಿಗಣಿಸಿ ತನಿಖೆ ಬಾಕಿ ಇಟ್ಟು ಅಮಾನತು ಮಾಡಲಾಗಿದೆ ಎಂದು ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ | ಮೈಸೂರು ಸ್ಟಾರ್ಟಪ್ ಪೆವಿಲಿಯನ್ ಆಗಸ್ಟ್ 5-7ಕ್ಕೆ, ನವ್ಯೋದ್ಯಮಗಳ ಸಂಗಮ