ಬೆಂಗಳೂರು, ಕರ್ನಾಟಕ: ಬೆಳಗಾವಿ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಕುಡುಚಿ ಕ್ಷೇತ್ರದಲ್ಲಿ ಬಿಜೆಪಿಯ ಪಿ ರಾಜೀವ್ ಸೋಲು ಅನುಭವಿಸಿದ್ದಾರೆ. ಸತತ ಎರಡು ಬಾರಿ ಗೆದ್ದಿದ್ದ ರಾಜೀವ್ ಅವರಿಗೆ ಕಾಂಗ್ರೆಸ್‌ನ ಮಹೇಂದ್ರ ತಮ್ಮಣ್ಣನವರ್ ಅವರು ಸೋಲಿನ ರುಚಿ ತೋರಿಸಿದ್ದಾರೆ. ತಮ್ಮಣ್ಣನವರ್ ಅವರು 84686 ಮತಗಳನ್ನು ಪಡೆದುಕೊಂಡರೆ, ಪಿ ರಾಜೀವ್ ಅವರಿಗೆ 59612 ಮತಗಳು ಬಂದಿವೆ. 25 ಸಾವಿರ ಚಿಲ್ಲರೆ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಂಡಿದ್ದಾರೆ(Kudachi Results).
2023ರ ಚುನಾವಣೆಯ ಅಭ್ಯರ್ಥಿಗಳು
ಬಿಜೆಪಿಯ ಹಾಲಿ ಶಾಸಕ ಪಿ ರಾಜೀವ್ ಅವರು ಮತ್ತೆ ಕಣದಲ್ಲಿದ್ದಾರೆ. ಮಹೇಂದ್ರ ಕೆ ತಮ್ಮಣ್ಣವರು ಸ್ಪರ್ಧಿಸಿದ್ದಾರೆ.
2018ರ ಫಲಿತಾಂಶ ಏನಾಗಿತ್ತು?
2008ರಲ್ಲಿ ಈ ಕ್ಷೇತ್ರವು ರಚನೆಯಾಗಿದ್ದು, ಎಸ್ ಸಿ ಮೀಸಲು ಕ್ಷೇತ್ರವಾಗಿದೆ. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಮ್ ಭೀಮರಾವ್ ಘಾಟಗೆ ಅವರು ಗೆದ್ದಿದ್ದರು. ಆ ಬಳಿಕ ನಡೆದ 2013 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿಯ ಪಿ ರಾಜೀವ್ ಅವರು ಗೆದ್ದಿದ್ದಾರೆ. 2013ರಲ್ಲಿ ಅವರು ಶ್ರೀರಾಮಲು ಅವರ ಪಕ್ಷದಿಂದ ಆಯ್ಕೆಯಾಗಿದ್ದರೆ, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ವಿಜಯ ನಗೆ ಬೀರಿದ್ದರು. 2018ರಲ್ಲಿ ಪಿ ರಾಜೀವ್ ಅವರು 67781 ಮತಗಳನ್ನು ಪಡೆದುಕೊಂಡರೆ ಕಾಂಗ್ರೆಸ್‌ನ ಶಾಮ್ ಘಾಟಗೆ ಅವರು 52773 ಮತಗಳನ್ನು ಪಡೆದುಕೊಂಡು ಸೋತಿದ್ದರು.