Site icon Vistara News

Ganesha Chaturthi 2023 : ಗೌರಿ-ಗಣೇಶ ಹಬ್ಬಕ್ಕಾಗಿ ಪ್ರಯಾಣಿಕರಿಗೆ KSRTC ಗುಡ್ ನ್ಯೂಸ್; 1200 ಹೆಚ್ಚುವರಿ ಬಸ್‌!

KSRTC BUS for Ganesha Chaturthi 2023

ಬೆಂಗಳೂರು: ಇದೇ ಸೆಪ್ಟೆಂಬರ್‌ 18-19ಕ್ಕೆ ಗೌರಿ-ಗಣೇಶ ಹಬ್ಬ (Ganesha Chaturthi 2023) ಆಚರಿಸಲ್ಪಡುತ್ತಿದೆ. ವಾರದ ಮೊದಲ ದಿನ ಹಬ್ಬವಾದರೂ ಇದರ ಹಿಂದೆ ಶನಿವಾರ ಹಾಗೂ ಭಾನುವಾರ ಬಂದಿರುವುದರಿಂದ ವೀಕೆಂಡ್‌ ಟ್ರಿಪ್‌ (Weekend Trip) ಮಾಡುವವರು ಹೆಚ್ಚಿರುತ್ತಾರೆ. ಇದೇ ವೇಳೆ ಖಾಸಗಿ ಬಸ್‌ಗಳ ದರ (Private Bus Fare) ದುಪ್ಪಟ್ಟಾಗಿದೆ. ಈ ಎಲ್ಲ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ (KSRTC) ಗುಡ್ ನ್ಯೂಸ್ ಕೊಟ್ಟಿದೆ. ಹಬ್ಬದ ಸಲುವಾಗಿ 1,200 ವಿಶೇಷ ಬಸ್ ಅನ್ನು ಪ್ರಯಾಣಕ್ಕಾಗಿ ನಿಯೋಜನೆ ಮಾಡಿದೆ.

ಸೆಪ್ಟೆಂಬರ್ 15ರಿಂದ ಸೆಪ್ಟೆಂಬರ್ 17 ರವರೆಗೆ ಹೆಚ್ಚುವರಿ ಬಸ್ ಸಂಚಾರ ಮಾಡಲಿದ್ದು, ಬೆಂಗಳೂರಿನಿಂದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ಅನ್ನು ನಿಯೋಜನೆ ಮಾಡಲಾಗಿದೆ. ಹಬ್ಬ ಹಾಗೂ ವೀಕೆಂಡ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಸಾಧ್ಯತೆ ಇರುವುದರಿಂದ ಮುಂಜಾಗ್ರತೆಯಿಂದ ಈ ಕ್ರಮ ವಹಿಸಲಾಗಿದೆ.

ಇದನ್ನೂ ಓದಿ: Karnataka Politics : ಸಿಂಗಲ್‌ ಸೀಟಿಗೂ ದಿಕ್ಕಿಲ್ಲದ ಕಾಂಗ್ರೆಸ್‌ ಕೈಕೈ ಪರಚಿಕೊಳ್ಳುತ್ತಿದೆ; ದಳ ಎದುರೇಟು

ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಕುಂದಾಪುರ, ಶೃಂಗೇರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿ ಹಲವು ಜಿಲ್ಲೆಗಳಿಗೆ ವಿಶೇಷ ಬಸ್ ಅನ್ನು ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಬುಕ್ಕಿಂಗ್‌ಗೂ ಅವಕಾಶ ಕಲ್ಪಿಸಲಾಗಿದೆ.

ರಿಯಾಯಿತಿ ಘೋಷಣೆ

4 ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಬುಕ್ಕಿಂಗ್ ಮಾಡಿದರೆ ಶೇ.5ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತದೆ. ಹೋಗುವಾಗ, ಬರುವಾಗ ಎರಡೂ ಕಡೆ ಬುಕ್ಕಿಂಗ್ ಮಾಡಿದರೆ ಶೇ. 10ರಷ್ಟು ರಿಯಾಯಿತಿ ನೀಡುವುದಾಗಿ ಕೆಎಸ್‌ಆರ್‌ಟಿಸಿ ಹೇಳಿದೆ.

ಇದನ್ನೂ ಓದಿ: Namma Metro : ಗಣೇಶ ಹಬ್ಬಕ್ಕೆ ಕೆಂಗೇರಿ-ಚಲ್ಲಘಟ್ಟ, ಬೈಯಪ್ಪನಹಳ್ಳಿ- ಕೆಆರ್‌ಪುರಂ ಮುಕ್ತ ಸಂಚಾರ!

ಹೊರ ರಾಜ್ಯದಿಂದಲೂ ಬುಕ್ಕಿಂಗ್‌ಗೆ ಅವಕಾಶ

ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಗೋವಾಗಳ ಕಚೇರಿಯಿಂದಲೂ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದ್ದು, ಬುಕ್‌ ಮಾಡಿಕೊಳ್ಳುವ ಮೂಲಕವೂ ಪ್ರಯಾಣ ಮಾಡಬಹುದಾಗಿದೆ.

Exit mobile version